ನವದೆಹಲಿ:ದೆಹಲಿಯಿಂದ ಸ್ವಗ್ರಾಮಕ್ಕೆ ಮರಳಿದ್ದ ದಿನಗೂಲಿ ಕಾರ್ಮಿಕನನ್ನು ಕರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಪದೇಪದೆ ಪೀಡಿಸುತ್ತಿದ್ದ ಸಂಬಂಧಿಕರೇ ಈತನನ್ನು ಥಳಿಸಿ ಕೊಂದಿದ್ದಾರೆ!
ಬಿಜ್ನೋರ್‌ ಜಿಲ್ಲೆಯ ಮಲಕ್‌ಪುರ ಗ್ರಾಮದ ಯುವಕ ಮಂಜೀತ್ ಸಿಂಗ್(23) ಮೃತ. ದೆಹಲಿಯಲ್ಲಿದ್ದ ಈತ ಇತ್ತೀಚೆಗೆ ಸ್ವಗ್ರಾಮಕ್ಕೆ ಮರಳಿದ್ದ. ಬಳಿಕ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಈತನ ಸೋದರ ಸಂಬಂಧಿಗಳಾದ ಕಪಿಲ್​ ಮತ್ತು ಮನೋಜ್​ ಒತ್ತಾಯಿಸುತ್ತಿದ್ದರು. ಗುರುವಾರವೂ ಈ ಬಗ್ಗೆ ಮಂಜೀತ್​ಸಿಂಗ್​ ಬಳಿ ಅವರು ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕುಪಿತರಾದ ಕಪಿಲ್​ ಮತ್ತು ಮನೋಜ್ ಕಟ್ಟಿಗೆಯಿಂದ ಮಂಜೀತ್​ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿರಿಕರೊನಾ ನೆಗೆಟಿವ್​ ಬಂದರೂ ಆಸ್ಪತ್ರೆ ಶೌಚಗೃಹದಲ್ಲಿ ನೇಣಿಗೆ ಶರಣು!
ತಲೆ ಮತ್ತು ಭುಜಕ್ಕೆ ತೀವ್ರ ಪೆಟ್ಟಾಗಿ ಪ್ರಜ್ಞೆತಪ್ಪಿ ಬಿದ್ದ ಮಂಜೀತ್​ನನ್ನು ಪೋಷಕರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.
ಮೃತನ ತಂದೆ ಕಲ್ಯಾಣ್​ ಸಿಂಗ್​ ನೀಡಿದ ದೂರಿನ ಮೇರೆಗೆ ಕಪಿಲ್ ಮತ್ತು ಮನೋಜ್, ಇವರ ತಾಯಿ ಪುನಿಯಾ ಹಾಗೂ ಮನೋಜ್​ ಪತ್ನಿ ಡಾಲಿ ವಿರುದ್ಧ ನಹ್ತೌರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿರಿಕ್ವಾರಂಟೈನಲ್ಲಿದ್ದ ಲಾಡ್ಜ್​ನಲ್ಲೇ ಆ್ಯನಿವರ್ಸರಿ ಸೆಲೆಬ್ರೇಷನ್.. ಆ ನ್ವಾಲ್ವರ ವಿರುದ್ಧ ಕೇಸ್​!
ಪ್ರಕರಣ ಸಂಬಂಧ ಇನ್ನು ಯಾರನ್ನೂ ಬಂಧಿಸಿಲ್ಲ. ಈ ಸಾವು ತಲೆಗೆ ಬಿದ್ದ ಪೆಟ್ಟಿನಿಂದ ಸಂಭವಿಸಿದೆ. ಆದರೆ, ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದ ಮಂಜೀತ್​ಗೆ ಚಿಕಿತ್ಸೆ ಸಮಯದಲ್ಲಿ ವೈದ್ಯರು ಕರೊನಾ ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಮೇ 19ರಂದು ದೆಹಲಿಯಿಂದ ಬಿಜ್ನೋರ್ ತಲುಪಿದ ಮಂಜೀತ್​ ಸಿಂಗ್ ಅನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದ್ದು, ವರದಿ ನೆಗೆಟಿವ್​ ಇತ್ತು. ಹಾಗಾಗಿ ಅವರಿಂದ ಕರೊನಾ ಪರೀಕ್ಷೆಗೆ ಮಾದರಿ ಸಂಗ್ರಹಿಸಲಾಗಿಲ್ಲ ಎಂದು ಬಿಜ್ನೋರ್​ ಜಿಲ್ಲೆಯ ಹೆಚ್ಚುವರಿ ಎಸ್​​ಪಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿರಿಹೆದ್ದಾರಿ ಬಿಕೋ ಎನ್ನುತ್ತಿದ್ದರೂ ಹಾಲಿನ ಕ್ಯಾಂಟರ್​ ರೂಪದಲ್ಲಿ ಬಂದ ಜವರಾಯ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fourteen =
Remember me
