ಸಿಕ್ಕಿಂ ರಾಜ್ಯದ ಡೋಕ್ಲಾಮ್ ಗಡಿ ಪ್ರದೇಶದಲ್ಲಿ 2017ರ ಜೂನ್​ನಲ್ಲಿ ಚೀನಾ ಸೈನಿಕರು ರಸ್ತೆ ನಿರ್ವಿುಸಲು ಮುಂದಾದಾಗ ಭಾರತೀಯ ಸೈನಿಕರು ತಡೆದಿದ್ದರು. 2020ರ ಜೂನ್ 15ರಂದು ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಕಟ್ಟಿಗೆ ಮತ್ತು ಕಬ್ಬಿಣದ ಸರಳುಗಳನ್ನು ಬಳಸಿ ಚೀನಾ ಸೈನಿಕರು ಹಲ್ಲೆ ನಡೆಸಿದ್ದರು. ಇದರಿಂದಾಗಿ ಭಾರತದ 20 ಸೈನಿಕರು ಸಾವನ್ನಪ್ಪಿದರು. ಅರುಣಾಚಲ ಪ್ರದೇಶದ ತವಾಂಗ್ ಬಳಿಯ ಯಾಂಗ್​ತ್ಸೆಯಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ದಾಟಿ ಭಾರತದ ಪ್ರದೇಶದೊಳಗೆ ನುಗ್ಗಲು ಚೀನಾ ಸೈನಿಕರು ಪ್ರಯತ್ನಿಸಿದ ಘಟನೆ ಇದೇ ತಿಂಗಳ 9ರಂದು ನಡೆಯಿತು. ಈ ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಅಲ್ಪಪ್ರಮಾಣದಲ್ಲಿಗಾಯಗಳಾದವು.
ಈ ರೀತಿ ಗಡಿ ಪ್ರದೇಶದಲ್ಲಿ ಮೇಲಿಂದ ಮೇಲೆ ಕ್ಯಾತೆ ತೆಗೆಯುತ್ತಿರುವ ಹಾಗೂ ಅನೇಕ ವಿಷಯಗಳಲ್ಲಿ ಭಾರತ ವಿರೋಧಿ ನಿಲುವು ಹೊಂದಿರುವ ಚೀನಾಗೆ ಪಾಠ ಕಲಿಸುವ ನಿಟ್ಟಿನಲ್ಲಿ ಅದರೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಬೇಕೆಂಬ ಸಲಹೆಗಳು ವ್ಯಕ್ತವಾಗುತ್ತಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವಿಟರ್ ಪೋಸ್ಟ್ ನಲ್ಲಿ, ‘ಚೀನಾದೊಂದಿಗಿನ ನಮ್ಮ ವ್ಯಾಪಾರವನ್ನು ಏಕೆ ನಿಲ್ಲಿಸಬಾರದು? ಚೀನಾದಿಂದ ಆಮದು ಮಾಡಿಕೊಳ್ಳುವ ಬಹುತೇಕ ಸರಕುಗಳು ಭಾರತದಲ್ಲಿ ತಯಾರಾಗುತ್ತವೆ. ಇದರಿಂದ ಚೀನಾಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಜತೆಗೆ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತವೆ’ ಎಂದು ಹೇಳಿದ್ದಾರೆ.
ಆದರೆ, ವಾಸ್ತವ ಎಂದರೆ ಚೀನಾದೊಂದಿಗೆ ಗಡಿ ಘರ್ಷಣೆಗಳ ನಂತರದ ದಿನಗಳಲ್ಲಿ ಕೂಡ ಭಾರತವು ಆ ದೇಶದಿಂದ ಮಾಡಿಕೊಳ್ಳುವ ಆಮದು ಸರಕು-ಸೇವೆಗಳ ಪ್ರಮಾಣವು ದಾಖಲೆಯ ಎತ್ತರಕ್ಕೆ ಜಿಗಿಯುತ್ತ ಸಾಗಿರುವುದು. ಕಳೆದ 30 ತಿಂಗಳುಗಳ ಅಂಕಿ-ಅಂಶಗಳಿಂದ ಈ ವಿಷಯ ಸ್ಪಷ್ಟವಾಗುತ್ತದೆ.
ಕಬ್ಬಿಣ ಉಕ್ಕು ಹೆಚ್ಚು ಖರೀದಿ:2011 ಮತ್ತು 2021 ರ ನಡುವೆ ಚೀನಾದಿಂದ ಭಾರತದ ಬಂಡವಾಳ ಸರಕುಗಳ ಆಮದು ವರ್ಷಕ್ಕೆ ಸರಾಸರಿಯಾಗಿ ಶೇ. 10ರಷ್ಟು ಹೆಚ್ಚಾಗಿದೆ. 2021ರ ಜನವರಿ-ಆಗಸ್ಟ್ ಅವಧಿಯಲ್ಲಿ ಭಾರತವು 6129 ಕೋಟಿ ರೂಪಾಯಿ ಮೌಲ್ಯದ ಕಬ್ಬಿಣ ಮತ್ತು ಉಕ್ಕನ್ನು ಆಮದು ಮಾಡಿಕೊಂಡಿತ್ತು. 2022ರ ಇದೇ ಅವಧಿಯಲ್ಲಿ ಇದು 9442 ಕೋಟಿ ರೂಪಾಯಿ ತಲುಪಿದೆ. ಅಂದರೆ, ಶೇ. 54ರಷ್ಟು ಹೆಚ್ಚಳ. ಪ್ಲಾಸ್ಟಿಕ್ ಮತ್ತು ಪಾಸ್ಟಿಕ್ ಸಾಮಗ್ರಿಗಳ ಆಮದು ಕೂಡ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಯಂತ್ರೋಪಕರಣಗಳು ಮತ್ತು ಅವುಗಳ ಭಾಗಗಳ ಆಮದು ಶೇ. 37ರಷ್ಟು ಹೆಚ್ಚಾಗಿದೆ.
ಒಂದೇ ವರ್ಷದಲ್ಲಿ ಶೇ. 34 ಹೆಚ್ಚಳ:ಚೀನಾದೊಂದಿಗಿನ ಭಾರತದ ವ್ಯಾಪಾರವು 2020-2021ರಲ್ಲಿ 86.39 ಶತಕೋಟಿ ಡಾಲರ್ (7,15,538 ಕೋಟಿ ರೂಪಾಯಿ) ಇತ್ತು. 2021-2022ರಲ್ಲಿ ಇದು 115.83 ಶತಕೋಟಿ ಡಾಲರ್ (9,59,379 ಕೋಟಿ ರೂಪಾಯಿ) ದಾಟಿದೆ. ಅಂದರೆ, ಶೇಕಡಾ 34.06 ರಷ್ಟು ಹೆಚ್ಚಿದೆ ಎಂದು ವಾಣಿಜ್ಯ ಇಲಾಖೆ ಮಾಹಿತಿ ತೋರಿಸುತ್ತದೆ. 2010-2011ರಲ್ಲಿ ಚೀನಾ-ಭಾರತ ವ್ಯಾಪಾರವು ಶೇ. 35.82ರಷ್ಟು ಹೆಚ್ಚಳ ಕಂಡಿತ್ತು. ತದನಂತರ ದಾಖಲೆಯ ವಹಿವಾಟು ಹೆಚ್ಚಳ ಕಂಡಿರುವುದು 2021-22ರ ಸಾಲಿನಲ್ಲಿ. ಪ್ರಸಕ್ತ ಹಣಕಾಸು ವರ್ಷದ (2022-2023) ಮೊದಲ ಏಳು ತಿಂಗಳಲ್ಲಿ ಏಪ್ರಿಲ್ ನಿಂದ ಅಕ್ಟೋಬರ್​ವರೆಗೆ ಚೀನಾದೊಂದಿಗಿನ ಭಾರತದ ವ್ಯಾಪಾರವು 69.114 ಬಿಲಿಯನ್ ಡಾಲರ್ (5,72,447 ಕೋಟಿ ರೂಪಾಯಿ) ತಲುಪಿದೆ.
6 ಲಕ್ಷ ಕೋಟಿ ರೂ. ವ್ಯಾಪಾರ ಕೊರತೆ:2021-2022ರಲ್ಲಿ ಭಾರತವು ಒಟ್ಟಾರೆಯಾಗಿ 1035 ಶತಕೋಟಿ ಡಾಲರ್ (85,72,543 ಕೋಟಿ ರೂಪಾಯಿ) ವ್ಯಾಪಾರ ನಡೆಸಿದೆ. ಇದರಲ್ಲಿ ಚೀನಾದೊಂದಿಗೆ ನಡೆಸಿದ ವ್ಯಾಪಾರದ ಪ್ರಮಾಣ ಶೇ. 11.19ರಷ್ಟಿದೆ. ಅಮೆರಿಕದ ಜತೆ ನಡೆಸಿದ ವ್ಯಾಪಾರದ ಪ್ರಮಾಣ 119.48 ಶತಕೋಟಿ (9,89,611 ಕೋಟಿ ರೂಪಾಯಿ) ಇದೆ. ಭಾರತದೊಂದಿಗೆ ಅಮೆರಿಕದ ನಂತರ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ಚೀನಾ ಆಗಿದೆ. ಭಾರತವು ಅಮೆರಿಕದೊಂದಿಗೆ 32.85 ಶತಕೋಟಿ ಡಾಲರ್​ನಷ್ಟು (2,72,085 ಕೋಟಿ ರೂಪಾಯಿ) ಟ್ರೇಡ್ ಸರ್​ಪ್ಲಸ್ (ಹೆಚ್ಚುವರಿ ವ್ಯಾಪಾರ) ಹೊಂದಿದ್ದರೆ, ಚೀನಾದೊಂದಿಗೆ ಅದು 73.31 ಶತಕೋಟಿ ಡಾಲರ್ (6,07,201 ಕೋಟಿ ರೂಪಾಯಿ) ವ್ಯಾಪಾರ ಕೊರತೆಯನ್ನು ಹೊಂದಿದೆ. ಭಾರತವು ಅಮೆರಿಕದಿಂದ ಆಮದು ಮಾಡಿಕೊಂಡಿದ್ದಕ್ಕಿಂತ 32.85 ಶತಕೋಟಿ ಡಾಲರ್​ನಷ್ಟು ಹೆಚ್ಚಿನ ಪ್ರಮಾಣದ ಸರಕು-ಸೇವೆಗಳನ್ನು ರಫ್ತು ಮಾಡಿದೆ. ಆದರೆ, ಚೀನಾದೊಂದಿಗೆ ತಾನು ರಫ್ತು ಮಾಡಿದ್ದಕ್ಕಿಂತಲೂ 73.31 ಶತಕೋಟಿ ಡಾಲರ್​ನಷ್ಟು ಹೆಚ್ಚಿನ ಸರಕು-ಸೇವೆಗಳನ್ನು ಆಮದು ಮಾಡಿಕೊಂಡಿದೆ.
ಹೆಚ್ಚುತ್ತಲೇ ಸಾಗಿದೆ ಆಮದು:ಕೋವಿಡ್ ಲಾಕ್​ಡೌನ್ ಸಮಯದಲ್ಲಿ 2020ರ ಜೂನ್​ನಲ್ಲಿ ಚೀನಾದಿಂದ ಮಾಸಿಕ ಆಮದು ಕನಿಷ್ಠ ಮಟ್ಟವಾದ 3.32 ಶತಕೋಟಿ ಡಾಲರ್​ಗೆ (27,498 ಕೋಟಿ ರೂಪಾಯಿ) ತಲುಪಿತ್ತು. ಈ ಸಾಂಕ್ರಾಮಿಕದ ನಿರ್ಬಂಧಗಳನ್ನು ಸಡಿಲಿಸಿದ ನಂತರ ಆಮದು ಪ್ರಮಾಣ ಏರಲು ಪ್ರಾರಂಭಗೊಂಡು, 2020ರ ಜುಲೈನಲ್ಲಿ 5.58 ಶತಕೋಟಿ (46,217 ಕೋಟಿ ರೂಪಾಯಿ) ಡಾಲರ್​ಗೆ ಏರಿತು. ಈ ವರ್ಷದ ಜುಲೈನಲ್ಲಿ 10.24 ಶತಕೋಟಿ ಡಾಲರ್​ಗೆ (84,814 ಕೋಟಿ ರೂಪಾಯಿ) ತಲುಪಿ ಹೊಸ ದಾಖಲೆ ಬರೆದಿದೆ. ಚೀನಾದಿಂದ ಸರಾಸರಿ ಮಾಸಿಕ ಆಮದು ಪ್ರಮಾಣವು 2020-2021ರಲ್ಲಿ 44,975 ಕೋಟಿ ರೂಪಾಯಿಯಿಂದ 2021-2022ರಲ್ಲಿ 65,267 ಕೋಟಿ ರೂಪಾಯಿ ಏರಿಕೆಯಾಗಿದೆ. 2022-23ರ ಮೊದಲ ಏಳು ತಿಂಗಳುಗಳಲ್ಲಿ (ಏಪ್ರಿಲ್-ಅಕ್ಟೋಬರ್) ಇದು 71,314 ಕೋಟಿ ಡಾಲರ್ ತಲುಪಿದೆ. 2019-2020ರಲ್ಲಿ ಕೋವಿಡ್​ಪೂರ್ವ ಸಮಯದಲ್ಲಿ, ಸರಾಸರಿ ಮಾಸಿಕ ಆಮದು ಪ್ರಮಾಣವು 44,975 ಕೋಟಿ ರೂಪಾಯಿ ಆಗಿತ್ತು. ಭಾರತವು ಜನವರಿ ಮತ್ತು ಸೆಪ್ಟೆಂಬರ್ 2022 ರ ನಡುವೆ ಚೀನಾದಿಂದ 7,42,622 ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಭಾರತದಿಂದ ಕಡಿಮೆ ಆಮದು ಹಾಗೂ ಹೆಚ್ಚು ರಫ್ತು ಮಾಡುವ ಮೂಲಕ ಚೀನಾ ಇತ್ತೀಚಿನ ವರ್ಷಗಳಲ್ಲಿ ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ಭಾರತದೊಂದಿಗಿನ ಹೆಚ್ಚಿನ ವ್ಯಾಪಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳು ಚೀನಾದಲ್ಲಿ ಸೃಷ್ಟಿಯಾಗುತ್ತಿವೆ.
ರಫ್ತು ಕುಸಿತ:ಏತನ್ಮಧ್ಯೆ, 2022ರ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ಚೀನಾಕ್ಕೆ ಭಾರತದ ರಫ್ತುಗಳು ಶೇ. 36.4 ಕುಸಿದು 13.97 1,15,709 ಕೋಟಿ ರೂಪಾಯಿ ತಲುಪಿದೆ.
ಈ ಪ್ರದೇಶದಲ್ಲಿ ಪದೇಪದೆ ಅಪಘಾತ; 3 ದಿನಗಳಲ್ಲಿ ನಾಲ್ಕೈದು ಆ್ಯಕ್ಸಿಡೆಂಟ್: ಇಂದು ಮತ್ತೊಂದು ಸಾವು

ರಸ್ತೆ ಸಂಪರ್ಕ ಇಲ್ಲದ್ದರಿಂದ ರೋಗಿಯನ್ನು 5 ಕಿ.ಮೀ. ದೂರ ಹೊತ್ತುಕೊಂಡು ಆಸ್ಪತ್ರೆಗೆ ಹೋದ ಕುಟುಂಬಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
