ಹೈದರಾಬಾದ್​:ಸಾಮಾನ್ಯವಾಗಿ ಗಂಡ ಏನೇ ಮಾಡಿದರೂ ಹೆಂಡತಿ ಸಹಿಸಿಕೊಳ್ಳುತ್ತಾಳೆ. ಆದರೆ, ತನಗೆ ದಕ್ಕಬೇಕಾದ ಪ್ರೀತಿಯನ್ನು ಇನ್ನೊಬ್ಬಳ ಜತೆ ಹಂಚಿಕೊಳ್ಳಲು ಬಯಸುವುದಿಲ್ಲ. ತನ್ನ ಗಂಡನ ಜೀವನದಲ್ಲಿ ಇನ್ನೊಬ್ಬ ಮಹಿಳೆ ಪ್ರವೇಶಿಸುವುದನ್ನು ಯಾವುದೇ ಹೆಂಡತಿ ಕೂಡ ಸಹಿಸುವುದಿಲ್ಲ. ಈ ವಿಚಾರದಲ್ಲಿ ಕೆಲವೊಮ್ಮೆ ಅಪರಾಧಗಳು ನಡೆದ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ. ಆದರೆ, ಇಲ್ಲೊಬ್ಬ ಮಹಿಳೆ ಇದಕ್ಕೆ ತದ್ವಿರುದ್ಧವಾಗಿದ್ದಾರೆ.
ಹೌದು, ಪತಿಗೆ ಇಷ್ಟವಾದ ಮತ್ತೊಬ್ಬ ಯುವತಿಯನ್ನು ತಾನೇ ಮುಂದೆ ನಿಂತು ವಿವಾಹ ಮಾಡಿಸಿದ್ದಾಳೆ. ಬಹುಶಃ ಮಕ್ಕಳು ಇಲ್ಲದಿದ್ದಕ್ಕೆ ಮದುವೆ ಮಾಡಿರಬಹುದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ, ದಂಪತಿಗೆ ಮಗು ಇದೆ. ಆದಾಗ್ಯೂ, ಈ ಮಹಿಳೆ ತನ್ನ ಪತಿಗೆ ಎರಡನೇ ಮದುವೆ ಮಾಡಿಸಿದ್ದಾಳೆ. ಅಷ್ಟಕ್ಕೂ ಆಕೆ ಈ ರೀತಿ ಏಕೆ ಮಾಡಿದಳು ಎಂಬುದು ನಿಮಗೆ ತಿಳಿದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ. ಈ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೆಹಬೂಬಾಬಾದ್ ಜಿಲ್ಲೆಯ ಸುರೇಶ್ ಹಾಗೂ ಸರಿತಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಗಂಡು ಮಗುವಿದೆ. ಅದೇ ಸಮಯದಲ್ಲಿ ಸುರೇಶ್​ಗೆ ಸಂಧ್ಯಾ ಎಂಬ ಯುವತಿ ಮೇಲೆ ಲವ್​ ಆಗಿದೆ. ಸಂಧ್ಯಾ, ಮಾನಸಿಕ ಅಸ್ವಸ್ಥೆ. ಸಂಧ್ಯಾ ಅವರ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಕೆ ಎರಡನೇ ಮಗಳು. ಮೊದಲ ಮಗಳಿಗೆ ಈಗಾಗಲೇ ಮದುವೆಯಾಗಿದೆ. ಈ ಸಂಧ್ಯಾ, ಸುರೇಶ್​ ಅವರ ಸಂಬಂಧಿಕರ ಮಗಳು. ಸುರೇಶ್ ಮದುವೆಯಾಗಿರುವುದು ಗೊತ್ತಿದ್ದರೂ ಸಂಧ್ಯಾ ಕೂಡ ಆತನನ್ನು ಇಷ್ಟಪಟ್ಟಿದ್ದಳು.
ಸಂಧ್ಯಾ ಮಾನಸಿಕ ಅಸ್ವಸ್ಥೆಯಾಗಿರುವುದರಿಂದ ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಹೀಗಾಗಿ ಸುರೇಶನ ಜತೆ ಮದುವೆ ಮಾಡಲು ಬಯಸಿದ್ದರು. ಇದಕ್ಕೆ ಪತ್ನಿ ಸರಿತಾ ಕೂಡ ಒಪ್ಪಿಕೊಂಡಿದ್ದು ಇಲ್ಲಿನ ಅಚ್ಚರಿಯ ಸಂಗತಿ. ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಸುರೇಶ್, ಸಂಧ್ಯಾಳನ್ನು ಶಾಸ್ತ್ರೋಕ್ತವಾಗಿ ವರಿಸಿದ್ದಾರೆ.
ಪತಿಗೆ ಎರಡನೇ ಮದುವೆ ಮಾಡಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸರಿತಾ, ನನ್ನ ಗಂಡ ಎರಡನೇ ಮದುವೆ ಬಗ್ಗೆ ಕೇಳಿದಾಗ ಮಾನವೀಯ ಹೃದಯದಿಂದ ನಾನಿದನ್ನು ಮಾಡಿದ್ದೇನೆ. ಸಂಧ್ಯಾ ಕೂಡ ನನ್ನ ತಂಗಿಯಂತೆ ಎಂದು ಹೇಳಿದ್ದಾರೆ.
ಸುರೇಶ್ ಮತ್ತು ಸಂಧ್ಯಾ ಅವರ ಮದುವೆ ಸಮಾರಂಭದಲ್ಲಿ ಸರಿತಾ ಸ್ವತಃ ಎಲ್ಲ ವ್ಯವಹಾರಗಳನ್ನು ನೋಡಿಕೊಂಡರು. ಅಲ್ಲದೇ ಸುರೇಶ್, ಸಂಧ್ಯಾಳ ಕುತ್ತಿಗೆಗೆ ತಾಳಿ ಕಟ್ಟುವಾಗಲೂ ಸರಿತಾ ಜತೆಯಲ್ಲೇ ಇದ್ದರು. ಸರಿತಾ ದಂಪತಿಯ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದುವೆಗೆ ಸಂಬಂಧಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)
భర్తకు దగ్గరుండి మరో యువతితో పెళ్లి చేసిన భార్య…
తన భర్తను మానసిక వికలాంగురాలైన ఓ యువతి ఇష్ట పడడంతో ఓ భార్య తన భర్తకు దగ్గరుండి ఆ యువతితో వివాహం జరిపించింది.
మహబూబాబాద్ జిల్లాకు చెందిన సురేష్, సరితలకు కొన్నేళ్ల క్రితం వివాహం జరిగింది.
వీరికి ఓ కుమారుడు, కూతురు ఉండగా ఆమె…pic.twitter.com/cOx7f1vPmr
— BIG TV Breaking News (@bigtvtelugu)August 28, 2024

ಓಯೋ ರೂಮ್​ಗೆ ಹೋಗುವ ಮುನ್ನ ಎಚ್ಚರ!​ ಹಣದ ಜತೆ ಮಾನ ಮರ್ಯಾದೆಯೂ ಹೋಗುತ್ತೆ ಹುಷಾರ್​

ಪೊದೆಯಲ್ಲಿ ಪತ್ತೆಯಾದ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​! ಯಾರಿಗೂ ಬೇಡ ಇಂಥಾ ಮಹಾತಾಯಿ

ಕ್ರಿಕೆಟ್​​ ಇತಿಹಾಸದಲ್ಲೇ ಇಂಥಾ ಬ್ಯಾಟರ್​ ಮತ್ತೊಬ್ಬನಿಲ್ಲ! ಭಾರತದ ಕ್ರಿಕೆಟಿಗನನ್ನು ಕೊಂಡಾಡಿದ ಆಂಡರ್ಸನ್

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five + seven =
Remember me
