ಬೆಂಗಳೂರು:ಸಾಮಾಜಿಕ ಜಾಲತಾಣ ಹಾಗೂ ಮೆಸೇಜಿಂಗ್ ಆ್ಯಪ್​ನ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಇರುವ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್ ಕೆಲವು ದಿನಗಳ ಹಿಂದೆ ಸ್ಥಗಿತಗೊಂಡು ಜನರು ಪರದಾಡುವಂಥ ಸನ್ನಿವೇಶ ಉಂಟಾಗಿತ್ತು.
ಅದೇ ರೀತಿ ಇಂದು ಒಂದಷ್ಟು ಮಂದಿ ಮಾತನಾಡಲು ಆಗದೆ ‘ರೂಮ್’ನಲ್ಲಿ ಚಡಪಡಿಸಿದ ವಿದ್ಯಮಾನವೂ ನಡೆದಿದೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣ ಕ್ಲಬ್‌ಹೌಸ್ ಕೈಕೊಟ್ಟಿದ್ದು. ಸಂವಾದಕ್ಕೆಂದೇ ಇರುವ ಈ ಆ್ಯಪ್ ಇದೇ ಮೊದಲ ಸಲ ದೊಡ್ಡದಾಗಿಯೇ ತಾಂತ್ರಿಕ ಅಡಚಣೆಯನ್ನು ಎದುರಿಸಿದೆ.
ಇದನ್ನೂ ಓದಿ:ಕೈಕೊಟ್ಟ ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್​; ಮೆಸೇಜಿಂಗ್​ನಲ್ಲಿ ಭಾರಿ ವ್ಯತ್ಯಯ!
ಸುಮಾರು ಮೂರು ಗಂಟೆ ಕಾಲ ಅಡಚಣೆ ಉಂಟಾಗಿದೆ. ಪೂರ್ ಕನೆಕ್ಷನ್ ಅಂತ ತೋರಿಸುತ್ತಿದ್ದು, ಬಹಳಷ್ಟು ಮಂದಿ ತಮ್ಮ ಫೋನ್-ಇಂಟರ್‌ನೆಟ್‌ನಲ್ಲೇ ಏನೋ ಸಮಸ್ಯೆ ಇರಬೇಕು ಅಂತ ಸ್ವಿಚ್ ಆಫ್-ಆನ್ ಅಥವಾ ರಿಸ್ಟಾರ್ಟ್ ಮಾಡಿ ಪರೀಕ್ಷಿಸಿಕೊಂಡಿದ್ದೂ ಆಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ತಂಗಿಯನ್ನೇ ಕೊಂದ, ಖಡ್ಗ ಹಿಡಿದು ರಸ್ತೆಯಲ್ಲೇ ರಾಜಾರೋಷವಾಗಿ ನಡೆದ, ಹಾಗೇ ಪೊಲೀಸ್ ಠಾಣೆಗೂ ಹೋದ..!
ರಾತ್ರಿಯ ವೇಳೆಗೆ ಬಹುತೇಕ ಸರಿಯಾಗಿದ್ದು, ಆನಂತರ ಆ ಕುರಿತ ಚರ್ಚೆಗೆಂದೇ ಪ್ರತ್ಯೇಕ ರೂಮ್ ಕ್ರಿಯೇಟ್ ಮಾಡಿ ತಮಗಾದ ಸಮಸ್ಯೆಗಳನ್ನು ಹೇಳಿಕೊಂಡಿದ್ದಲ್ಲದೆ, ಕ್ಲಬ್‌ಹೌಸ್ ಇಲ್ಲ ಅಂತ ಕೆಲವರು ಪರದಾಡಿದ ಪ್ರಸಂಗಗಳ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ. ಇನ್ನು ಸಮಸ್ಯೆ ಬಹುತೇಕ ನಿವಾರಣೆಗೊಂಡ ಬಳಿಕ ಕ್ಲಬ್​ಹೌಸ್​ ಅಧಿಕೃತ ಟ್ವಟರ್ ಖಾತೆಯಿಂದ ನಾವು ಮತ್ತೆ ವಾಪಸ್ ಬಂದಿದ್ದೇವೆ ಎಂದಷ್ಟೇ ಹೇಳಿಕೊಳ್ಳಲಾಗಿದ್ದು, ಆಗಿದ್ದೇನು ಎಂಬುದರ ಬಗ್ಗೆ ಅದು ಸದ್ಯ ಏನನ್ನೂ ಹೇಳಿಕೊಂಡಿಲ್ಲ.

We’re BACK. Just in time for News News News 📰We missed you all!https://t.co/wvsqRGfNJW— Clubhouse (@Clubhouse)October 26, 2021
We’re BACK. Just in time for News News News 📰We missed you all!https://t.co/wvsqRGfNJW

‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
