ತೆಲಂಗಾಣ:ಯುವಕರು ಒಟ್ಟಾಗಿ ಕ್ರಿಕೆಟ್ ಆಡುತ್ತಿದ್ದರು. ಅಷ್ಟರಲ್ಲಿ ಜೋರು ಮಳೆ ಶುರುವಾಯಿತೆಂದು ಐವರು ಯುವಕರು ಪಕ್ಕದ ಮರದ ಕೆಳಗೆ ಓಡಿಹೋದ ವೇಳೆ ಸಿಡಿಲು ಬಡಿದು ಯುವಕ ಸಾವನ್ನಪ್ಪಿದ್ದಾನೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿರಿಸಿಲ್ಲ ಜಿಲ್ಲೆಯ ಬೋನಾಳ ಬಳಿ ಈ ಘಟನೆ ನಡೆದಿದೆ.
ಸತೀಶ್ (32) ಮೃತ ಯುವಕ. ಈತ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದ ಸತೀಶ್​​ ಸ್ನೇಹಿತರ ಜೊತೆ ಕ್ರಿಕೆಟ್ ಆಡುತ್ತಿದ್ದಾಗ ಏಕಾಏಕಿ ಮಳೆ ಸುರಿಯಲಾರಂಭಿಸಿದ್ದು, ಐವರು ಸಮೀಪದ ಮರದ ಕೆಳಗೆ ಹೋಗಿದ್ದಾರೆ. ಆದರೆ ಮರ ಒಂದು ಕಡೆ ವಾಲಿದ್ದರಿಂದ ಸಿಡಿಲಿನ ಪ್ರಭಾವ ಸತೀಶ್ ಎಂಬವರ ಮೇಲೆ ಹೆಚ್ಚಾಗಿತ್ತು. ಇದರಿಂದ ಸತೀಶ್​ ಸಾವನ್ನಪ್ಪಿದ್ದಾನೆ.
ಈ ಆಘಾತದಿಂದ ಉಳಿದ ಯುವಕರು ಇನ್ನೂ ಚೇತರಿಸಿಕೊಂಡಿಲ್ಲ. ಸತೀಶ್​​ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರಿಸಿಲ್ಲ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ವೈದ್ಯರು ಚಿಕಿತ್ಸೆ ನೀಡುವ ಮುನ್ನವೇ ಸತೀಶ್ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ಒಬ್ಬನೇ ಮಗ ಸಾವನ್ನಪ್ಪಿದಾಗ ತಂದೆ-ತಾಯಿ, ಪತ್ನಿ, ಮಕ್ಕಳು ಕಣ್ಣೀರಿಟ್ಟರು. ಸತೀಶ್ ಪತ್ನಿ ಮಧು ಪ್ರಿಯಾ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮೆಕ್ಯಾನಿಕ್ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದನು. ಸರಕಾರ ನಮ್ಮ ಕುಟುಂಬಕ್ಕೆ ಆಸರೆಯಾಗಲಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಕೆಂಪು, ಹಸಿರು, ನೀಲಿ, ಕಪ್ಪು, ಬಿಳಿ.. ಬಣ್ಣದ ನಂಬರ್ ಪ್ಲೇಟ್‌ಗಳ ಅರ್ಥವೇನು ಗೊತ್ತಾ? ಇವುಗಳನ್ನು ಯಾರು ಬಳಸುತ್ತಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 18 =
Remember me
