ವಾಷಿಂಗ್ಟನ್: ಭಾರತ-ಅಮೆರಿಕ ವಾಣಿಜ್ಯ ಬಾಂಧವ್ಯದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂದಿನ ವಾರ ಭಾರತ ಭೇಟಿ ವೇಳೆ ಉಭಯ ದೇಶಗಳು ಯಾವುದೇ ಮಹತ್ವದ ವಾಣಿಜ್ಯ ಒಡಂಬಡಿಕೆಗೆ ಸಹಿ ಹಾಕುವ ಸಂಭವವಿಲ್ಲ ಎಂಬ ಸುಳಿವು ನೀಡಿದರು.
ಫೆಬ್ರವರಿ 24-25ರ ಭೇಟಿ ವೇಳೆ ಭಾರತ ಮತ್ತು ಅಮೆರಿಕ ವಾಣಿಜ್ಯ ಒಪ್ಪಂದವೊಂದಕ್ಕೆ ಸಹಿ ಹಾಕುವ ಸಂಭವವಿದೆಯೆಂಬ ಮಾಧ್ಯಮ ವರದಿಗಳತ್ತ ಅಧ್ಯಕ್ಷರ ಗಮನಕ್ಕೆ ತಂದಾಗ, ಟ್ರಂಪ್ ಈ ರೀತಿ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಆದರೆ, ನವೆಂಬರ್​ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೂ ಮುಂಚೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಭಾರತ ಪ್ರವಾಸದ ವೇಳಾಪಟ್ಟಿ
ಫೆ.24 ಬೆಳಗ್ಗೆ 11- ಗುಜರಾತ್​ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲನಿಯಾರನ್ನು ಪ್ರಧಾನಿ ನರೇಂದ್ರ ಮೋದಿ ಸ್ವತಃ ಸ್ವಾಗತಿಸಲಿದ್ದಾರೆ. ನಂತರ ಏರ್​ಪೋರ್ಟ್​ನಿಂದ ಮೊಟೆರಾ ಸ್ಟೇಡಿಯಂವರೆಗೆ ಮೋದಿ ಮತ್ತು ಟ್ರಂಪ್ ರೋಡ್ ಷೋ. ಮಾರ್ಗ ಮಧ್ಯೆ ಸಬರಮತಿ ಆಶ್ರಮಕ್ಕೆ ಭೇಟಿ.
ಮಧ್ಯಾಹ್ನ 12.30- ಮೊಟೆರಾ ಸ್ಟೇಡಿಯಂನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ.
1.10 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ. ಸುಮಾರು 3 ತಾಸುಗಳ ಕಾರ್ಯಕ್ರಮ.
3.30- ಅಹಮದಾಬಾದ್​ನಿಂದ ಆಗ್ರಾಕ್ಕೆ ಪಯಣ
ಸಂಜೆ 5- ಟ್ರಂಪ್ ದಂಪತಿಯಿಂದ ತಾಜ್​ವುಹಲ್ ವೀಕ್ಷಣೆ. ರಾತ್ರಿ ದೆಹಲಿಗೆ ಆಗಮಿಸಿ ಹೋಟೆಲ್​ನಲ್ಲಿ ವಿಶ್ರಾಂತಿ.
ಫೆ.25 ಬೆಳಗ್ಗೆ 10- ಟ್ರಂಪ್ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ.
10.45- ರಾಜ್​ಘಾಟ್​ಗೆ ಟ್ರಂಪ್ ದಂಪತಿ ಭೇಟಿ, ಬಾಪು ಸ್ಮಾರಕಕ್ಕೆ ನಮನ.
11 .30- ದೆಹಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಂತರ ಜಂಟಿ ಸುದ್ದಿಗೋಷ್ಠಿ .
ಮಧ್ಯಾಹ್ನ 3- ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಇಒಗಳ ದುಂಡುಮೇಜಿನ ಸಭೆ. ನಂತರ ಅಮೆರಿಕಗೆ ನಿರ್ಗಮನ.
ಟ್ರಂಪ್ ಪ್ರತಿಮೆಗೆ ಪೂಜೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಅವರ ಅಪ್ಪಟ ಅಭಿಮಾನಿಯಾದ ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ ಬಸ್ಸಾ ಕೃಷ್ಣ, ಟ್ರಂಪ್ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಟ್ರಂಪ್ ಕನಸಲ್ಲಿ ಬಂದಾಗಿನಿಂದ ಅವರನ್ನು ಗೌರವಿಸುತ್ತಿರುವೆ. ಈ ಕನಸಿನ ನಂತರ ಉದ್ಯಮದಲ್ಲಿ ಭಾರಿ ಪ್ರಗತಿಯಾಗಿ ಅದೃಷ್ಟ ಖುಲಾಯಿಸಿತು. ಹೀಗಾಗಿ ತನ್ನ ಮನೆಯನ್ನೇ ಮಂದಿರವಾಗಿ ಪರಿವರ್ತಿಸಿ ಟ್ರಂಪ್​ರ ಆಳೆತ್ತರದ ಮೂರ್ತಿ ಸ್ಥಾಪಿಸಿದ್ದಾಗಿ ಕೃಷ್ಣ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
