ಶ್ರೀಕಾಕುಳಂ:ವಿವಾಹೇತರ ಸಂಬಂಧ ಹೊಂದಿದ್ದ ವಿವಾಹಿತೆ ಮತ್ತು ಯುವಕ ಸೋಮವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ವಿವಾಹಿತೆ ಮೃತಪಟ್ಟರೆ, ಯುವಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಲವೇರು ವಲಯದ ಕೇಶವರಾಯನಿಪಾಳ್ಯಂ ಮೂಲದ ಸಂತೋಷ್​ (30) ಮತ್ತು ಪ್ರಿಯಾಂಕಾ ಅಲಿಯಾಸ್​ ಅಂಕಮ್ಮ (32) ನಡುವಿನ ವಿವಾಹೇತರ ಸಂಬಂಧ ಸಾವಿನ ದವಡೆಗೆ ನೂಕಿದೆ.
ವಿವರಣೆಗೆ ಬರುವುದಾದರೆ ಪ್ರಿಯಾಂಕಾ 12 ವರ್ಷಗಳ ಹಿಂದೆ ಸೂರ್ಯನಾರಾಯಣ ಎಂಬಾತನನ್ನು ಮದುವೆ ಆಗಿದ್ದಳು. ಸೂರ್ಯನಾರಾಯಣ ಖಾಸಗಿ ಕಂಪನಿಯಲ್ಲಿ ಅಡುಗೆಯವನಾಗಿ ಕೆಲಸ ಮಾಡಿದರೆ, ಪ್ರಿಯಾಂಕನೂ ಸಹ ಕೆಲಸಕ್ಕೆ ಹೋಗುತ್ತಿದ್ದಳು. ಇಬ್ಬರ ವೈವಾಹಿಕ ಜೀವನ ಸಾಕ್ಷಿಯಾಗಿ ಮೂವರು ಮಕ್ಕಳಿದ್ದಾರೆ.
ಇದನ್ನೂ ಓದಿರಿ:ಬಿಜೆಪಿ ಸಂಸದನ ಮಗನ ಮೇಲೆ ಗುಂಡಿನ ದಾಳಿ: ಪೊಲೀಸರ ಅನುಮಾನವೇ ಬೇರೆ!
ಹೀಗೆ ಸಂಸಾರದ ಬಂಡಿ ಸಾಗುವಾಗ ಮೂರು ವರ್ಷಗಳ ಹಿಂದೆ ಸಂತೋಷ್​ ಹೆಸರಿನ ಆಟೋ ಚಾಲಕನ ಪರಿಚಯವಾಗುತ್ತದೆ. ಇದೇ ಪರಿಚಯ ವಿವಾಹೇತರ ಸಂಬಂಧಕ್ಕೆ ಸೇತುವೆಯಾಗುತ್ತದೆ. ಆಕೆ ಮೂರು ಮಕ್ಕಳ ತಾಯಿ, ತನಗಿಂತಲೂ ಹಿರಿಯವಳು ಎಂದು ಗೊತ್ತಾದರೂ ಸಹ ಸಂತೋಷ ಆಕೆಯೊಂದಿಗೆ ತನ್ನ ಸಂಬಂಧ ಮುಂದುವರಿಸಲು ಹಿಂಜರಿಯಲಿಲ್ಲ. ಪ್ರಿಯಾಂಕಗೂ ಸಹ ಈ ಯಾವುದೇ ಯೋಚನೆಯನ್ನು ಮಾಡಲಿಲ್ಲ. ಇಬ್ಬರ ಸಂಬಂಧ ಹೀಗೆ ಹಲವು ವರ್ಷಗಳವರೆಗೆ ಮುಂದುವರಿದಿದೆ.
ವರ್ಷದ ಹಿಂದೆ ಇಬ್ಬರ ಸಂಬಂಧ ಸೂರ್ಯನಾರಾಯಣನಿಗೆ ತಿಳಿದಿದೆ. ಬಳಿಕ ಪತ್ನಿಗೆ ಚೆನ್ನಾಗಿ ಬೈದು ಬುದ್ಧಿವಾದ ಹೇಳಿದ್ದ. ಅಲ್ಲದೆ, ಹಿರಿಯರ ಪಂಚಾಯಿತಿಯು ನಡೆದು ಸಂಧಾನ ಮಾಡಲಾಗಿತ್ತು. ಇಷ್ಟೇಲ್ಲ ಆದರೂ ಪ್ರಿಯಾಂಕಾ ಮತ್ತು ಸಂತೋಷ್​ ನಡುವಿನ ಸಂಬಂಧ ಮಾತ್ರ ಹಾಗೇ ಮುಂದುವರಿದಿದೆ. ಇಬ್ಬರು ಅನೇಕ ಬಾರಿ ಸಿಕ್ಕಿಬಿದ್ದು, ಎಷ್ಟೇ ಬುದ್ಧಿವಾದ ಹೇಳಿದರೂ ತಮ್ಮ ಚಾಳಿಯನ್ನು ಮಾತ್ರ ನಿಲ್ಲಿಸಲಿಲ್ಲ.
ಇಬ್ಬರ ಸಂಬಂಧಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದರಿಂದ ಮನನೊಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಸೋಮವಾರ ರಾತ್ರಿ ಇಬ್ಬರು ಕೇಶವರಾಯನಿಪಾಳ್ಯಂನ ಚಿಲಕಪಾಳ್ಯಂಗೆ ತೆರಳಿದ್ದಾರೆ. ಅಲ್ಲಿನ ನಿರ್ಜನ ಪ್ರದೇಶವೊಂದಕ್ಕೆ ತೆರಳಿ ಇಬ್ಬರು ವಿಷ ಸೇವನೆ ಮಾಡಿದ್ದಾರೆ. ಬಳಿಕ ಸಂತೋಷ್​ ತನ್ನ ಸ್ನೇಹಿತರು, ಕುಟುಂಬದ ಸದ್ಯರಿಗೆ ಫೋನ್​ ಮಾಡಿ ಹೇಳಿದ್ದಾನೆ. ಬಳಿಕ ಎಲ್ಲರು ಹೋಗಿ ನೋಡುವಷ್ಟರಲ್ಲಿ ಇಬ್ಬರು ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದರು.
ಇದನ್ನೂ ಓದಿರಿ:ಜಾರಕಿಹೊಳಿ ಸೆಕ್ಸ್​ ವಿಡಿಯೋ ರಿಲೀಸ್​ ಬೆನ್ನಲ್ಲೇ ದೂರುದಾರನ ಬೆನ್ನುಬಿದ್ದ ಬೆದರಿಕೆ ಕರೆಗಳು!
ತಕ್ಷಣ ಅವರನ್ನು ಶ್ರೀಕಾಕುಳಂ ಆಸ್ಪತ್ರೆಗೆ ಸಾಗಿಸಲಾಯಿತು. ಅದೇ ರಾತ್ರಿ ಪ್ರಿಯಾಂಕಾ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಸಂತೋಷ್​ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಸಂಬಂಧ ಎಚೆರ್ಲಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್​ವೇ ಪ್ರೀತಿಯ ಪ್ರಸಂಗ

ದೆಹಲಿಯಲ್ಲಿ ಮತ್ತೆ ಮುನ್ನಡೆ ಸಾಧಿಸಿದ ಆಮ್​ ಆದ್ಮಿ ಪಕ್ಷ! ಬಿಜೆಪಿ ಕ್ಷೇತ್ರದಲ್ಲೂ ಎಎಪಿಯೇ ಮುಂದು!

ಕಂತೆ ಕಂತೆ ನೋಟು ಪತ್ತೆ! ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nine =
Remember me
