ನವದೆಹಲಿ:ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್​ಟಿ) ಸಂಬಂಧಿಸಿದಂತೆ ರಾಜ್ಯಗಳಿಗೆ ಹಣ ಪಾವತಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಆದರೆ, ರಾಜ್ಯಗಳು ಲೇಖಪಾಲರಿಂದ (ಅಕೌಂಟೆಂಟ್ ಜನರಲ್- ಎಜಿ) ಸಂಬಂಧಿಸಿದ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಸೋಮವಾರ ತಿಳಿಸಿದರು.
ಜಿಎಸ್​ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಕಳೆದೈದು ವರ್ಷಗಳಿಂದ ರಾಜ್ಯಗಳಿಗೆ ನಿರಂತರವಾಗಿ ಪಾವತಿ ಮಾಡಲಾಗುತ್ತಿದೆ. ಈವರೆಗಿನ ಲೆಕ್ಕದಂತೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಸೆಸ್ (ಹೆಚ್ಚುವರಿ ಸುಂಕ) ಸಂಗ್ರಹವಾದ ಎಲ್ಲವನ್ನೂ ರಾಜ್ಯಗಳಿಗೆ ಹಂಚಲಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇರಿಸಿರುವ ರಾಜ್ಯಗಳು ಎಜಿಗಳ ಮೂಲಕ ಸೂಕ್ತ ಪ್ರಮಾಣ ಪತ್ರವನ್ನು ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದು. ಎಜಿ ಪ್ರಮಾಣ ಪತ್ರ ಸಲ್ಲಿಕೆಯಲ್ಲಿ ವಿಳಂಬವಾದರೆ ಪರಿಹಾರ ಬಿಡುಗಡೆಯೂ ತಡವಾಗುತ್ತದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ಹೇಳಿದರು.
ಸಂಸ್ಕೃತ, ಹಿಂದಿಗೆ ರಾಷ್ಟ್ರೀಯ ಸ್ಥಾನಕ್ಕೆ ಒತ್ತಾಯ: ದೇವಭಾಷೆಯಾದ ಸಂಸ್ಕೃತ ಮತ್ತು ಭಾರತದಲ್ಲಿ ಬಹುರಾಜ್ಯಗಳ ಮಾತನಾಡುವ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಉತ್ತರ ಪ್ರದೇಶದ ಹಮೀರ್ಪರ್ ಕ್ಷೇತ್ರದ ಬಿಜೆಪಿ ಸಂಸದ ಪುಷ್ಪೇಂದ್ರ ಸಿಂಗ್ ಚಾಂಡೆಲ್ ಒತ್ತಾಯಿಸಿದರು. ಭಾರತದಲ್ಲಿ ಅಧಿಕೃತವಾಗಿ ಯಾವುದೇ ಭಾಷೆಗೆ ರಾಷ್ಟ್ರೀಯ ಭಾಷೆ ಎಂಬ ಪುರಸ್ಕಾರ ಇಲ್ಲ. ಆದರೆ, ಸಂವಿಧಾನದ 343ನೇ ವಿಧಿಯಲ್ಲಿ ದೇವನಾಗರಿ ಲಿಪಿ ಹೊಂದಿರುವ ಹಿಂದಿಯನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆ ಎಂದು ಹೇಳಲಾಗಿದೆ. ಇದರೊಟ್ಟಿಗೆ 22 ಭಾಷೆಗಳನ್ನು ಗುರುತಿಸಲಾಗಿದೆ. ಅವೆಲ್ಲವುಗಳನ್ನು ಸಮನ್ವಯಗೊಳಿಸುವ ತಾಯಿ ಭಾಷೆ ಸಂಸ್ಕೃತ. ಹೀಗಾಗಿ ಸಂಸ್ಕೃತ ಮತ್ತು ಹಿಂದಿಗಳಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಮಸೂದೆಗೆ ಸಂಸತ್ ಒಪ್ಪಿಗೆ:ಪಳಯುಳಿಕೆಯಲ್ಲದ ಇಂಧನ ಮೂಲ ಮತ್ತು ಕಾರ್ಬನ್ ಕ್ರೆಡಿಟ್ ವ್ಯಾಪಾರಕ್ಕೆ ಉತ್ತೇಜನ ನೀಡುವ ತಿದ್ದುಪಡಿ ಮಸೂದೆಗೆ ಸಂಸತ್ ಒಪ್ಪಿಗೆ ನೀಡಿದೆ. ಈ ಮಸೂದೆಯಿಂದ ಜೈವಿಕ ಮೂಲದ ಇಂಧನ, ಎಥನಾಲ್, ಹಸಿರು ಜಲಜನಕಗಳ ವ್ಯಾಪಾರಕ್ಕೆ ಅನುಕೂಲ ಆಗಲಿದೆ. ಈ ಮಸೂದೆಗೆ ಲೋಕಸಭೆ ಮಳೆಗಾಲದ ಅಧಿವೇಶನದಲ್ಲೇ ಒಪ್ಪಿಗೆ ನೀಡಿತ್ತು.
ಜಾತಿ-ಧರ್ಮ ಉಲ್ಲೇಖಿಸಿದರೆ ಹುಷಾರ್:ಸದನ ಸದಸ್ಯರನ್ನು ಜಾತಿ ಇಲ್ಲವೆ ಧರ್ಮದ ಮೂಲಕ ಉಲ್ಲೇಖಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕಾರಣ ಅವರು ಹಿಂದಿಯಲ್ಲಿ ಪ್ರಾವೀಣ್ಯತೆಯಿಂದ ಕೆಲವು ಟೀಕೆ-ಟಿಪ್ಪಣಿ ಮಾಡಿದ್ದಾರೆ ಎಂದು ಕಾಂಗ್ರೆಸ್​ನ ಸಂಸದ ಎ.ಆರ್.ರೆಡ್ಡಿ ಹೇಳಿದರು. ಜತೆಗೆ ಅವರು ತಮ್ಮ ಸಮುದಾಯವನ್ನೂ ಉಲ್ಲೇಖಿಸಿ ಮಾತನಾಡಿದರು. ಇದರಿಂದ ಕುಪಿತರಾದ ಸ್ಪೀಕರ್, ಜನರು ಜಾತಿ, ಧರ್ಮದ ಆಧಾರದಲ್ಲಿ ಸಂಸದರನ್ನು ಆಯ್ಕೆ ಮಾಡಿ ಇಲ್ಲಿಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
2000 ರೂ. ನೋಟ್ ನಿಷೇಧಿಸಿ:ನೋಟು ಅಮಾನ್ಯೀಕರಣದ ನಂತರ ಚಲಾವಣೆಗೆ ಬಂದ 2000 ಮುಖಬೆಲೆಯ ನೋಟನ್ನು ನಿಷೇಧಿಸುವಂತೆ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ಒತ್ತಾಯಿಸಿದರು. 2000ದ ನೋಟುಗಳನ್ನು ಹೊಂದಿರುವವರು ಅವುಗಳನ್ನ ಬ್ಯಾಂಕ್​ಗಳಿಗೆ ಜಮೆ ಮಾಡಲು ಎರಡು ವರ್ಷ ಕಾಲಾವಕಾಶ ನೀಡಿ, ಅವುಗಳ ಚಲಾವಣೆಯನ್ನು ನಿಲ್ಲಿಸಬೇಕು ಎಂದು ಶೂನ್ಯವೇಳೆ ಕಲಾಪದಲ್ಲಿ ಆಗ್ರಹಿಸಿದರು.
ಕ್ರಿಪ್ಟೊಕರೆನ್ಸಿ ನಿಷೇಧಕ್ಕೆ ಉದಾಸಿ ಆಗ್ರಹ:ದೇಶದಲ್ಲಿ ಕ್ರಿಪ್ಟೊಕರೆನ್ಸಿಯನ್ನು ನಿಷೇಧಿಸಿ ಆದರೆ, ಬ್ಲಾಕ್​ಚೈನ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸಿ. ಇದರಿಂದ ಜನ ಜೀವನ ಮತ್ತು ಬೆಳವಣಿಗೆ ಸಲೀಸಾಗುತ್ತದೆ ಎಂದು ಕರ್ನಾಟಕದ ಹಾವೇರಿಯ ಸಂಸದ ಶಿವಕುಮಾರ ಉದಾಸಿ ಲೋಕಸಭೆಯಲ್ಲಿ ಒತ್ತಾಯಿಸಿದರು.

ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 20 =
Remember me
