ನವದೆಹಲಿ:ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರನ್ನು ಗೊಂದಲ’ಕ್ಕೀಡುಮಾಡಿದೆ.
ಜೆನ್​ ಜೆಂಟಲ್​ಮನ್​ ಎಂಬುವರು ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ನಾಲ್ಕು ಮಂದಿ ಇದ್ದಾರೆ ಎಂಬುದನ್ನು ನಿಜಕ್ಕೂ ನನ್ನಿಂದ ನಂಬಲೂ ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಫೋಟೋ ಭಾರಿ ವೈರಲ್​ ಆಗಿದ್ದು, ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್​​ ಮತ್ತು 35 ಸಾವಿರಕ್ಕೂ ಹೆಚ್ಚು ರೀಟ್ವೀಟ್​ ಗಿಟ್ಟಿಸಿಕೊಂಡಿದೆ.
ಇದನ್ನೂ ಓದಿರಿ:ಕಾಲುವೆ ಅಗೆಯುವಾಗ ಕಾರ್ಮಿಕನಿಗೆ ಒಲಿಯಿತಾ ನಿಧಿ? ವೈರಲ್​ ಸುದ್ದಿ ಹಿಂದಿನ ಸತ್ಯಾಂಶ ಹೀಗಿದೆ…
ಫೋಟೋದಲ್ಲಿ ಏನಿದೆ?:ಪಾದಯಾತ್ರಿಗಳ ಗುಂಪೊಂದು ಬೆಟ್ಟದ ಕೇಂದ್ರ ಭಾಗವೊಂದಕ್ಕೆ ಆಗಮಿಸಿ, ವಿಶ್ರಾಂತಿ ಪಡೆಯುವಾಗ ಚಿಯರ್​ ಅಪ್​ ಮಾಡಲು ತಮ್ಮ ಕಿಸೆಯಿಂದ ಬಾಟಲ್​ಗಳನ್ನು ತೆರೆಯುತ್ತಾರೆ. ಇದೇ ಚಿತ್ರ ಇದೀಗ ನೆಟ್ಟಿಗರನ್ನು ಗೊಂದಲಕ್ಕೆ ದೂಡಿದೆ. ಏಕೆಂದರೆ ಫೋಟೋದಲ್ಲಿ ನಾಲ್ಕು ಬಾಟಲ್​ಗಳು ಕಾಣುತ್ತಿದೆ. ಆದರೆ, ಮೂರೇ ಕೈಗಳು ಮಾತ್ರ ನೋಡುಗರಿಗೆ ಗೋಚರವಾಗುತ್ತಿದೆ. ಹಾಗಾದರೆ ಇನ್ನೊಂದು ಕೈ ಎಲ್ಲಿ ಎಂಬುದೇ ಅನೇಕರ ಪ್ರಶ್ನೆಯಾಗಿದ್ದು, ಇದಕ್ಕೆ ಉತ್ತರವೂ ಮುಂದಿದೆ…
My brain refuses to believe there are 4 people in this photopic.twitter.com/GOwglY3vyw
— Jen Gentleman 🌺 (@JenMsft)February 14, 2021

ಇದನ್ನೂ ಓದಿರಿ:‘ರಾಹುಲ್​ ಗಾಂಧಿ ದಲಿತ ಯುವತಿಯನ್ನೇ ಮದುವೆಯಾಗಬೇಕು’
ಫೋಟೋ ಬಗ್ಗೆ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಮಂದಿ ಇದ್ದಾರೆ ಎಂಬುದನ್ನು ನಂಬಲು ನನ್ನಿಂದ ಆಗಲೇ ಇಲ್ಲ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದರೆ, ಜೂಮ್​ ಮಾಡುವವರೆಗೂ ನನಗೆ ಇನ್ನೊಂದು ಕೈ ಇರುವುದನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ ಎಂದು ಮತ್ತೊಬ್ಬ ನೆಟ್ಟಿಗ ಹುಬ್ಬೇರಿಸಿದ್ದಾರೆ. ಹೀಗೆ ಅನೇಕರು ಫೋಟೋ ಕುರಿತು ಕಾಮೆಂಟ್​ ಮಾಡಿದ್ದಾರೆ.
I couldn’t figure this out until I zoomed it.
— M P (@Schmadvertising)February 16, 2021

ಅಸಲಿಗೆ ಫೋಟೋದಲ್ಲಿರುವುದು ನಾಲ್ಕು ಮಂದಿ. ಮೂವರ ಕೈ ಸ್ಪಷ್ಟವಾಗಿ ಕಾಣುತ್ತದೆ. ಆದರೆ, ನಾಲ್ಕನೆ ವ್ಯಕ್ತಿಯ ಕೈ ಹಿನ್ನೆಲೆ ಚಿತ್ರಣಕ್ಕೆ ಹೊಂದಿಕೊಂಡಿರುವುದರಿಂದ ಗೋಚರವಾಗುವುದಿಲ್ಲ. ಆದರೆ, ಜೂಮ್​ ಮಾಡಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ.(ಏಜೆನ್ಸೀಸ್​)
I couldn’t figure this out until I zoomed it.
— M P (@Schmadvertising)February 16, 2021

You got camouflaged?pic.twitter.com/ZnnlmCsHPe
— 🤔 (@Ortega082)February 14, 2021

ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರದಲ್ಲಿರುವುದೇನು? ಬೀಚ್​ ಅಂದುಕೊಂಡರೆ ನಿಮ್ಮ ಊಹೆ ತಪ್ಪು!

ತಮ್ಮ ಮೂತ್ರವನ್ನು ತಾವೇ ಕುಡಿದ ಅಮ್ಮ ಮಕ್ಕಳು! ನಿಮಗೂ ಆ ಮೆಸೇಜ್​ ಬಂದಿರುವುದು ನೋಡಿಕೊಳ್ಳಿ…

ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
