ನವದೆಹಲಿ:ಹವಾಮಾನ ಬದಲಾವಣೆ ವೇಗವಾಗಿ ಹೆಚ್ಚುತ್ತಿದ್ದು, ಜಾಗತಿಕ ತಾಪಮಾನ ತೀವ್ರವಾಗಿ ಏರಿಕೆ ಕಂಡಿದೆ. ಹಲವು ದೇಶಗಳಲ್ಲಿ ಇದರ ಪರಿಣಾಮ ಗೋಚರವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ನಿರಂತರವಾಗಿ ತಾಪಮಾನ ಏರಿಕೆ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅಮೆರಿಕದಲ್ಲಿ ಶನಿವಾರ ಹವಾಮಾನ ಇಲಾಖೆ ತಾಪಮಾನ ಹೆಚ್ಚಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಯುರೋಪ್ ಮತ್ತು ಜಪಾನ್​ನಲ್ಲೂ ಈ ಬಿಸಿಲ ಝುಳ ಜನರನ್ನು ಕಾಡುತ್ತಿದೆ.
ಅಮೆರಿಕದಲ್ಲಿ ಕ್ಯಾಲಿಫೋರ್ನಿಯಾದಿಂದ ಟೆಕ್ಸಾಸ್​ವರೆಗೆ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿದ್ದಾರೆ. ಕಳೆದ 16 ದಿನಗಳಿಂದ ಬಿಸಿಲಿನ ತಾಪ ನಿರಂತರವಾಗಿ ಹೆಚ್ಚುತ್ತಲೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಬಿಸಿಗಾಳಿ ಇರಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ಸಾರ್ವಜನಿಕರಿಗೆ ಆಘಾತ ತಂದಿದೆ.
ಅಮೆರಿಕದ ಇಡೀ ನೈಋತ್ಯ ಭಾಗದಲ್ಲಿ ತೀವ್ರ ಬಿಸಿಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಸುಮಾರು ಮೂರನೇ ಒಂದು ಭಾಗದಷ್ಟು ಅಮೆರಿಕನ್ನರು ಅಂದರೆ 11 ಕೋಟಿ ಜನರು ತೀವ್ರ ಬಿಸಿಲಿನ ಪರಿಣಾಮ ಎದುರಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ, ವಿಶ್ವದ ಅತ್ಯಂತ ಬಿಸಿಯಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಉಷ್ಣಾಂಶ 54 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಹಗಲಿನಲ್ಲಿ ತಾಪಮಾನ 48 ಡಿಗ್ರಿ ತಲುಪಿದೆ. ಲಾಸ್ ವೇಗಾಸ್ ಮತ್ತು ನವಾಡದಂತಹ ಸ್ಥಳಗಳಲ್ಲಿ 47 ಡಿಗ್ರಿ ಸೆಲ್ಸಿಯಸ್​ಗೆ ಉಷ್ಣಾಂಶ ತಲುಪುವ ಸಾಧ್ಯತೆ ಇದೆ.
ಭಾರತದಲ್ಲಿ ನೆರೆ ಆತಂಕ:ಭಾರತದಲ್ಲಿ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ದೇಶದ ವಿವಿಧೆಡೆ ಉಷ್ಣಾಂಶ ಭಾರಿ ಏರಿಕೆ ಕಂಡಿತು. ಬಿಸಿ ಗಾಳಿಯ ಆತಂಕವೂ ಎದುರಾಗಿತ್ತು. ಆದರೆ ಜುಲೈ ತಿಂಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಅದಲ್ಲೂ ಉತ್ತರ ಭಾರತದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ಗ್ರೀಸ್ ಪ್ರವಾಸಿ ತಾಣ ಬಂದ್:ಯುರೋಪಿನ ಸಿಸಿಲಿ ಮತ್ತು ಸಾರ್ಡಿನಿಯಾ ದ್ವೀಪದಲ್ಲಿ ತಾಪಮಾನವು 48 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಇದು ಯುರೋಪಿನಲ್ಲಿ ಅತಿ ಹೆಚ್ಚು ಉಷ್ಣಾಂಶದ ದಾಖಲೆಯಾಗಿದೆ. ಗ್ರೀಸ್​ನ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಅಥೆನ್ಸ್ ಆಕ್ರೊಪೊಲಿಸ್ ಅನ್ನು ಬಿಸಿಲಿನ ತಾಪದಿಂದಾಗಿ ಸತತ ಮೂರನೇ ದಿನವೂ ಮುಚ್ಚಲಾಗಿದೆ.
ಯುರೋಪ್ ಸ್ಥಿತಿಯೂ ಗಂಭೀರ:ಇಡೀ ಯುರೋಪ್ ಖಂಡದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಮುಂಬರುವ ವಾರದಲ್ಲಿ ಇಟಲಿ ಹೊಸ ತಾಪಮಾನ ದಾಖಲೆಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಇಲ್ಲಿನ ಆರೋಗ್ಯ ಸಚಿವಾಲಯ ರೋಮ್ ಬೊಲೊಗ್ನಾ ಮತ್ತು ಫ್ಲಾರೆನ್ಸ್ ಸೇರಿ 16 ನಗರಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಬಿಸಿಲಿನ ಬೇಗೆ ಎದುರಿಸಲು ಜನರು ಸಿದ್ಧರಾಗಿ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ರೋಮ್ಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಲಿದೆ. ಮಂಗಳವಾರದ ಅದು 43 ಡಿಗ್ರಿ ಸೆಲ್ಸಿಯಸ್​ಗೆ ಏರುವ ನಿರೀಕ್ಷೆಯಿದೆ. ಇದಕ್ಕೂ ಮೊದಲು ರೋಮ್ಲ್ಲಿ ಗರಿಷ್ಠ ತಾಪಮಾನ 2007 ಆಗಸ್ಟ್ನಲ್ಲಿ 40.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಫ್ರಾನ್ಸ್​ನಲ್ಲಿ ಬರಗಾಲ:ಫ್ರಾನ್ಸ್​ನಲ್ಲಿ ತೀವ್ರವಾದ ಶಾಖದ ಪರಿಣಾಮ ಬರಗಾಲದ ಸ್ಥಿತಿ ನಿರ್ಮಾಣ ವಾಗಿದೆ. ಕೃಷಿ ಕ್ಷೇತ್ರಕ್ಕೆ ಭಾರಿ ಸಮಸ್ಯೆ ಉಂಟಾಗಿದೆ. ಫ್ರಾನ್ಸ್​ನಲ್ಲಿ ಈ ವರ್ಷದ ಜೂನ್ ತಿಂಗಳು ದೇಶದ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ತಿಂಗಳಾಗಿದೆ. ಮಂಗಳವಾರ ದಿಂದ ಫ್ರಾನ್ಸ್​ನಲ್ಲಿ ತಾಪಮಾನ ಮತ್ತೆ ಏರಿಕೆಯಾಗಲಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಯುರೋಪಿನ ಮತ್ತೊಂದು ದೊಡ್ಡ ದೇಶವಾದ ಸ್ಪೇನ್​ನಲ್ಲಿ ತಾಪಮಾನ ನಿರಂತರವಾಗಿ 40 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಾಗಿದೆ.
ಜಪಾನ್-ಆಫ್ರಿಕಾಗೂ ಸಂಕಷ್ಟ:ಭಾರತದ ಪೂರ್ವ ಭಾಗದಲ್ಲಿರುವ ಜಪಾನ್​ನಲ್ಲಿ ಸೋಮವಾರ ತಾಪಮಾನ 38-39 ಡಿಗ್ರಿ ಸೆಲ್ಸಿಯಸ್​ಗೆ ತಲುಪುವ ನಿರೀಕ್ಷೆಯಿದೆ. ಇದು ಹಿಂದಿನ ಎಲ್ಲಾ ದಾಖಲೆಗಳು ಮುರಿಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಆಫ್ರಿಕಾದ ಮೊರಾಕೊದಲ್ಲಿ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸಾಮಾನ್ಯ ವಾಗಿ ಇಲ್ಲಿ ಆಗಸ್ಟ್​ನಲ್ಲಿ ಅಧಿಕ ತಾಪಮಾನ ದಾಖಲಾಗುತ್ತದೆ. ಆದರೆ ಒಂದು ತಿಂಗಳ ಮೊದಲೇ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆ ಕಂಡುಬಂದಿರುವುದು ವಿಜ್ಞಾನಿಗಳಲ್ಲೂ ಆತಂಕ ಸೃಷ್ಟಿಸಿವೆ. ಮುಂಬರುವ ದಿನಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eleven =
Remember me
