ನವದೆಹಲಿ; ಕರೊನಾ ಲಸಿಕೆ ಕುರಿತಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಕರಾಳತೆ ಬಗ್ಗೆ ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ  ಜೈನ್ ಅವರು ಮಾಹಿತಿಯನ್ನು ಸಾರ್ವಜನಿಕರಿಗೆ ಬಿಚ್ಚಿಟ್ಟಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆ ಇನ್ನೊಂದು ದಿನ ಕೊಡುವಷ್ಟು ಮಾತ್ರ ಉಳಿದಿದೆ. ಕೋವಿಶಿಲ್ಡ್ ಲಸಿಕೆ ಇನ್ನು ಮೂರು ದಿನ ಮಾತ್ರ ಕೊಡಬಹುದು. ನಮ್ಮ ಬಳಿ ಜನರಿಗೆ ಲಸಿಕೆ ನೀಡಲು ಲಸಿಕೆ ಸಂಗ್ರಹವೇ ಇಲ್ಲ ಎಂದು ಸತ್ಯೇಂದ್ರ ಜೈನ್ ತಮ್ಮ ಅಸಹಾಯಕತೆಯನ್ನು ತೆರೆದಿಟ್ಟಿದ್ದಾರೆ.
ದೆಹಲಿಯಲ್ಲಿ ಕೋವ್ಯಾಕ್ಸಿನ್ ನ್ನು 18 ರಿಂದ 45 ರ ವಯೋಮಾನದವರಿಗೆ ನೀಡಲಾಗುತ್ತಿದ್ದು, ಇನ್ನು ಒಂದು ದಿನಕ್ಕೆ ಆಗುವಷ್ಟು ಮಾತ್ರ (2.70 ಲಕ್ಷ ಡೋಸ್) ಈ ಲಸಿಕೆ ಇದೆ. ಕೋವಿಶಿಲ್ಡ್ ನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಇದು (4.67 ಲಕ್ಷ ಡೋಸ್) ಇನ್ನೊಂದು ಮೂರು ದಿನ ಆಗಬಹುದು. ಮುಂದೆ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ. ಲಸಿಕೆ ವಿಷಯದಲ್ಲೂ ಕೇಂದ್ರ ಸರ್ಕಾರ ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಕರೊನಾ ಹಾವಳಿ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಸೋಮವಾರ 19374 ಸೋಂಕು ಪ್ರಕರಣಗಳು ವರದಿಯಾಗಿದ್ದು, 274 ಜನ ಮೃತಪಟ್ಟಿದ್ದಾರೆ. 13.2 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿತ್ತು.
ಲಸಿಕೆ ಪಡೆದ ಕ್ರಿಕೆಟಿಗರು : ನೀವೂ ಬೇಗ ತೊಗೊಳ್ಳಿ ಎಂದ ಕೊಹ್ಲಿ, ಶರ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
