ಮುಂಬೈ:ಮಜಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ರಾಜ್ಯದಲ್ಲಿ ಲಾಕ್​ಡೌನ್​ ಮಾಡುವ ಬಗ್ಗೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಮಾತನಾಡಿದ್ದಾರೆ. ರಾಜ್ಯದ ಜನರು ಮಾಸ್ಕ್​ ತೊಡದಿದ್ದರೆ ಆ ಸ್ಥಳಗಳಲ್ಲಿ ಲಾಕ್​ಡೌನ್​ ಮಾಡುವುದಾಗಿ ಅವರು ಹೇಳಿದ್ದಾರೆ.
ಜನರು ಮಾಸ್ಕ್​ ಧರಿಸಿ, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಅವರು ಅದರಲ್ಲಿ ವಿಫಲವಾದರೆ ನಾವು ಲಾಕ್​ಡೌನ್​ ಜಾರಿ ಮಾಡಲಿದ್ದೇವೆ. ನಮಗೆ ಅಭಿವೃದ್ಧಿಯನ್ನು ನಿಲ್ಲಿಸುವ ಆಸಕ್ತಿ ಇಲ್ಲ. ಆದರೆ ಜನರು ಅದಕ್ಕೆ ದಾರಿ ಮಾಡಿಕೊಟ್ಟರೆ ನಾವು ಮಾಡಲೇಬೇಕಾಗುತ್ತದೆ. ರಾಜ್ಯಾದ್ಯಂತ ಲಾಕ್​ಡೌನ್​ ಇಲ್ಲ ಆದರೆ ಆಯಾ ಸ್ಥಳಗಳಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಅಮರಾವತಿ ಜಿಲ್ಲೆಯಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಅದರ ಜತೆಯಲ್ಲಿ ಅಕೋಲಾ, ಬುಲ್ಖಾನಾ, ವಾಶಿಮ್ ಮತ್ತು ಯವತ್ಮಾಲ್ ಜಿಲ್ಲೆಗಳ ಕೆಲ ನಗರಗಳಲ್ಲೂ ಭಾಗಶಃ ಲಾಕ್​ಡೌನ್​ ಅನ್ನು ಘೋಷಣೆ ಮಾಡಲಾಗಿದೆ. ಒಂದು ವೇಳೆ ಜನರು ಲಾಕ್​ಡೌನ್​ ನಿಯಮ ಪಾಲಿಸುವಲ್ಲಿ ವಿಫಲವಾದರೆ ಲಾಕ್​ಡೌನ್​ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)
ಈ ಜಿಲ್ಲೆಯಲ್ಲಿ ಒಂದು ವಾರದ ಕಾಲ ಲಾಕ್​ಡೌನ್​ ಜಾರಿ! ನಿಯಮ ಪಾಲಿಸದಿದ್ದರೆ ಲಾಕ್​ಡೌನ್​ ವಿಸ್ತರಣೆ

ಟೈಫಾಯ್ಡ್​ಗೆ ತುತ್ತಾಗಿದ್ದ ಮಗಳಿಗೆ ಭೂತ ಹಿಡಿದಿದೆಯೆಂದು ಆಸ್ಪತ್ರೆಗೆ ದಾಖಲಿಸದ ಅಪ್ಪ! ಕೊನೆಯುಸಿರೆಳೆದ ಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eleven =
Remember me
