ನವದೆಹಲಿ:ಕೆಲ ಮಂದಿ ಸಾರ್ವಜನಿಕ ಪ್ರದೇಶಗಳಲ್ಲಿ ತುಂಬಾ ವಿಚಿತ್ರವಾಗಿ ವರ್ತಿಸುವ ಮೂಲಕ ತನ್ನ ಸುತ್ತಮುತ್ತ ಇರುವವರಿಗೆ ತುಂಬಾ ತೊಂದರೆ ಕೊಡುತ್ತಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಇದೀಗ ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್​ ಆಗುತ್ತಿದೆ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಆಟೋದಲ್ಲಿ ಕುಳಿತು ಪ್ರಯಾಣಿಸುವಾಗ ಹಿಂದೆ ಬರುತ್ತಿದ್ದ ಬೈಕ್​ ಸವಾರನ ಜತೆಗೆ ಅನುಚಿತವಾಗಿ ವರ್ತಿಸಿದ್ದಾಳೆ. ಇದನ್ನು ಪ್ರಶ್ನೆ ಮಾಡಿದರೆ, ಅಸಡ್ಡೆ ಉತ್ತರ ನೀಡಿದ್ದಾಳೆ.
ವೀಡಿಯೋದಲ್ಲಿ ಬೈಕ್ ಸವಾರನೊಬ್ಬ ಆಟೋವನ್ನು ಓವರ್​ಟೇಕ್​ ಮಾಡಲು ಪ್ರಯತ್ನಿಸಿದಾಗ, ಆಟೋದಲ್ಲಿದ್ದ ಮಹಿಳೆ ಬಾಯಿಯಿಂದ ಗುಟ್ಕಾ ಉಗುಳುತ್ತಾಳೆ. ಇದು ಬೈಕ್​ ಮೇಲೆ ಬೀಳುತ್ತದೆ. ನೋಡಿದವರಿಗೆ ಬೇಕಂತಲೇ ಮಾಡಿರುವಂತೆ ಕಾಣುತ್ತದೆ. ಬಳಿಕ ಬೈಕ್​ ಸವಾರ ಆಟೋವನ್ನು ತಡೆದು, ಮಹಿಳೆಯನ್ನು ಯಾಕೆ ಹೀಗೆ ಮಾಡಿದ್ರಿ ಎಂದು ಪ್ರಶ್ನೆ ಮಾಡುತ್ತಾನೆ. ಈ ವೇಳೆ ಉತ್ತರಿಸುವ ಆಕೆ, ಇದು ನಿಮ್ಮ ತಪ್ಪು. ಇಷ್ಟು ಹತ್ತಿರ ಬೈಕ್ ಓಡಿಸಲು ನಿಮಗೆ ಹೇಳಿದ್ದು ಯಾರು? ಎಂದು ಮರು ಪ್ರಶ್ನೆ ಮಾಡುತ್ತಾರೆ. ಈ ವೇಳೆ ಬೈಕ್ ಸವಾರ, ರಸ್ತೆಯಲ್ಲಿ ಉಗುಳುತ್ತೀರಾ? ಎಂದು ಪ್ರಶ್ನಿಸುತ್ತಾನೆ. ನೀವು ಸಡನ್​ ಆಗಿ ಬಂದಿದ್ದರಿಂದ ಈ ರೀತಿ ಆಯಿತು ಎಂದು ಮಹಿಳೆ ಹೇಳುತ್ತಾರೆ.
Felt-Scripted Kinda Kalesh b/w a Biker and Woman over she Spit on His Bikepic.twitter.com/EBhcnPfBls
— Ghar Ke Kalesh (@gharkekalesh)April 14, 2024

ನೀನು ನನ್ನ ಬೈಕ್​ ಅನ್ನು ಕ್ಲೀನ್ ಮಾಡಿಕೊಡು ಎಂದು ಬೈಕ್ ಸವಾರ ಕೇಳಿದಾಗ ಮಹಿಳೆ ನಿರಾಕರಿಸಿದ್ದಾಳೆ. ಈ ರೀತಿ ರಸ್ತೆಯಲ್ಲಿ ಉಗುಳುವಾಗ ನಿಮಗೆ ನಾಚಿಕೆ ಆಗಲ್ಲವೇ ಎಂದು ಬೈಕ್​ ಸವಾರ ಮಹಿಳೆಯ ವಿರುದ್ಧ ಕಡಿಕಾರುತ್ತಾನೆ. ಈ 58 ಸೆಕೆಂಡ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ.
ಈ ವಿಡಿಯೋ ನೋಡಿದವರು ಇಂತಹವರು ಸಾಕಷ್ಟು ಮಂದಿ ಇದ್ದಾರೆ. ಹಾಗಾಗಿ ಹುಷಾರಾಗಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್​)
ವಿಕಲಾಂಗರಿಗೆ 13 ಸ್ಕೂಟರ್​ ಗಿಫ್ಟ್​! ಕೊಟ್ಟ ಮಾತು ಉಳಿಸಿಕೊಂಡ ಲಾರೆನ್ಸ್, ಮನೆ ಕಟ್ಟಿಸಿಕೊಡುವುದಾಗಿಯೂ ಭರವಸೆ​

ಇದನ್ನು ತಕ್ಷಣವೇ ನಿಲ್ಲಿಸಿ… ಐಪಿಎಲ್​ ತಂಡಗಳು ಮತ್ತು ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಬಿಸಿಸಿಐ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 13 =
Remember me
