ಮುಂಬೈ:ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಸೆಣೆಸಿದ ಕಾಂಗ್ರೆಸ್​ ನೇತೃತ್ವದ ಯುಪಿಎ ಈಗಿಲ್ಲ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ)​ ಮುಖ್ಯಸ್ಥೆ ಹಾಗೂ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ ನಂತರ ಅವರು ಸುದ್ದಿಗಾರರಿಗೆ ಈ ಮಾತು ಹೇಳಿದ್ದಾರೆ.
“ಪ್ರಚಲಿತ ಕಟ್ಟಾವಾದ ಮತ್ತು ಸರ್ವಾಧಿಕಾರದ ವಿರುದ್ಧ ಯಾರೂ ಹೋರಾಡುತ್ತಿಲ್ಲವಾದ್ದರಿಂದ ಒಂದು ದೃಢವಾದ ಪರ್ಯಾಯ ಮಾರ್ಗವನ್ನು ರಚಿಸಬೇಕು. ಶರದ್​​ಜಿ ಹಿರಿಯ ನಾಯಕ ಮತ್ತು ನಾನು ನಮ್ಮ ರಾಜಕೀಯ ಪಕ್ಷಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಶರದ್​​ಜೀ ಹೇಳಿದ್ದನ್ನೆಲ್ಲ ನಾನು ಒಪ್ಪುತ್ತೇನೆ. ಈಗ ಯುಪಿಎ ಇಲ್ಲ” ಎಂದು ಬ್ಯಾನರ್ಜಿ ಹೇಳಿದರು.
ಇದನ್ನೂ ಓದಿ:ಮಹಿಳಾ ಸದಸ್ಯರೊಂದಿಗೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೆಲ್ಫಿ! ಶೀರ್ಷಿಕೆ ನೋಡಿ ಸಿಟ್ಟಾದ ನೆಟ್ಟಿಗರು
ಶರದ್​ ಪವಾರ್​ ಮಾತನಾಡಿ, ಎಲ್ಲಾ ಸಮಾನ ಮನಸ್ಕರು ಒಟ್ಟಾಗಿ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ನಾಯಕತ್ವ ರಚಿಸಬೇಕು ಎಂಬುದು ಮಮತಾರ ಅಭಿಪ್ರಾಯ. ಈ ನಿಟ್ಟಿನಲ್ಲಿ ಫಲಪ್ರದವಾದ ಚರ್ಚೆ ನಡೆಸಿದ್ದೇವೆ. ನಮ್ಮ ಚಿಂತನೆ ಚುನಾವಣೆಯ ಬಗೆಗಿದೆ ಎಂದರು. ಕಾಂಗ್ರೆಸ್​ ಇರಲಿ, ಯಾರೇ ಇರಲಿ, ಬಿಜೆಪಿ ವಿರುದ್ಧ ಒಟ್ಟಾಗಿ ಬಂದಲ್ಲಿ ಅವರಿಗೆ ಸ್ವಾಗತವಿದೆ ಎಂದರು.
ಮಹಾರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿರುವ ಬ್ಯಾನರ್ಜಿ, ಶಿವಸೇನಾ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್​ ರೌತ್​ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದರು. ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳೂ ಒಂದಾಗಬೇಕು ಎಂದು ಬ್ಯಾನರ್ಜಿ ಹೇಳುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ಅವರ ದೆಹಲಿ ಭೇಟಿಯ ನಂತರ ಅವರು ಕಾಂಗ್ರೆಸ್​​ಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವ ಬಗ್ಗೆ ತಳೆದ ಹಾಗಿದೆ.(ಏಜೆನ್ಸೀಸ್)
ದೇಶಕ್ಕೆಲ್ಲಾ ಒಂದೇ ನೀತಿ! ಕೇಂದ್ರದ ಪ್ರಯಾಣ ನಿರ್ಬಂಧಗಳನ್ನು ತಕ್ಷಣ ಜಾರಿಗೊಳಿಸಲು ಮಹಾ ಸರ್ಕಾರಕ್ಕೆ ಸೂಚನೆ

‘ಪವರ್​ಫುಲ್​ ವುಮೆನ್​​ 2021’ ಪಟ್ಟಿಯಲ್ಲಿ ನೀತಾ ಅಂಬಾನಿ ಹೆಸರು; ಕರೊನಾ ಸಂಕಷ್ಟಕ್ಕೆ ಮಿಡಿದ ಹೃದಯಕ್ಕೆ ಸಂದ ಗೌರವ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − 3 =
Remember me
