ನವದೆಹಲಿ:ಚೀನಾದಲ್ಲಿ ಹೆದರಿಕೆ ಹುಟ್ಟಿಸಿರುವ ಕೋವಿಡ್ ಬಿಎಫ್.7 ರೂಪಾಂತರಿ ಭಾರತದಲ್ಲಿ ಅಷ್ಟು ಅಪಾಯಕಾರಿ ಯಲ್ಲ್ಲ ಏಕೆಂದರೆ ಭಾರತೀಯರಲ್ಲಿ ಈಗಾಗಲೇ ‘ಸಮುದಾಯ ಮಟ್ಟದಲ್ಲಿ ಪ್ರತಿರಕ್ಷೆ’ (ಹರ್ಡ್ ಇಮ್ಯೂನಿಟಿ) ಅಭಿವೃದ್ಧಿ ಯಾಗಿದೆ ಎಂದು ಹೈದರಾಬಾದ್​ನ ಸಿಎಸ್​ಐಆರ್- ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ನಿರ್ದೇಶಕ ವಿನಯ್ ಕೆ. ನಂದಿಕೂರಿ ಹೇಳಿದ್ದಾರೆ.
ಜನರು ಕೋವಿಡ್ ಬಗ್ಗೆ ಸೂಕ್ತ ನಡವಳಿಕೆ ಅನುಸರಿಸುವುದು ಅಗತ್ಯ. ಎಲ್ಲ ರೂಪಾಂತರಿಗಳು ರೋಗ ನಿರೋಧಕ ಶಕ್ತಿ ತಪ್ಪಿಸುವ ಸಾಮರ್ಥ್ಯ ಹೊಂದಿವೆ. ಲಸಿಕೆ ಹಾಕಿಸಿಕೊಂಡ ಮತ್ತು ಕೆಲವೊಮ್ಮೆ ಒಮಿಕ್ರಾನ್ ಹಿಂದಿನ ರೂಪಾಂತರಿಗಳಿಂದ ಸೋಂಕಿಗೆ ಒಳಗಾಗಿದ್ದ ಜನರಿಗೂ ಮತ್ತೆ ಸೋಂಕು ತಗುಲಬಹುದು ಎಂಬ ಆತಂಕ ಯಾವಾಗಲೂ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ.
ಡೆಲ್ಟಾದಲ್ಲಿ ಇದ್ದಷ್ಟು ಇಲ್ಲ:ಸೋಂಕಿನ ತೀವ್ರತೆಯು ಡೆಲ್ಟಾದಲ್ಲಿ ಇದ್ದಷ್ಟು ಇಲ್ಲ. ಅದಕ್ಕೆ ಕಾರಣ ಭಾರತೀಯರು ರೋಗ ನಿರೋಧಕ ಶಕ್ತಿಯನ್ನು ಸ್ವಲ್ಪ ಮಟ್ಟಿಗೆ ಹೊಂದಿರುವುದು. ವಾಸ್ತವವಾಗಿ ನಮಗೆ ರೋಗ ನಿರೋಧಕ ಶಕ್ತಿ ಇರುವುದರಿಂದ ಇತರ ವೈರಸ್​ಗಳಿಗೆ ಒಡ್ಡಿಕೊಳ್ಳುತ್ತಿದ್ದರೂ ಅದರ ತೀವ್ರತೆ ತಾಗುತ್ತಿಲ್ಲ ಎಂದು ನಂದಿಕೂರಿ ಹೇಳಿದ್ದಾರೆ. ಭಾರತದಲ್ಲಿ ಕರೊನಾ ವೈರಸ್​ನ ಬಿಎಫ್.7 ರೂಪಾಂತರದ ನಾಲ್ಕು ಪ್ರಕರಣಗಳು ವರದಿಯಾಗಿವೆ.
ಇದರ ಬೆನ್ನಲ್ಲೇ ಕರೊನಾ ವೈರಸ್​ನ ಮತ್ತೊಂದು ಅಲೆಯ ಭೀತಿ ಎದುರಾಗಿದೆ. ನಾವು (ಭಾರತ) ದೊಡ್ಡದಾದ ಡೆಲ್ಟಾ ಅಲೆಯನ್ನು ನೋಡಿದ್ದೇವೆ. ನಂತರ ಒಮಿಕ್ರಾನ್ ಬಂತು. ಬೂಸ್ಟರ್ ಡೋಸ್​ಗಳನ್ನು ಮುಂದುವರಿಸಿದ್ದೇವೆ. ನಾವು ಚೀನಾಗಿಂತ ಹಲವು ರೀತಿಯಲ್ಲಿ ಭಿನ್ನರಾಗಿದ್ದೇವೆ. ಚೀನಾದಲ್ಲಿ ಆಗುತ್ತಿರುವುದು ಇಲ್ಲಿ ಸಂಭವಿಸದಿರ ಬಹುದು. ಹೀಗಾಗಿ ಅಸಡ್ಡೆ ಮಾಡದೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಭಾರತದಲ್ಲಿ ಪ್ರಸ್ತುತ ಕೋವಿಡ್ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದಿದ್ದಾರೆ.
ದೇಶದಲ್ಲಿ 227 ಹೊಸ ಪ್ರಕರಣ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕರೊನಾ ವೈರಸ್​ನ 227 ಹೊಸ ಪ್ರಕರಣಗಳು ದಾಖಲಾಗಿವೆ. ಚೇತರಿಕೆ ಪ್ರಮಾಣ ಶೇ. 98.80ಕ್ಕೆ ತಲುಪಿದ್ದು, ಚೇತರಿಸಿಕೊಂಡವರ ಸಂಖ್ಯೆ 4,41,42,989ಕ್ಕೇರಿದೆ. 27 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕೇಸ್​ಗಳ ಸಂಖ್ಯೆ 3,424ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೈನಂದಿನ ಕರೊನಾ ಸಂಖ್ಯೆ ಪ್ರಕಟಣೆ ನಿಲ್ಲಿಸಿದ ಚೀನಾ:ಚೀನಾದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಅಂಕಿ-ಅಂಶಗಳನ್ನು ಕಳೆದ 3 ವರ್ಷಗಳಿಂದ ಪ್ರಕಟಿಸು ತ್ತಿದ್ದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ಭಾನುವಾರದಿಂದ ಡೇಟಾವನ್ನು ಪ್ರಕಟಿಸುವುದಿಲ್ಲ ಎಂದು ತಿಳಿಸಿದೆ. ಸಂಬಂಧಿತ ಕೋವಿಡ್ ಮಾಹಿತಿಯನ್ನು ಚೀನಿ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಉಲ್ಲೇಖ ಮತ್ತು ಸಂಶೋಧನೆಗಾಗಿ ಪ್ರಕಟಿಸುತ್ತದೆ ಎಂದು ಅದು ಹೇಳಿದೆ.
ನಾಳೆ ನಡೆಯಲಿದೆ ಸಿದ್ಧತೆಯ ತಾಲೀಮು:ದೇಶದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಉಲ್ಬಣಗೊಂಡರೆ ಅದನ್ನು ತ್ವರಿತ ವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸು ವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಕೇಂದ್ರಗಳಲ್ಲಿ ಮಂಗಳವಾರ ತಾಲೀಮು ನಡೆಸಬೇಕು ಎಂಬ ಸೂಚನೆ ಯನ್ನು ಕೇಂದ್ರ ಸರ್ಕಾರ ನೆನಪಿಸಿದೆ. ತಾಲೀಮುವಿನಲ್ಲಿ ಹಾಸಿಗೆಗಳ ಲಭ್ಯತೆ, ಐಸೋಲೇಷನ್, ಮಾನವ ಸಂಪನ್ಮೂಲ, ಲಾಜಿಸ್ಟಿಕ್ ಮತ್ತು ಆಮ್ಲಜನಕ ಪೂರೈಕೆ ಸರಪಳಿ ಸೇರಿದಂತೆ ಕೈಗೊಂಡಿರುವ ಎಲ್ಲ ಆರೋಗ್ಯ ಕ್ರಮಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಖಾತ್ರಿ ಪಡಿಸಿಕೊಳ್ಳಬೇಕಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶನಿವಾರ ಪತ್ರ ಬರೆದಿದ್ದಾರೆ.
ದೈನಿಕ ಕೇಸ್ ದ್ವಿಗುಣ ಸಾಧ್ಯತೆ:ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಸುಮಾರು ಹತ್ತು ಲಕ್ಷ ಹೊಸ ದೈನಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ. ರಾಷ್ಟ್ರವ್ಯಾಪಿ ಪ್ರಕರಣಗಳ ದಾಖಲೆಯ ಉಲ್ಬಣದ ಹೊರತಾಗಿಯೂ ಚೀನಾ ಐದು ದಿನಗಳವರೆಗೆ ಯಾವುದೇ ಕೋವಿಡ್ ಸಾವನ್ನು ವರದಿ ಮಾಡಿಲ್ಲ.
ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
