ಬೆಂಗಳೂರು:ಡಾ.ಬ್ರೋ ವಿಜಯವಾಣಿ ಕಚೇರಿಯಲ್ಲಿ ನಡೆಸಿದ ವಿಶೇಷ ಸಂವಾದದಲ್ಲಿ ತಮ್ಮ ವಿಶ್ವಪರ್ಯಟನೆ ಕುರಿತು ಹಲವಾರು ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. ಆ ಪೈಕಿ ಅವರ ವಿದೇಶ ಪ್ರವಾಸದ ತಯಾರಿ ಕೂಡ ಪ್ರಮುಖವಾದುದು. ಯಾವುದೇ ದೇಶಕ್ಕೆ ಪ್ರವಾಸ ಹೊರಡುವಾಗ ತಾವು ಗಮನಿಸುವ ಅಂಶಗಳು ಯಾವುವು, ತೆಗೆದುಕೊಳ್ಳುವ ಎಚ್ಚರಿಕೆಗಳು ಏನು ಮತ್ತು ತಮ್ಮೊಂದಿಗೆ ಕೊಂಡೊಯ್ಯುವ ವಸ್ತುಗಳು ಯಾವುವು ಎಂಬೆಲ್ಲ ಮಾಹಿತಿಗಳನ್ನು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೋಗಲ್ಲ: ನಾನು ಯಾವುದೇ ದೇಶಕ್ಕೆ ಹೋಗುವಾಗ ಕೆಲವೊಂದು ಮುನ್ನೆಚ್ಚರಿಕೆ ವಹಿಸುತ್ತೇನೆ. ಮಳೆ ಅಥವಾ ಬೇಸಿಗೆ ಕಾಲದಲ್ಲಿ ಹೋಗಲ್ಲ. ಯಾವುದೇ ದೇಶದಲ್ಲಿ ದಂಗೆ, ಪ್ರತಿಭಟನೆ ಇದ್ದಾಗ ಹೋಗುವುದಿಲ್ಲ. ಅದರಲ್ಲೂ ಯಾವುದಾದರೂ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದರೆ ಅಂಥ ಸಂದರ್ಭಗಳಲ್ಲಿ ಅಲ್ಲಿಗೆ ಕ್ಯಾಮರಾ ಹಿಡಿದುಕೊಂಡು ಹೋಗುವುದು ಅಪಾಯಕಾರಿ ಎನ್ನುತ್ತಾರೆ ಗಗನ್.
ಇದನ್ನೂ ಓದಿ:ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!
ಒಂದೇ ದಿನದಲ್ಲಿ ಅಧ್ಯಯನ: ಯಾವುದೇ ದೇಶಕ್ಕೆ ಹೋಗಲು ನನಗೆ ಒಂದು ದಿನದ ಅಧ್ಯಯನ ಸಾಕು. ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಗೂಗಲ್​ನಲ್ಲಿ ಜಾಲಾಡಿದರೆ ನಾನು ಹೋಗಬೇಕಾದ ದೇಶದ ಸಂಪೂರ್ಣ ಚಿತ್ರಣ ನನಗೆ ಸಿಕ್ಕಿಬಿಡುತ್ತದೆ. ಇನ್ನು ಒಂದು ಸ್ಥಳಕ್ಕೆ ಹೋಗುವಾಗ ಅದರ ಹಿಂದಿನ ದಿನ ಒಂದು ಅರ್ಧ ಗಂಟೆ ನೋಟ್ಸ್​ ಮಾಡಿಟ್ಟುಕೊಂಡರೆ ಸಾಕು ಎನ್ನುತ್ತಾರೆ ಡಾ.ಬ್ರೋ.
ವಿದೇಶಗಳಲ್ಲಿ ಸಾಮಾನ್ಯವಾಗಿ ಮಾಂಸಾಹಾರ ಸುಲಭದಲ್ಲಿ ಸಿಗುತ್ತದೆ, ಸಸ್ಯಾಹಾರ ಕಷ್ಟ. ಅದಕ್ಕಾಗಿ ನಾನು ಹೆಚ್ಚಾಗಿ ತರಕಾರಿ, ಕಾಳುಗಳನ್ನು ಅವಲಂಬಿಸಿರುತ್ತೇನೆ. ನನಗೆ ಅರ್ಧ ಕೆ.ಜಿ. ಟೊಮ್ಯಾಟೋ, ಎರಡು ಸೌತೆಕಾಯಿ ಇದ್ದರೆ ಸಾಕು. ಅದೇ ತಿಂಡಿ-ಊಟ ಆದಂತಾಗುತ್ತದೆ ಎನ್ನುವರು ಅವರು ತಮ್ಮ ಬ್ಯಾಗ್​ನಲ್ಲಿ ಮುಖ್ಯವಾಗಿ ಏನಿರುತ್ತದೆ ಎಂಬುದನ್ನೂ ತಿಳಿಸಿದ್ದಾರೆ.
ಇದನ್ನೂ ಓದಿ:‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!
ನನ್ನ ಬ್ಯಾಗ್​ನಲ್ಲಿ ಕ್ಯಾಮರಾ ಉಪಕರಣಗಳು, ಎರಡು ಪ್ಯಾಂಟ್, ಎರಡು ಶರ್ಟ್, ಒಂದು ವಾಟರ್ ಬಾಟಲ್ ಮತ್ತು ಮೆಡಿಸಿನ್​ಗಳು ಪ್ರಮುಖವಾಗಿ ಇರುತ್ತವೆ ಎಂದು ವಿಜಯವಾಣಿ ಸಂವಾದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ
ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..
Sign in to your account
Please enter an answer in digits:11 − eight =
Remember me
