ನವದೆಹಲಿ:ಕರೊನಾ ಲಸಿಕೆ ಹಾಕಿಸಿಕೊಳ್ಳಬೇಕೆಂದು ಯಾವುದೇ ವ್ಯಕ್ತಿಗೆ ಒತ್ತಾಯ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಲಸಿಕೆಯಿಂದಾಗಿರುವ ಪ್ರತಿಕೂಲ ಪರಿಣಾಮಗಳ ಕುರಿತ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಸಂವಿಧಾನದ 21 ನೇ ವಿಧಿಯಡಿಯಲ್ಲಿ ಶಾರೀರಿಕ ಸ್ವಾಯತ್ತತೆ ಮತ್ತು ಸಮಗ್ರತೆಯನ್ನು ರಕ್ಷಿಸಲಾಗಿದೆ ಎಂದ ನ್ಯಾ.ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ದ್ವಿಸದಸ್ಯ ಪೀಠ, ಎಲ್ಲಿಯವರೆಗೆ ಕರೊನಾ ಸಂಖ್ಯೆ ಕಡಿಮೆ ಇರುತ್ತದೋ ಅಲ್ಲಿಯವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳಿಗೆ ಯಾವುದೇ ನಿರ್ಬಂಧ ವಿಧಿಸುವ ಅಗತ್ಯವಿಲ್ಲ ಎಂದೂ ಹೇಳಿದೆ.
ಸಾರ್ವಜನಿಕರು ಮತ್ತು ವೈದ್ಯರಿಂದ ಮಾಹಿತಿ ಪಡೆದು ಕರೊನಾ ಲಸಿಕೆಯಿಂದ ಆಗಿರುವ ಪ್ರತಿಕೂಲ ಪರಿಣಾಮ-ಘಟನೆಗಳ ಬಗ್ಗೆ ವಿವರಣೆ ನೀಡಬೇಕು. ಸಾರ್ವಜನಿಕವಾಗಿ ಮುಕ್ತವಾಗಿರುವ ವೇದಿಕೆಯಲ್ಲಿ ಇದನ್ನು ಪ್ರಕಟಿಸಬೇಕು. ವ್ಯಕ್ತಿಗಳ ಮಾಹಿತಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ. ಕರೊನಾ ಲಸಿಕೆಯಿಂದಾದ ಪ್ರತಿಕೂಲ ಘಟನೆಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲು ನಿರ್ದೇಶನಗಳನ್ನು ಕೋರಿ ಇಮ್ಯುನೈಸೇಷನ್ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮಾಜಿ ಸದಸ್ಯ ಡಾ. ಜಾಕೋಬ್ ಪುಲಿಯೆಲ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ.
ಶೇ.1ಕ್ಕೆ ಏರಿದ ಪಾಸಿಟಿವಿಟಿ ದರ:ಸೋಮವಾರ ಕರೊನಾ ಸೋಂಕಿನ 3,157 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದ ಕರೊನಾ ದೈನಿಕ ಪಾಸಿಟಿವಿಟಿ ದರ ಎರಡು ತಿಂಗಳ ನಂತರ ಮತ್ತೆ ಶೇಕಡ ಒಂದಕ್ಕಿಂತ ಹೆಚ್ಚಾಗಿದೆ. ಈ ಅವಧಿಯಲ್ಲಿ 26 ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಲ್ಲಿ 21 ಸಾವುಗಳು ಕೇರಳ ದಿಂದಲೇ ವರದಿಯಾಗಿವೆ. ಭಾರತದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 4,30,82,345 ಹಾಗೂ ಮರಣಿಸಿದವರ ಸಂಖ್ಯೆ 5,23,869ಕ್ಕೆ ಏರಿದೆ ಎಂದು ಸರ್ಕಾರ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,500ಕ್ಕೆ ಏರಿದೆ. ನಡೆಸಲಾದ ಒಟ್ಟು ಕರೊನಾ ವೈರಸ್ ಟೆಸ್ಟ್ ಪೈಕಿ ಎಷ್ಟು ಶೇಕಡ ಪಾಸಿಟಿವ್ ಫಲಿತಾಂಶ ಬರುತ್ತದೋ ಅದನ್ನು ಪಾಸಿಟಿವಿಟಿ ದರ ಎನ್ನುತ್ತಾರೆ. ಅಧಿಕ ಪಾಸಿಟಿವಿಟಿ ದರ ಎಂದರೆ ವೈರಸ್ ಹರಡುವ ದರ ಹೆಚ್ಚಾಗಿದೆ ಎಂದರ್ಥ.
ಅಪ್ಪು ಹುಟ್ಟಿದಾಗ್ಲೇ ಸೂಪರ್ ಸ್ಟಾರ್, ನಾವೆಲ್ಲಾ ಆಮೇಲೆ ಸ್ಟಾರ್ ಆದೋರು; ಶಿವಣ್ಣ ಭಾವುಕ ನುಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
