ಅಮೆರಿಕ:ಅಟ್ಲಾಂಟಾದಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರ್ತಿ ಬೆಂಕಿ ಹಚ್ಚಿಕೊಂಡಿದ್ದಾರೆ. ಶುಕ್ರವಾರ (ಡಿಸೆಂಬರ್ 1) ಮಧ್ಯಾಹ್ನ ರಾಯಭಾರ ಕಚೇರಿಯ ಕಟ್ಟಡದ ಹೊರಗೆ ಫೆಲೆಸ್ತೀನ್ ಬೆಂಬಲಿಗ ಮಹಿಳೆ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಇದಲ್ಲದೇ ಅವರನ್ನು ರಕ್ಷಿಸಲು ಯತ್ನಿಸಿದ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪ್ಯಾಲೆಸ್ತೀನ್ ಧ್ವಜ ಪತ್ತೆಯಾಗಿದೆ ಎಂದು ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ಡೇರಿನ್ ಸ್ಕಿಯರ್‌ಬೌಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಯಾರಿಗೂ ಅಪಾಯವಿಲ್ಲ’
ಈ ಘಟನೆಯನ್ನು ಭಯೋತ್ಪಾದನೆಯೊಂದಿಗೆ ಜೋಡಿಸುವ ಯಾವುದೇ ಸೂಚನೆಗಳು ತನಿಖೆಯ ಸಮಯದಲ್ಲಿ ತನಿಖಾಧಿಕಾರಿಗಳಿಗೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ರಾಯಭಾರಿ ಕಚೇರಿಯ ಯಾವುದೇ ಉದ್ಯೋಗಿಗಳಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಅಧಿಕಾರಿಗಳು ಪ್ರತಿಭಟನಾಕಾರರ ಗುರುತನ್ನು ಬಹಿರಂಗಪಡಿಸಿಲ್ಲ. ಅಟ್ಲಾಂಟಾ ಅಗ್ನಿಶಾಮಕ ಮುಖ್ಯಸ್ಥ ರೋಡೆರಿಕ್ ಸ್ಮಿತ್, ಶುಕ್ರವಾರ ಮಧ್ಯಾಹ್ನ ನಗರದ ಮಿಡ್‌ಟೌನ್ ಪ್ರದೇಶದಲ್ಲಿನ ಕಟ್ಟಡದ ಹೊರಗೆ ಪ್ರತಿಭಟನಾಕಾರರು ನಿಂತಿದ್ದರು. ಇದ್ದಕ್ಕಿದ್ದಂತೆ ಬೆಂಕಿ ಹಚ್ಚಿಕೊಂಡರು, ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ರಾಯಭಾರ ಕಚೇರಿ ಸೇರಿದಂತೆ ಕೆಲವು ಸ್ಥಳಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದರು.
ಗಾಜಾದಲ್ಲಿ ಪರಿಸ್ಥಿತಿ ಹೇಗಿದೆ?ಇಸ್ರೇಲ್ ಮತ್ತೊಮ್ಮೆ ಗಾಜಾ ಮೇಲೆ ಬಾಂಬ್ ದಾಳಿ ಆರಂಭಿಸಿದೆ. ಒಂದು ವಾರದ ಕದನ ವಿರಾಮದ ನಂತರ, ಗಾಜಾದ ನಾಗರಿಕರು ಮತ್ತೊಮ್ಮೆ ಯುದ್ಧದ ವಾತವರಣದಲ್ಲಿ ಬದುಕುತ್ತಿದ್ದಾರೆ. ನಿರಂತರ ಸಾವುಗಳು, ರೋಗಗಳು ಮತ್ತು ಹಸಿವು ಇರುವುದರಿಂದ ಗಾಜಾದಲ್ಲಿ ಮತ್ತೆ ಕದನ ವಿರಾಮವನ್ನು ಜಾರಿಗೊಳಿಸಬೇಕು ಎಂದು ಯುಎನ್ ಮಾನವೀಯ ಮುಖ್ಯಸ್ಥರು ಹೇಳಿದ್ದಾರೆ.
ತೆಲಂಗಾಣ ಚುನಾವಣಾ ಫಲಿತಾಂಶದ ನಂತರ ಕಿಂಗ್‌ ಮೇಕರ್ ಆಗ್ತಾರಾ ಓವೈಸಿ?, ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಈ ಸೂಚನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − thirteen =
Remember me
