ನವದೆಹಲಿ:ಕ್ಯಾಲೆಂಡರ್ ವರ್ಷ 2021 ಉರುಳಿಹೋಗಿದೆ. ಇದು ಜಗತ್ತಿನ ಬಹುತೇಕ ಅತಿಶ್ರೀಮಂತರ ಪಾಲಿಗೆ ಉತ್ತಮ ವರ್ಷವಾಗಿತ್ತು. ಭಾರತದಲ್ಲಿ ಮುಕೇಶ್ ಅಂಬಾನಿಗಿಂತ ಅದಾನಿ ಮತ್ತು ಅಜೀಂ ಪ್ರೇಮ್ ಸಂಪತ್ತು ಹೆಚ್ಚು ವೃದ್ಧಿಯಾಗಿದೆ. ಜಾಗತಿಕವಾಗಿ ಗಮನಿಸಿದರೆ ಟಾಪ್ 10 ಅತಿಶ್ರೀಮಂತರು ಒಟ್ಟು 402 ಶತಕೋಟಿ ಡಾಲರ್ ಸಂಪತ್ತು ಹೆಚ್ಚಿಸಿಕೊಂಡರು.
ಗೌತಮ್ ಅದಾನಿ ಪಾಲಿಗೆ 2021 ಅದೃಷ್ಟದ ವರ್ಷ. ಒಂದೇ ವರ್ಷ 41.5 ಶತಕೋಟಿ ಡಾಲರ್ ಸಂಪತ್ತು ಹೆಚ್ಚಿಸಿಕೊಂಡು ಒಟ್ಟು 75.3 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ. ಅಜೀಂ ಪ್ರೇಮ್ ಅವರ ಸಂಪತ್ತು 15.8 ಶತಕೋಟಿ ಡಾಲರ್ ಹೆಚ್ಚಳವಾಗಿದ್ದು ಒಟ್ಟು 41.2 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ. ಇವರಿಬ್ಬರಿಗೆ ಹೋಲಿಸಿದರೆ ದೇಶದ ಮುಂಚೂಣಿ ಉದ್ಯಮಿ ಮುಕೇಶ್ ಅಂಬಾನಿ ಸಂಪತ್ತು ಕಳೆದ ವರ್ಷ 13 ಶತಕೋಟಿ ಡಾಲರ್ ಮಾತ್ರ ಹೆಚ್ಚಾಗಿದ್ದು, ಒಟ್ಟು 89.7 ಶತಕೋಟಿ ಡಾಲರ್ ಸಂಪತ್ತು ಹೊಂದಿ ಅಗ್ರಸ್ಥಾನದಲ್ಲೇ ಮುಂದುವರಿದ್ದಾರೆ.
ಬ್ಲೂಮ್​ಗ್ ಶತಕೋಟ್ಯಧಿಪತಿ ಸೂಚ್ಯಂಕ ಪ್ರಕಾರ, ಜಾಗತಿಕ ಮಟ್ಟದ ಟಾಪ್ 10 ಅತಿಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಭಾರತದ ಅತಿಶ್ರೀಮಂತರಿಂದ ಸಾಧ್ಯವಾಗಿಲ್ಲ. ಜಾಗತಿಕ ಮಟ್ಟದ ಅತಿಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದರೆ, ಅದಾನಿ 14ನೇ ಸ್ಥಾನದಲ್ಲಿದ್ದಾರೆ.
ಭಾರತದ ಅತಿಶ್ರೀಮಂತರ ಪಟ್ಟಿಯಲ್ಲಿ ಉಳಿದವರ ಸಾಧನೆ ಹೀಗಿದೆ- ಡಿಮಾರ್ಟ್​ನ ಪ್ರೊಮೋಟರ್ ರಾಧಾಕೃಷ್ಣನ್ ದಮಾನಿ ಸಂಪತ್ತು 9.51 ಶತಕೋಟಿ ಡಾಲರ್ ಏರಿದ್ದು ಒಟ್ಟು ಸಂಪತ್ತು 24.4 ಶತಕೋಟಿ ಡಾಲರ್ ಆಗಿದೆ. ಎಚ್​ಸಿಎಲ್ ಟೆಕ್​ನ ಶಿವ ನಾಡಾರ್ ಸಂಪತ್ತು 8.4 ಶತಕೋಟಿ ಡಾಲರ್ ಏರಿದ್ದು, 32.5 ಶತಕೋಟಿ ಡಾಲರ್ ಆಗಿದೆ. ಸಾವಿತ್ರಿ ಜಿಂದಾಲ್ ಸಂಪತ್ತು 5.82 ಶತಕೋಟಿ ಡಾಲರ್, ಕುಮಾರ ಮಂಗಲಂ ಬಿರ್ಲಾ ಸಂಪತ್ತು 5.02 ಶತಕೋಟಿ ಡಾಲರ್, ಸನ್ ಫಾರ್ವದ ದಿಲೀಪ್ ಶಾಂಘ್ವಿ ಸಂಪತ್ತು 4.28 ಶತಕೋಟಿ ಡಾಲರ್, ಡಿಎಲ್​ಎಫ್​ನ ಕೆ.ಪಿ.ಸಿಂಗ್ ಸಂಪತ್ತು 3.61 ಶತಕೋಟಿ ಡಾಲರ್, ನೈಕಾದ ಫಲ್ಗುಣಿ ನಾಯರ್ ಸಂಪತ್ತು 3 ಶತಕೋಟಿ ಡಾಲರ್ ಏರಿಕೆಯಾಗಿದೆ.
ಅತಿ ಶ್ರೀಮಂತೆ ಫಲ್ಗುಣಿಭಾರತದ ಮಹಿಳಾ ಅತಿಶ್ರೀಮಂತರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ 13.1 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಅಗ್ರಸ್ಥಾನಿ ಯಾಗಿದ್ದಾರೆ. 2021ರಲ್ಲಿ ಈ ಪಟ್ಟಿಗೆ ಮಿಂಚಿನ ಎಂಟ್ರಿ ಕೊಟ್ಟವರು ಫಲ್ಗುಣಿ ನಾಯರ್. ಷೇರುಪೇಟೆಯಲ್ಲಿ ನೈಕಾ ಕಂಪನಿಯ ಐಪಿಒ ಭಾರಿ ಲಾಭಾಂಶದೊಡನೆ ಎಂಟ್ರಿ ಪಡೆದುಕೊಂಡದ್ದೇ ಇದಕ್ಕೆ ಕಾರಣ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
