ಬೆಂಗಳೂರು:ಭವಿಷ್ಯದ ಆರ್ಥಿಕ ಸುರಕ್ಷತೆಯ ದೃಷ್ಟಿಯಿಂದ ಹಲವರು ಹಲವೆಡೆ ಹೂಡಿಕೆ ಮಾಡುತ್ತಾರೆ. ಆ ಪೈಕಿ ವಿಶೇಷವಾದ ಹೂಡಿಕೆಯ ಯೋಜನೆಯನ್ನು ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್​ ನೀಡುತ್ತಿದೆ.
ಅಧಿಕ ನಿಶ್ಚಿತ ವಿಷಯ ಹಾಗೂ ಉಪಾಯಗಳ ಮೂಲಕ ಹೂಡಿಕೆ ಮಾಡುವುದರಿಂದ ಥೀಮ್ಯಾಟಿಕ್​ ಫಂಡ್​ (ವಿಷಯಾಧಾರಿತ ಹೂಡಿಕೆ) ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ ಎಂಬುದಾಗಿ ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್​ನ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ ಎಚ್.ಜಿ. ಹಿರೂರ್​ ಅಭಿಪ್ರಾಯ ಪಟ್ಟಿದ್ದಾರೆ.
ಥೀಮ್ಯಾಟಿಕ್ ಫಂಡ್​​ನಲ್ಲಿ ನಿಗದಿತ ಕಂಪನಿ ಅಥವಾ ಸಂಸ್ಥೆಗಳನ್ನು ಮೌಲ್ಯೀಕರಿಸುವ ಬದಲು ದೀರ್ಘಕಾಲೀನ ಗತಿಯನ್ನು ಗಮನಿಸಿ ಹೂಡಿಕೆ ಮಾಡಲಾಗುತ್ತದೆ. ಸರಿಯಾಗಿ ಥೀಮ್ಯಾಟಿಕ್​ ಫಂಡ್​ ನಡೆಸಿದಲ್ಲಿ ಹೆಚ್ಚಿನ ಲಾಭ ಖಚಿತ ಎಂದು ಅವರು ಹೇಳುತ್ತಾರೆ.
ಈಗ ಅಂಗೈಯಲ್ಲೇ ಸಿಗುವ ತಡೆರಹಿತ ಮಾಹಿತಿಗಳಿಂದಾಗಿ ಹೂಡಿಕೆದಾರರು ತಮಗೆ ಯಾವ ವಿಷಯ ಹೆಚ್ಚು ಲಾಭ ತರಬಹುದು ಎಂದು ತಾವೇ ನಿರ್ಧರಿಸಬಹುದು. ಹೀಗೆ ಹೂಡಿಕೆ ಮಾಡಲು ಜಾಗತಿಕವಾಗಿ ರಿನ್ಯೂವೇಬಲ್ ಎನರ್ಜಿ, ಕ್ಷಿಪ್ರ ನಗರೀಕರಣ, ಸಂಪನ್ಮೂಲ ಅಭಾವ, ಹವಾಮಾನ ಬದಲಾವಣೆ, ತಂತ್ರ ಮುಂತಾದ ವಿಷಯಗಳ ಕ್ಷೇತ್ರಗಳು ಇವೆ.
ವಿಶೇಷವೆಂದರೆ ಥೀಮ್ಯಾಟಿಕ್​ ಹೂಡಿಕೆಯನ್ನು ಭವಿಷ್ಯಕ್ಕಾಗಿ ಭವಿಷ್ಯದಲ್ಲಿ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿನ ಪರಿಣತರು ಮುಂದಿನ ಮೂರು, ಐದು ಅಥವಾ ಹತ್ತು ವರ್ಷಗಳಲ್ಲಿ ಏನಾಗಬಹುದು ಎಂಬ ಅಂದಾಜಿನೊಂದಿಗೆ ಹೂಡಿಕೆ ಮಾಡಬಲ್ಲವರಾಗಿರುತ್ತಾರೆ. ಅದರಲ್ಲೂ ಈಗ ಮಾರುಕಟ್ಟೆ ಕೂಡ ಪ್ರಬಲ ಥೀಮ್ಯಾಟಿಕ್ ಹೂಡಿಕೆಗೆ ಸಾಕ್ಷಿಯಾಗುತ್ತಿದೆ ಎನ್ನುವ ಅವರು, ದೀರ್ಘಕಾಲೀನ ಬಂಡವಾಳದಾರರಿಗೆ ಥೀಮ್ಯಾಟಿಕ್​ ಹೂಡಿಕೆ ಅವರ ಕ್ಷೇತ್ರದಲ್ಲಿ ಭವಿಷ್ಯ ಅಭಿವೃದ್ಧಿ ಸಾಮರ್ಥ್ಯ ಕಂಡುಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ.
ವಿಷಯಾಧಾರಿತ ಹೂಡಿಕೆ ತಂತ್ರವು ಉದಯೋನ್ಮುಖ ಅವಕಾಶಗಳು ಮತ್ತು ನಿಮಗೆ ಉತ್ತಮ ಆದಾಯ ಒದಗಿಸುವ ರಚನಾತ್ಮಕ ಬದಲಾವಣೆಗಳನ್ನು ಗುರುತಿಸುವುದನ್ನು ಅವಲಂಬಿಸಿರುವುದರಿಂದ ನೀವು ನಿಮ್ಮ ಹೂಡಿಕೆ ಮೇಲೆ ನಿಯಮಿತವಾಗಿ ಮೇಲ್ವಿಚಾರಣೆ ಮಾಡುವ ಜತೆಗೆ, ಅಧಿಕ ಲಾಭ ಗಳಿಸುವ ನಿಟ್ಟಿನಲ್ಲಿ ಎದುರಾಗುವ ಸಂಭವನೀಯ ಅಪಾಯಗಳನ್ನು ಗಮನಿಸಿ ಮರುಸಮತೋಲನ ಮಾಡಬೇಕಾಗುತ್ತದೆ. ನೀವು ಇವನ್ನೆಲ್ಲ ಮಾಡಲು ಬಯಸದೇ ವಿಷಯಾಧಾರಿತ ಹೂಡಿಕೆಗಳ ಪ್ರಯೋಜನ ಪಡೆಯಲು ಇಚ್ಛಿಸಿದರೆ ಥೀಮ್ಯಾಟಿಕ್​ ಮ್ಯೂಚುವಲ್​ ಫಂಡ್​ನಲ್ಲಿ ಹೂಡಿಕೆ ಮಾಡಬಹುದು ಎಂಬ ಸಲಹೆ ಅವರದು.
ಇನ್ನು ಪ್ರುಡೆನ್ಷಿಯಲ್​ ಥೀಮ್ಯಾಟಿಕ್ ಅಡ್ವಾಂಡೇಜ್​ ಫಂಡ್​ ಕ್ಷೇತ್ರ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಉದಯೋನ್ಮುಖ ಅವಕಾಶಗಳಲ್ಲಿ ನಿಧಿಯನ್ನು ಹೂಡಿಕೆ ಮಾಡುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಹೂಡಿಕೆದಾರರಾಗಿ ನೀವು ಇದೇ ಫಂಡ್ ಯಾಕೆ ಆಯ್ಕೆ ಮಾಡಬೇಕು?ಐಸಿಐಸಿಐ ಪ್ರುಡೆನ್ಷಿಯಲ್​ ಥೀಮ್ಯಾಟಿಕ್ ಅಡ್ವಾಂಟೇಜ್ ಫಂಡ್​​ನ ಪರಿಣತ ನಿಧಿ ವ್ಯವಸ್ಥಾಪಕರು ಸ್ಥೂಲ ಆರ್ಥಿಕ ಪ್ರವೃತ್ತಿಗಳನ್ನು ಮೇಲ್ವಿಚಾರಣೆ ಮಾಡುವ ಜತೆಗೆ ಉದಯೋನ್ಮುಖ ಥೀಮ್‌ಗಳನ್ನು ಗುರುತಿಸುತ್ತಾರೆ. ಅಲ್ಲದೆ ಪ್ರಮುಖ ಮತ್ತು ಸಣ್ಣ ಥೀಮ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಾರೆ. ಈ ಎಲ್ಲದರ ನಿಯತಾಂಕಗಳ ಆಧಾರದ ಮೇಲೆ ಅವರು ಉದಯೋನ್ಮುಖ ಥೀಮ್‌ಗಳು ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ನೀಡುವ ವಲಯಗಳನ್ನು ಗುರುತಿಸುತ್ತಾರೆ. ಅಂತಿಮವಾಗಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ನಿರ್ಧರಿಸಲಾಗುತ್ತೆ. ಹೀಗಾಗಿ ಹೂಡಿಕೆದಾರರಿಗೆ ಈ ಫಂಡ್ ಉತ್ತಮ.
ಇಷ್ಟು ದಿನ ಹೇಳಿದ್ದು ಸುಳ್ಳು… ಜರ್ಸಿ ನಂ. 7ರ ಆಯ್ಕೆ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ಎಂ.ಎಸ್​. ಧೋನಿ!

ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಬರೆದ ಜೇಮ್ಸ್​: ಮೊದಲ ದಿನವೇ ದಾಖಲೆ ಗಳಿಕೆ, KGF​ ರೆಕಾರ್ಡ್​ ಬ್ರೇಕ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − 4 =
Remember me
