ಅಹಮದಾಬಾದ್:ಮಹಾಭಾರತದಲ್ಲಿ ಕಂಸನ ಕಥೆಯನ್ನು ಕೇಳಿದ್ದೇವೆ. ತನ್ನ ಸಾವಿಗೆ ಕಾರಣವಾಗುವ ಭಯದಿಂದ ತನ್ನ ತಂಗಿ ದೇವಕಿಯ ಆರು ಶಿಶುಗಳನ್ನು ಕೊಂದನಾತ. ಆನಂತರ ಏಳನೇ ಶಿಶುವಾಗಿ ಬಲರಾಮ, ಎಂಟನೆಯ ಶಿಶುವಾಗಿ ಶ್ರೀಕೃಷ್ಣ ಹುಟ್ಟಿ ಕಂಸನಿಗೆ ಪಾಠ ಕಲಿಸಿರುವುದು ಗೊತ್ತೇ ಇದೆ.
ಅದೇ ರೀತಿ ಆದರೆ ಸ್ವಲ್ಪ ಭಿನ್ನ ಎನಿಸುವ ಪ್ರಕರಣ ಅಹಮದಾಬಾದ್​ನಲ್ಲಿ ನಡೆದಿದೆ. ಅಪ್ಪನೆನೆಸಿಕೊಂಡ ಪಾಪಿ, ಸತತ ಆರು ಬಾರಿ ತನ್ನ ಹೆಂಡತಿಗೆ ಗರ್ಭಪಾತ ಮಾಡಿಸಿದ್ದ. ಅದಕ್ಕೆ ಕಾರಣ, ಅಷ್ಟೂ ಸಲ ಆಕೆಯ ಗರ್ಭದಲ್ಲಿ ಇದ್ದುದು ಹೆಣ್ಣುಮಗುವೆಂದು! ಭ್ರೂಣಪರೀಕ್ಷೆ ಅಪರಾಧ ಎಂದು ತಿಳಿದಿದ್ದರೂ, ಎಂಜಲು ಕಾಸಿನ ಆಸೆಗೆ ಬೀಳುವ ವೈದ್ಯರು ಯಾವುದೇ ಹಿಂಜರಿಕೆ ಇಲ್ಲದೆಯೇ ಭ್ರೂಣವನ್ನು ಪತ್ತೆ ಮಾಡುವುದು ಮಾತ್ರವಲ್ಲದೇ, ಅದನ್ನು ಹೊಸಕಿಯೂ ಹಾಕುತ್ತಾರೆ.
ಅದಾಗಲೇ ಆರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದ ಅಮಿಶಾ ಸ್ಥಿತಿ ಹೇಗಾಗಿರಬೇಡ| ಆದರೆ ಮಹಿಳೆಯ ಅದೃಷ್ಟವೋ ದುರಾದೃಷ್ಟವೋ ಏನೋ. ಏಳನೆಯ ಮಗು ಗರ್ಭದಲ್ಲಿ ಇರುವಾಗಲೇ ಪಾಪಿ ಗಂಡ ಮೃತಪಟ್ಟ. ಅದಾಗಲೇ ನೊಂದು ಬೆಂದು ಹೋಗಿದ್ದ ಮಹಿಳೆ, ಏನೇ ಆಗಲಿ ಇನ್ನು ಈ ಮಗುವನ್ನು ಪಡೆದೇ ತೀರುವೆ ಎಂದು ಪಣ ತೊಟ್ಟಳು.
ಇದನ್ನೂ ಓದಿ:21 ಬಾಲಕಿಯರನ್ನು ದತ್ತು ಪಡೆದ ಮಾಜಿ ಹಾಕಿ ಆಟಗಾರ
ಹಾಗೆಯೇ ಪ್ರಸವವೂ ಆಯಿತು. ಆದರೆ ಅದು ಕೂಡ ಹೆಣ್ಣು. ಆದರೆ ಈ ಅಮ್ಮನಿಗೆ ಬೇಸರವಾಗಲಿಲ್ಲ. ಮಗಳಿಗೆ ಕಾವ್ಯಾ ಎಂದು ಹೆಸರಿಟ್ಟಳು. ಕಷ್ಟಪಟ್ಟು ತನ್ನ ಮಗಳನ್ನು ಬೆಳೆಸಿದಳು. ಮಗಳ ಜೀವನಕ್ಕೆ ಯಾವುದೇ ಧಕ್ಕೆ ಆಗದಂತೆ ಶಿಕ್ಷಣವನ್ನೂ ಕೊಡಿಸಿದಳು. ಆ ಮಗಳು 10ನೇ ತರಗತಿಯವರೆಗೂ ಅತ್ಯಧಿಕ ಅಂಕದೊಂದಿಗೆ ಓದಿದಳು. ಸಿರಿವಂತರಂತೆ ಯಾವುದೇ ಸೌಕರ್ಯ ಇಲ್ಲದಿದ್ದರೂ ಕಷ್ಟಪಟ್ಟು ಓದಿದ ಮಗಳು 10ನೇ ತರಗತಿಯಲ್ಲಿ ಶೇ.89 ಅಂಕ ಗಳಿಸಿದಳು!
ಈ ಅಮ್ಮನಿಗೋ ಖುಷಿಯೋ ಖುಷಿ. ಬಡತನದ ಬೇಗೆಯಲ್ಲಿ ಬೆಂದು ಹೋಗಿರುವ ಈ ಕುಟುಂಬದ ಮಗಳೊಬ್ಬಳು ಇಷ್ಟೊಂದು ಸಾಧನೆ ಮಾಡಿರುವ ಬಗ್ಗೆ ಖಾಸಗಿ ಚಾನೆಲ್​ ಒಂದರಲ್ಲಿ ‘ಸತ್ಯಮೇವ ಜಯತೆ’ ಕಾರ್ಯಕ್ರಮ ನಡೆಸುತ್ತಿರುವ ಬಾಲಿವುಡ್​ ನಟ ಆಮೀರ್​ ಖಾನ್​ ಅವರ ಗಮನಕ್ಕೂ ಹೋಯಿತು.
ಇದನ್ನೂ ಓದಿ:VIDEO: ಪುಟಾಣಿಗೊಂದು ಸಲಾಂ: ಕೃತಕ ಕಾಲಿನೊಂದಿಗೆ ದಿನವೂ 10ಕಿ.ಮೀ ನಡೆಯೋದೇಕೆ ಗೊತ್ತಾ?
ತಾಯಿ ಮತ್ತು ಮಗಳನ್ನು ತನ್ನ ರಿಯಾಲಿಟಿ ಷೋಗೆ ಕರೆಸಿದರು. ಅಮಿಶಾ ತಮ್ಮ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬಾಲಕಿಯ ಸಾಧನೆ ಕಂಡ ಆಮೀರ್​ ಖಾನ್​ ಅವರಿಗೆ ಅತೀವ ಸಂತೋಷವಾಗಿ, ಆಕೆಯ ಮುಂದಿನ ಶಿಕ್ಷಣದ ಸಂಪೂರ್ಣ ಖರ್ಚನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ. ಕಾವ್ಯಾ ಏನೇ ಓದಲಿ, ಆಕೆಗೆ ಏನಾಗಬೇಕೋ ಆಗಲಿ, ಅದರ ಸಂಪೂರ್ಣ ಖರ್ಚನ್ನು ನಾನು ಭರಿಸುತ್ತೇನೆ ಎನ್ನುವ ಆಶ್ವಾಸನೆ ಕೊಟ್ಟಿದ್ದಾರೆ.
ಕಾವ್ಯಾಳಿಗೆ ವೈದ್ಯೆಯಾಗಿ ಬಡರೋಗಿಗಳ ಸೇವೆ ಮಾಡುವ ಹಂಬಲ. ಅದಕ್ಕೆ ನೆರವಾಗುವುದಾಗಿಯೂ ಆಮೀರ್​ ಖಾನ್​ ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
ಆಡ್ತಾ ಆಡ್ತಾ ಗಿನ್ನೆಸ್​ ದಾಖಲೆ ಬರೆದ 90ರ ಅಜ್ಜಿ: ಈಕೆ ಆಡಿದ್ದಾದರೂ ಏನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 15 =
Remember me
