ಲಂಡನ್:ಜಗತ್ತನ್ನು ತತ್ತರಗೊಳಿಸಿದ ಕರೊನಾ ವೈರಸ್ ಚೀನಾದ ವುಹಾನ್​ನ ಪ್ರಯೋಗಾಲಯದಿಂದ ಸೋರಿಕೆ ಆಗಿದ್ದಿರಬಹುದೆಂಬ ಅಭಿಪ್ರಾಯಕ್ಕೆ ಮತ್ತೊಮ್ಮೆ ಪುಷ್ಟಿ ಕೊಡುವಂಥ ವಿದ್ಯಮಾನ ನಡೆದಿದೆ. ಕೆನಡಾದ ವೈರಾಣು ಜೀವಶಾಸ್ತ್ರಜ್ಞೆಯೊಬ್ಬರು ಬ್ರಿಟನ್​ನ ಸರ್ವ ಪಕ್ಷ ಸಂಸತ್ ಸದಸ್ಯರ ಸಮಿತಿಗೆ ಈ ಮಾಹಿತಿ ನೀಡಿದ್ದಾರೆ.
ಜೀನ್ ಥೆರಪಿ ಮತ್ತು ಸೆಲ್ ಇಂಜಿನಿಯರಿಂಗ್​ನಲ್ಲಿ ವಿಶೇಷಜ್ಞೆಯಾಗಿ ರುವ ಅಲಿನಾ ಚಾನ್ ಸಮಿತಿಗೆ ವರದಿ ನೀಡಿದ್ದಾರೆ. ಮೊದಲಿನಿಂದಲೂ ಅಮೆರಿಕ ಸಹಿತ ಹಲವು ದೇಶಗಳು ಲ್ಯಾಬ್ ಲೀಕ್ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರೂ ಚೀನಾ ಅದನ್ನು ನಿರಾಕರಿಸುತ್ತಾ ಬಂದಿದೆ. ಮಹಾಮಾರಿಗೆ ಪ್ರಯೋಗಾಲಯ ಸೋರಿಕೆಯೇ ಮೂಲವಾಗಿರುವ ಸಾಧ್ಯತೆ ಬಗ್ಗೆ ಸಂಸದೀಯ ಸಮಿತಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಾನ್, ಅದರ ಸಾಧ್ಯತೆಯೇ ಅಧಿಕವಾಗಿದೆ ಎಂದರು. ಈ ಹಂತದಲ್ಲಿ ನೈಸರ್ಗಿಕ ಮೂಲದ ಸಾಧ್ಯತೆ ಕಡಿಮೆ ಎಂದರು.
ಹುನಾನ್ ಸೀಫುಡ್ ಮಾರುಕಟ್ಟೆಯಲ್ಲಿ ಮಾನವರಿಂದ ಅಪಾರ ಪ್ರಮಾಣದಲ್ಲಿ ವೈರಸ್ ಹರಡಿದ ಘಟನೆ ನಡೆದಿದೆಯಾದರೂ ಆ ಮಾರುಕಟ್ಟೆಯಲ್ಲಿ ನೈಸರ್ಗಿಕ ಪ್ರಾಣಿ ಮೂಲದಿಂದ ವೈರಸ್ ಹುಟ್ಟಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಚಾನ್ ವಿವರಿಸಿದ್ದಾರೆ. ಭಾರತದಲ್ಲಿ 73ಕ್ಕೇರಿದ ಒಮಿಕ್ರಾನ್ ಕೇಸ್: ತಮಿಳುನಾಡು, ತೆಲಂಗಾಣ ಮತ್ತು ಬಂಗಾಳ ರಾಜ್ಯಗಳಲ್ಲಿ ಒಮಿಕ್ರಾನ್ ಕೇಸ್​ಗಳು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಕರೊನಾ ವೈರಸ್​ನ ಹೊಸ ತಳಿಯ ಪ್ರಕರಣಗಳ ಸಂಖ್ಯೆ 73ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚಿನ 32 ಒಮಿಕ್ರಾನ್ ಸೋಂಕಿತರಿದ್ದಾರೆ. ಕೇರಳದಲ್ಲಿ ಇನ್ನೂ ನಾಲ್ಕು ಒಮಿಕ್ರಾನ್ ಕೇಸ್ ದೃಢಪಟ್ಟಿದೆಯೆಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ರಾತ್ರಿ ಹೇಳಿದ್ದಾರೆ. ಇದರೊಂದಿಗೆ ಕೇರಳದ ಒಮಿಕ್ರಾನ್ ಕೇಸ್ ಐದಕ್ಕೇರಿದೆ. ದೆಹಲಿಯಲ್ಲಿ ಇದುವರೆಗೆ ಹೊಸ ರೂಪಾಂತರಿಯ 10 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಕರ್ನಾಟಕ, ರಾಜಸ್ಥಾನ, ಗುಜರಾತ್, ಆಂಧ್ರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದಿಂದಲೂ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಯುರೋಪ್​ನಲ್ಲಿ ಆತಂಕ:ಮುಂದಿನ ಜನವರಿ ಮಧ್ಯ ಭಾಗದೊಳಗೆ ಯುರೋಪ್ ನಲ್ಲಿ ಒಮಿಕ್ರಾನ್ ಹಾವಳಿ ಹೆಚ್ಚಾಗಲಿದೆ ಎಂದು ಐರೋಪ್ಯ ಒಕ್ಕೂಟದ ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರು ಹಾಗೂ ಸಾವಿನ ಸಂಖ್ಯೆ ತೀವ್ರವಾಗಿ ಏರಬಹುದು ಎಂದಿದ್ದಾರೆ. ‘ಮಹಾಮಾರಿ ನಡುವೆ ಇನ್ನೊಂದು ಕ್ರಿಸ್ಮಸ್ ಎದುರಿಸುತ್ತಿದ್ದೇವೆ’ ಎಂದು ಯುರೋಪಿಯನ್ ಕಮಿಷನ್​ನ ಅಧ್ಯಕ್ಷ ಉರ್ಸಲಾ ವಾನ್ ಡೆರ್ ಲೇಯನ್ ಐರೋಪ್ಯ ಸಂಸತ್ತಿನಲ್ಲಿ ಹೇಳಿದ್ದಾರೆ. ಒಕ್ಕೂಟದ ದೇಶಗಳಲ್ಲಿ ಪ್ರತಿ ಎರಡು-ಮೂರು ದಿನಕ್ಕೊಮ್ಮೆ ಸೋಂಕು ಪ್ರಕರಣ ದುಪ್ಪಟ್ಟುಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ:ಕರೊನಾ ಮಹಾಮಾರಿಯ ಎರಡನೇ ಅಲೆ ವೇಳೆ ರಾಜ್ಯದಲ್ಲಿ ಯಾರೊಬ್ಬರೂ ಆಮ್ಲಜನಕ ಕೊರತೆಯಿಂದ ಮೃತಪಟ್ಟಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದೆ. ಆದರೆ ಸರ್ಕಾರದ ವಾದವನ್ನು ಪ್ರತಿಪಕ್ಷಗಳು ಒಪ್ಪಿಲ್ಲ.
ಡೆಲ್ಟಾಕ್ಕಿಂತ 70 ಪಟ್ಟು ಅಧಿಕ ವೇಗ:ಡೆಲ್ಟಾ ಪ್ರಭೇದಕ್ಕಿಂತ ಒಮಿಕ್ರಾನ್ ರೂಪಾಂತರಿ 70 ಪಟ್ಟು ಹೆಚ್ಚು ವೇಗದಲ್ಲಿ ಸೋಂಕು ಉಂಟು ಮಾಡುತ್ತದೆ. ಆದರೆ ರೋಗ ತೀವ್ರವಾಗಿರು ವುದಿಲ್ಲ ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ಮೂಲ ಸಾರ್ಸ್ ಸಿಒವಿ 2 ವೈರಸ್​ಗೆ ಹೋಲಿಸಿದರೆ ಒಮಿಕ್ರಾನ್ ವೈರಸ್ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿ ಶ್ವಾಸಕೋಶಕ್ಕೆ ಹಾನಿ ಎಸಗುತ್ತದೆ ಎಂದೂ ಸಂಶೋಧಕರು ಹೇಳಿದ್ದಾರೆ.
135.25 ಕೋಟಿ ಡೋಸ್ ಲಸಿಕೆ:ದೇಶದಾದ್ಯಂತ ನಡೆದ ಲಸಿಕೆ ಅಭಿಯಾನದಲ್ಲಿ ಇದುವರೆಗೆ 135.25 ಕೋಟಿ ಡೋಸ್​ಗೂ ಅಧಿಕ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಬೆಳಗ್ಗೆವರೆಗಿನ ಮಾಹಿತಿಯಂತೆ 135,25,36,986 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಜ.16ರಂದು ಲಸಿಕೆ ಅಭಿಯಾನ ಆರಂಭವಾಗಿತ್ತು.
ಬೂಸ್ಟರ್ ಡೋಸ್​ನಿಂದ ರಕ್ಷಣೆ:ಅಮೆರಿಕದಲ್ಲಿ ಮಾಡರ್ನಾ, ಫೈಜರ್/ಬಯೋಎನ್​ಟೆಕ್ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳು ಬಳಕೆಯಲ್ಲಿವೆ. ಆದರೆ ಆ ಪೈಕಿ ಯಾವುದೂ ಕರೊನಾ ವೈರಸ್​ನ ಹೊಸ ತಳಿ ಒಮಿಕ್ರಾನ್ ವಿರುದ್ಧ ಸಾಕಷ್ಟು ರಕ್ಷಣೆ ನೀಡುವುದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆದರೆ, ಅವುಗಳ ಬೂಸ್ಟರ್ ಡೋಸ್ ನೀಡಿಕೆಯಿಂದ ರಕ್ಷಣೆ ಸಿಗುತ್ತದೆ ಎಂದು ಹಾರ್ವರ್ಡ್​ನ ಮೆಸಾಚುಯೆಟ್ಸ್ ಜನರಲ್ ಹಾಸ್ಪಿಟಲ್, ಮೆಸಾಚುಯೆಟ್ಸ್ ತಂತ್ರಜ್ಞಾನ ಸಂಸ್ಥೆ (ಎಂಐಟಿ) ಸಂಶೋಧಕರು ಹೇಳಿದ್ದಾರೆ.
ಅಮೆರಿಕದಲ್ಲಿ ಲಾಕ್​ಡೌನ್ ಇಲ್ಲ:ಎರಡು ವರ್ಷದ ಹಿಂದೆ ಕಾಲಿಟ್ಟ ಕೋವಿಡ್ ಮಹಾಮಾರಿಯಿಂದ ಜಗತ್ತಿನಲ್ಲೇ ಅತಿ ಹೆಚ್ಚು ಸಾವು ಸಂಭವಿಸಿರುವ ಅಮೆರಿಕದಲ್ಲಿ ಡೆಲ್ಟಾ ವೈರಸ್ ಹೆಚ್ಚಿನ ಹಾವಳಿ ನಡೆಸುತ್ತಿರುವ ಜತೆಗೆ ಒಮಿಕ್ರಾನ್ ಕೂಡ ಅಧಿಕ ಪ್ರಮಾಣದಲ್ಲಿ ಕಾಡತೊಡಗಿದೆ. ಇದು ಆತಂಕಕ್ಕೆ ಕಾರಣವಾಗಿದೆಯಾದರೂ ವ್ಯಾಕ್ಸಿನ್ ಲಭ್ಯವಿರುವುದರಿಂದ ಲಾಕ್​ಡೌನ್ ಅಗತ್ಯವಿಲ್ಲ ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ. ವೈರಸ್​ನ ಅತಿ ಕೆಟ್ಟ ಸನ್ನಿವೇಶದಲ್ಲೂ ರಕ್ಷಣೆ ಒದಗಿಸುವ ಲಸಿಕೆಗಳು ಲಭ್ಯವಿವೆ. ಹೀಗಾಗಿ ಲಾಕ್​ಡೌನ್ ಹೇರುವ ಅಗತ್ಯ ಎದುರಾಗದು ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಾದದ ಕಿಡಿ ಹೊತ್ತಿಸಿದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಮಾತು…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 6 =
Remember me
