ರಾಂಚಿಯಿಂದ 25 ಕಿ.ಮೀ. ದೂರದಲ್ಲಿ ಚಮ್​ಗುರು ಎಂಬ ಗ್ರಾಮವಿದೆ. ಈ ಗ್ರಾಮದ ವಿಶೇಷವೆಂದರೆ ಇಲ್ಲಿ ಮೇಕೆಗಳು ಮನುಷ್ಯರಿಗಿಂತ 10 ಪಟ್ಟು ಹೆಚ್ಚು ವಾಸಿಸುತ್ತಿವೆ! ಹೌದು, ನೀವು ಈ ಗ್ರಾಮವನ್ನು ಪ್ರವೇಶಿಸಿದ ತಣ ನಿಮ್ಮನ್ನು ಸ್ವಾಗತಿಸುವುದು ಮೇಕೆಗಳೇ. ನೀವಲ್ಲಿ ಎಲ್ಲೇ ನೋಡಿದರೂ ಮೇಕೆಗಳೇ ಕಾಣಸಿಗುತ್ತವೆ. ಯಾಕೆ ಅಂತೀರಾ, ಮುಂದೆ ಓದಿ…
ಈ ಮೊದಲೇ ಹೇಳಿದ ಹಾಗೆ ಚಮ್​ಗುರು ಗ್ರಾಮದಲ್ಲಿ ಮೇಕೆಗಳ ಸಂಖ್ಯೆ ಹೆಚ್ಚಿದೆ. ಏಕೆಂದರೆ ಚಮ್​ಗುರುವಿನಲ್ಲಿ ಶೇ 90 ರಷ್ಟು ಕುಟುಂಬಗಳ ಜೀವನ ಮೇಕೆ ಸಾಕಣೆಯಿಂದ ನಡೆಯುತ್ತಿದೆ. ಇಲ್ಲಿ ಸುಮಾರು 300 ಮನೆಗಳಿದ್ದು, 1000 ಜನರು ವಾಸಿಸುತ್ತಿದ್ದಾರೆ. ಆದರೆ ಮೇಕೆಗಳ ಸಂಖ್ಯೆ 10,000 ಕ್ಕಿಂತ ಹೆಚ್ಚು. ಇಲ್ಲಿ ಪ್ರತಿ ಮನೆಯಲ್ಲೂ 30 ರಿಂದ 45 ಮೇಕೆಗಳು ಸಿಗುತ್ತವೆ. ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಮೇಕೆ ಮೇಯಿಸುತ್ತಾರೆ. ಏಕೆಂದರೆ ಇದೇ ಜೀವನಾಧಾರ. ಇಲ್ಲಿ ಬಡತನ ಎಷ್ಟಿದೆಯೆಂದರೆ ಇಷ್ಟವಿರದಿದ್ದರೂ ಮಕ್ಕಳು ಮೇಕೆ ಸಮೇತ ಹೊಲಕ್ಕೆ ಹೋಗಲೇಬೇಕು. ಅಂದಹಾಗೆ ಗ್ರಾಮಸ್ಥರಿಗೆ ಮೇಕೆ ಸಾಕಾಣಿಕೆ ಬಿಟ್ಟು, ಬೇರೆ ಯಾವುದರ ಬಗ್ಗೆಯೂ ತಿಳಿದಿಲ್ಲವಂತೆ. ಮೊದಲಿನಿಂದಲೂ ಮೇಕೆ ಸಾಕಣೆ ಮಾತ್ರ ಗೊತ್ತಿದ್ದು, ಅದನ್ನೇ ಮಾಡುತ್ತಾ ಬರಲಾಗಿದೆ. ಮದುವೆಯಿಂದ ಹಿಡಿದು ವಿದ್ಯಾಭ್ಯಾಸದವರೆಗೆ ಎಲ್ಲವೂ ಮೇಕೆ ಮಾರಾಟದಿಂದಲೇ ನಡೆಯುತ್ತದೆ. ಮೇಕೆಯೇ ಎಟಿಎಂ ಯಂತ್ರ. ಹಣ ಬೇಕಾದಾಗ ಮೇಕೆಗಳನ್ನು ಮಾರುತ್ತಾರೆ.
ಮೇಕೆಗಳನ್ನು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಜನರು ಮದುವೆ ಮತ್ತು ಹಬ್ಬಗಳ ಸಂದರ್ಭದಲ್ಲಿ ಮಾತ್ರ ಮನೆಯಿಂದ ಖರೀದಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಹೆಚ್ಚು ಮಾರಾಟ ನಡೆಯುತ್ತದೆ. ಮೇಕೆಗಳನ್ನು ತೂಕ ಮಾಡಿ ಮಾರಾಟ ಮಾಡಲಾಗುತ್ತದೆ. ಶಿಣದ ಕೊರತೆಯಿಂದ ಜನರು ಇನ್ನೂ ಮೇಕೆಯನ್ನು ಮೇಯಿಸುತ್ತಾ ಬಂದಿದ್ದಾರೆ.
ಅಂದಹಾಗೆ ಚಮ್​ಗುರು ಗ್ರಾಮವನ್ನು ಬಿರ್ಸಾ ಕೃಷಿ ವಿಶ್ವವಿದ್ಯಾಲಯವು ದತ್ತು ತೆಗೆದುಕೊಂಡಿದೆ. ‘ವಿಶ್ವವಿದ್ಯಾಲಯಗಳು ದತ್ತು ಪಡೆದಿರುವುದರಿಂದ ಮೇಕೆ ಸಾಕಣೆಗೆ ಅನುಕೂಲವಾಗಿದೆ’ ಎನ್ನುತ್ತಾರೆ ಗ್ರಾಮದ ನಿವಾಸಿಗಳು. ಮೊದಲೆಲ್ಲಾ ಮೇಕೆಗೆ ಔಷಧ, ಆಹಾರದ ವ್ಯವಸ್ಥೆ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಆದರೆ ವಿಶ್ವವಿದ್ಯಾಲಯದ ಸಹಕಾರದಿಂದ ಹೆಚ್ಚಿನ ತೊಂದರೆಯಾಗುತ್ತಿಲ್ಲವಂತೆ. ‘ಗ್ರಾಮದ ಜನರಿಗೆ ಮೇಕೆ ಸಾಕಣೆ ಬಹಳ ಚೆನ್ನಾಗಿ ಗೊತ್ತಿದೆ’ ಎನ್ನುತ್ತಾರೆ ಬಿರ್ಸಾ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಅದಕ್ಕಾಗಿಯೇ ಮೇಕೆ ಸಾಕಣೆಗಾಗಿ ಎಲ್ಲಾ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರಿಗೆ ಸಹಾಯ ಮಾಡಲಾಗುತ್ತಿದೆ. ಇದರೊಂದಿಗೆ ಸರ್ಕಾರದ ಹಲವು ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
