ಭುವನೇಶ್ವರ್​:ಅಪ್ರಾಪ್ತನಿಗೆ ತನ್ನ ಬೈಕ್​ ಓಡಿಸಲು ಕೊಟ್ಟ ವ್ಯಕ್ತಿಯೋರ್ವ ಪಜೀತಿಗೆ ಸಿಲುಕಿದ್ದಾರೆ.ಓಡಿಶಾದ ಭದ್ರಕ್​ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಅಪ್ರಾಪ್ತನೋರ್ವ ದ್ವಿಚಕ್ರವಾಹನದಲ್ಲಿ ಇಬ್ಬರು ಸ್ನೇಹಿತರನ್ನು ಕೂರಿಸಿಕೊಂಡು, ಹೆಲ್ಮೆಟ್​ ಹಾಕದೆ ತಪ್ಪಾದ ದಿಕ್ಕಿನಲ್ಲಿ ಸಂಚಾರ ಮಾಡುತ್ತಿದ್ದ. ಈತನನ್ನು ಅಡ್ಡಗಟ್ಟಿದ ಟ್ರಾಫಿಕ್​ ಪೊಲೀಸರು ಭರ್ಜರಿ ದಂಡ ಹಾಕಿದ್ದಾರೆ. ಆದರೆ ಚಲನ್​ ವಿಧಿಸಿದ್ದು ಆ ಅಪ್ರಾಪ್ತನಿಗಲ್ಲ. ಆತನಿಗೆ ಬೈಕ್​ ಕೊಟ್ಟ ಮಾಲೀಕನಿಗೆ…!
2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ಬೈಕ್​ ಮಾಲೀಕನಿಗೆ ಹಾಕಿದ್ದು ಬರೋಬ್ಬರಿ 42,500 ರೂಪಾಯಿ ದಂಡ. ಅಪ್ರಾಪ್ತನಿಗೆ ಬೈಕ್​ ಓಡಿಸಲು ಕೊಟ್ಟಿದ್ದಲ್ಲದೆ, ಆತ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೇ ಇದಕ್ಕೆ ಕಾರಣ ಎಂದು ಟ್ರಾಫಿಕ್​ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
42, 500 ರೂಪಾಯಿ ಒಟ್ಟು ದಂಡದಲ್ಲಿ ಸಾಮಾನ್ಯ ಅಪರಾಧಕ್ಕಾಗಿ 500 ರೂ., ಸೂಕ್ತ ದಾಖಲೆಗಳೇ ಇಲ್ಲದ ಬೈಕನ್ನು ಅಪ್ರಾಪ್ತನಿಗೆ ಓಡಿಸಲು ಕೊಟ್ಟಿದ್ದಕ್ಕೆ 5000 ರೂ., ಅಪ್ರಾಪ್ತನ ಬಳಿ ಯಾವುದೇ ಡ್ರೈವಿಂಗ್ ಲೈಸೆನ್ಸ್​ ಇರದ ಕಾರಣಕ್ಕೆ 5000 ರೂ., ಅದರಲ್ಲೂ ವಾಹನ ದಟ್ಟಣೆ ಇರುವ ಸೂಕ್ಷ್ಮ ಪ್ರದೇಶದಲ್ಲಿ ಸಂಚಾರ ಮಾಡಿದ್ದಕ್ಕೆ 5000 ರೂ ಹಾಗೂ ಇಬ್ಬರನ್ನು ಕೂರಿಸಿಕೊಂಡಿದ್ದಕ್ಕೆ 1000 ಮತ್ತು ಹೆಲ್ಮೆಟ್​ ಹಾಕದೆ ಇರುವುದಕ್ಕೆ 1000 ರೂ.ವಿಧಿಸಲಾಗಿದೆ.
ಹಾಗೇ ಇದನ್ನೊಂದು ಬಾಲಾಪರಾಧ ಎಂದು ಪರಿಗಣಿಸಿ ಮೋಟಾರು ವಾಹನ ಕಾಯ್ದೆಯಡಿ 25, 000 ರೂ. ಸೇರಿ ಒಟ್ಟು 42,500 ರೂಪಾಯಿ ಚಲನ್ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.ಈ ಹಿಂದೆ ಕೂಡ ಅಪ್ರಾಪ್ತರಿಗೆ ಬೈಕ್​ ಓಡಿಸಲು ಕೊಟ್ಟಿದ್ದ ಇಬ್ಬರಿಗೆ ತಲಾ 26,000 ರೂ.ದಂಡವನ್ನು ವಿಧಿಸಲಾಗಿತ್ತು. ಅಂಗುಲ್​ ಹಾಗೂ ಕಟಕ್ ಜಿಲ್ಲೆಗಳಲ್ಲಿ ಪ್ರಕರಣ ನಡೆದಿತ್ತು ಎನ್ನಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 14 =
Remember me
