ನವದೆಹಲಿ:ಜನಧನ, ಮೂಲ ಉಳಿತಾಯ (ಬಿಎಸ್​ಬಿಡಿ) ಬ್ಯಾಂಕ್ ಖಾತೆದಾರರಿಗೆ ಹೆಚ್ಚುವರಿ ಸೇವಾ ಶುಲ್ಕ ವಿಧಿಸಿಲ್ಲ್ಲ ಎಂದು ಹಣಕಾಸು ಸಚಿವಾಲಯ ಹಾಗೂ ಆರ್​ಬಿಐ ಮಂಗಳವಾರ ಸ್ಪಷ್ಟಪಡಿಸಿವೆ.
ಸಾರ್ವಜನಿಕ ವಲಯದ ಬ್ಯಾಂಕ್​ಗಳು ನ.1ರಿಂದ ಸೇವಾ ಶುಲ್ಕ ಹೆಚ್ಚಿಸಿರುವ ಕುರಿತ ವರದಿ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ. 41.43 ಕೋಟಿ ಜನಧನ ಖಾತೆ ಸಹಿತ ಒಟ್ಟು 60.64 ಕೋಟಿ ಬಿಎಸ್​ಬಿಡಿ ಖಾತೆಗಳಿವೆ. ಸಾಮಾನ್ಯ ಉಳಿತಾಯ ಖಾತೆ, ಚಾಲ್ತಿ ಖಾತೆ, ನಗದು ಕ್ರೆಡಿಟ್ ಖಾತೆ ಮತ್ತು ಓವರ್​ಡ್ರಾಫ್ಟ್ ಖಾತೆಗಳಿಗೆ ಸಂಬಂಧಿಸಿ ಯಾವುದೇ ಸೇವಾ ಶುಲ್ಕ ಹೆಚ್ಚಿಸಿಲ್ಲ.
ತಿಂಗಳಿಗೆ ಮೂರು ಸಾರಿ ಹಣ ಜಮಾ, ವಿತ್​ಡ್ರಾವಲ್​ಗೆ ಯಾವುದೇ ಶುಲ್ಕವಿಲ್ಲ. ನಾಲ್ಕನೇ ವಹಿವಾಟಿಗೆ ಶುಲ್ಕ ತೆರಬೇಕು ಎಂದು ಹೇಳಲಾಗಿತ್ತು. ಬ್ಯಾಂಕ್ ಆಫ್ ಬರೋಡಾ ಇದನ್ನು ನ.1ರಿಂದ ಜಾರಿಗೆ ತಂದಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬದಲಾವಣೆಗಳನ್ನು ವಾಪಸ್ ಪಡೆಯಲು ಅದು ನಿರ್ಧರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
