ನವದೆಹಲಿ:ಕರೊನಾ ಬಂದ ಆರಂಭದಲ್ಲಿ ಸೋಂಕು ಪತ್ತೆ ಹಚ್ಚುವುದೇ ದೊಡ್ಡ ಸಮಸ್ಯೆಯಾಗಿತ್ತು. ಮೊದಮೊದಲು ದುಬಾರಿಯಾಗಿದ್ದ ಕೋವಿಡ್​ ಟೆಸ್ಟ್ ಬರಬರುತ್ತ ಕಡಿಮೆ ಆಗಿ ಈಗ ಬಹುತೇಕ ಉಚಿತವಾಗಿ ಮಾಡಿಸಿಕೊಳ್ಳಬಹುದಾಗಿದೆ. ಆದರೂ ಈಗ ಪರೀಕ್ಷೆ ಮಾಡಿಸಿಕೊಂಡು ಫಲಿತಾಂಶ ತಿಳಿದುಕೊಳ್ಳಲು ಹೆಚ್ಚೂಕಡಿಮೆ ಒಂದು ದಿನ ಕಾಯಬೇಕು. ಆದರೆ ಇಲ್ಲೆರಡು ನಾಯಿಗಳು ವ್ಯಕ್ತಿ ಕೋವಿಡ್​-19 ಪಾಸಿಟಿವ್ ಹೌದೋ ಅಲ್ಲವೋ ಎಂಬುದನ್ನು ಕೆಲವೇ ಸೆಕೆಂಡ್​ಗಳಲ್ಲೇ ಕಂಡು ಹಿಡಿಯುತ್ತಿವೆ.
ಹೌದು.. ಈ ನಾಯಿಗಳ ಹೆಸರು ಕ್ಯಾಸ್ಪರ್ ಮತ್ತು ಜಯಾ. ಇವೆರಡೂ ಭಾರತೀಯ ಸೇನೆಯಲ್ಲಿದ್ದು ಇದುವರೆಗೂ ಸಾವಿರಾರು ಸ್ಯಾಂಪಲ್​ಗಳು ಪರೀಕ್ಷಿಸಿ, ಕೋವಿಡ್-19 ಪಾಸಿಟಿವ್​ ಬಗ್ಗೆ ಸ್ಪಷ್ಟ ಮಾಹಿತಿ ನೀಡಿವೆ. ಅಂದರೆ ಈ ಎರಡು ನಾಯಿಗಳು 3,800 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಿದ್ದು, ಆ ಪೈಕಿ 22 ಮಂದಿಯಲ್ಲಿ ಕೋವಿಡ್​ ಸೋಂಕಿದೆ ಎಂಬುದನ್ನು ಪತ್ತೆ ಹಚ್ಚಿ ತಿಳಿಸಿವೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಅಂದಹಾಗೆ ಈ ನಾಯಿಗಳಿಗೆ ಕೋವಿಡ್ ಸೋಂಕು ಪತ್ತೆ ಹಚ್ಚಲು ಗಂಟಲ ದ್ರವ ಬೇಕಂತೇನೂ ಇಲ್ಲ. ಇವುಗಳ ಪತ್ತೆ ವಿಧಾನವೇ ಬರೀ. ಇವರು ಮನುಷ್ಯರ ಮೂತ್ರದ ಮಾದರಿಗಳನ್ನು ಮೂಸಿಯೇ ಆ ವ್ಯಕ್ತಿ ಕರೊನಾ ಸೋಂಕಿತ ಹೌದೋ ಅಲ್ಲವೋ ಎಂದು ಹೇಳುತ್ತಿವೆ. ಮೂತ್ರದ ಮಾದರಿಗಳ ಡಬ್ಬಗಳನ್ನು ಸಾಲಾಗಿ ಇಡಲಾಗುತ್ತದೆ. ಅವುಗಳನ್ನು ಮೂಸುವ ಈ ನಾಯಿಗಳು ಕೆಲವೇ ಕ್ಷಣಗಳಲ್ಲಿ ಕೋವಿಡ್​ ಪಾಸಿಟಿವ್ ಮಾದರಿಗಳನ್ನು ಪತ್ತೆ ಹಚ್ಚುತ್ತವೆ. ಯಾವುದು ಪಾಸಿಟಿವ್ ಇದೆಯೋ ಅದರ ಮುಂದೆ ಕುಳಿತುಕೊಳ್ಳುತ್ತವೆ, ಅದರ ತರಬೇತಿದಾರ ಆಗ ಪಾಸಿಟಿವ್ ಸ್ಯಾಂಪಲ್​ಗಳನ್ನು ಎತ್ತಿ ಬೇರೆ ಕಡೆ ಇಟ್ಟುಬಿಡುತ್ತಾನೆ.
2 ವರ್ಷದ ಸ್ಪೇನಿಯಲ್ ಡಾಗ್ ಕ್ಯಾಸ್ಪರ್ ಹಾಗೂ ಒಂದು ವರ್ಷದ ಬೇಟೆನಾಯಿ ಚಿಪ್ಪಿಪರಾಯಿ ತಳಿಯ ಜಯಾ ಈ ಕೆಲಸ ಮಾಡುತ್ತಿವೆ. ಕೋವಿಡ್​ ಹಾವಳಿ ವಿಕೋಪಕ್ಕೆ ತೆರಳಿ ಸೇನೆಯಲ್ಲೂ ಪಾಸಿಟಿವ್ ಪ್ರಕರಣಗಳ ವರದಿಯಾದಾಗ ಹೀಗೆ ನಾಯಿಗಳನ್ನು ತರಬೇತುಗೊಳಿಸಿ ಸೋಂಕು ಪತ್ತೆ ಹಚ್ಚುವುದನ್ನು ಆರಂಭಿಸಲಾಯಿತು. ಸಂಸತ್ತಿನಲ್ಲಿ ಮಂಡಿಸಲಾದ ಮಾಹಿತಿ ಪ್ರಕಾರ 2020ರ ಸೆಪ್ಟೆಂಬರ್ ಹೊತ್ತಲ್ಲಿ ಭಾರತೀಯ ಸೇನೆಯೊಂದರಲ್ಲೇ 16,000 ಪ್ರಕರಣಗಳು ವರದಿಯಾಗಿದ್ದವು.
ಇದನ್ನೂ ಓದಿ:ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…
ಚಿಪ್ಪಿಪರಾಯಿ ತಳಿಯ ಮತ್ತೊಂದು ನಾಯಿ ಮಣಿಯನ್ನೂ ಈ ರೀತಿಯ ಸೋಂಕು ಪತ್ತೆಗೆ ತರಬೇತಿಗೊಳಿಸಲಾಗುತ್ತಿದೆ. ಸದ್ಯ ಈ ನಾಯಿಗಳು ಚಂಡೀಗಢದಲ್ಲಿರುವ ಕ್ಯಾಂಪ್​ನಲ್ಲಿದ್ದು, ಇಲ್ಲಿಂದಲೇ ಲಡಾಕ್​ ಹಾಗೂ ಕಾಶ್ಮೀರಗಳಿಗೆ ಮಿಲಿಟರಿ ಟ್ರೂಪ್​ಗಳನ್ನು ಕಳುಹಿಸಲಾಗುತ್ತಿದೆ. ಸದ್ಯದಲ್ಲೇ ಇನ್ನು 8 ನಾಯಿಗಳನ್ನು ತರಬೇತಿಗೊಳಿಸಲಿದ್ದು, ಶೀಘ್ರದಲ್ಲೇ ಹತ್ತು ನಾಯಿಗಳು ಕೋವಿಡ್​ ಪರೀಕ್ಷೆಗೆ ಲಭ್ಯ ಇರಲಿವೆ. ಇವುಗಳನ್ನು ಹೀಗೆ ತರಬೇತಿಗೊಳಿಸಲು 36 ವಾರಗಳು ಬೇಕಿದ್ದು, ನಮ್ಮ ತರಬೇತುದಾರರು 16 ವಾರಗಳಲ್ಲೇ ಅವುಗಳನ್ನು ತರಬೇತಿಗೊಳಿಸಿದ್ದಾರೆ ಎಂದು ಭಾರತೀಯ ಸೇನೆಯ ಪಶುವೈದ್ಯಾಧಿಕಾರಿ ಲೆಫ್ಟಿನೆಂಟ್ ಕರ್ನಲ್​ ಸುರಿಂದರ್ ಸೈನಿ ಹೇಳಿದ್ದಾರೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಾಯಿಗಳ ಮೂಲಕ ಕರೊನಾ ಸೋಂಕು ಪತ್ತೆ ಮಾಡಲಾಗುತ್ತಿದೆ. ಆದರೆ ಸದ್ಯ ಇದು ಮಿಲಿಟರಿ ಕ್ಯಾಂಪ್​ಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನು ಬ್ರಿಟನ್​, ಫಿನ್ಲೆಂಡ್, ರಷ್ಯಾ, ಫ್ರಾನ್ಸ್, ಯುಎಇ, ಜರ್ಮನಿ, ಲೆಬನಾನ್​ ಮುಂತಾದೆಡೆ ವಿಮಾನನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್​ಗಳಲ್ಲಿ ನಾಯಿಗಳ ಮೂಲಕ ಕರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ. ಮಾತ್ರವಲ್ಲ ಈ ಹಿಂದೆ ನಾಯಿಗಳನ್ನು ಬಳಸಿಕೊಂಡು ಕ್ಯಾನ್ಸರ್​, ಮಲೇರಿಯಾ, ಪಾರ್ಕಿನ್​ಸನ್ ಕಾಯಿಲೆಗಳನ್ನು ಪತ್ತೆ ಮಾಡಲಾಗುತ್ತಿತ್ತು ಎಂದು ಸೈನಿ ಹೇಳಿದ್ದಾರೆ. ಕರೊನಾ ಸೋಂಕಿತನ ದೇಹದಲ್ಲಿನ ಅಂಗಾಂಶಗಳು ಕೆಲವು ಪದಾರ್ಥಳನ್ನು ಬಿಡುಗಡೆ ಮಾಡುತ್ತವೆ. ಅವು ಮೂತ್ರದ ಮೂಲಕ್ಕೆ ಹೊರಬರುತ್ತಿದ್ದು, ತಮ್ಮ ವಾಸನಾಶಕ್ತಿಯಿಂದ ನಾಯಿಗಳು ಅವುಗಳನ್ನು ಗ್ರಹಿಸಿ ಸೋಂಕು ಪತ್ತೆ ಮಾಡುತ್ತವೆ. ತೀವ್ರ ಆಘ್ರಾಣ ಶಕ್ತಿ ಇರುವ ಈ ನಾಯಿಗಳನ್ನು ಬೇರೆ ಕೆಲಸಗಳಿಗೆ ಬಳಸುವುದಿಲ್ಲ. ಇವುಗಳ ಆಘ್ರಾಣ ಶಕ್ತಿ 9 ವರ್ಷಗಳವರೆಗೆ ಉತ್ತಮವಾಗಿರುತ್ತವೆ, ಬಳಿಕ ಈ ನಾಯಿಗಳನ್ನು ನಿವೃತ್ತಿಗೊಳಿಸಲಾಗುತ್ತದೆ ಎನ್ನುತ್ತಾರೆ ಸೈನಿ. (ಏಜೆನ್ಸೀಸ್)
ಮಾವನಿಂದ ಅತ್ಯಾಚಾರಕ್ಕೀಡಾಗಿದ್ದ ಸೊಸೆ ಸಾವು; ಪತಿ ಮನೆಮುಂದೆಯೇ ಅಂತ್ಯಸಂಸ್ಕಾರಕ್ಕೆ ಪಟ್ಟು…

ಅತ್ತೆ ಮಗಳಿಗಾಗಿ 64 ಲಕ್ಷ ರೂ. ಕದ್ದ!; ಆಕೆ ಗಂಡನನ್ನು ಬಿಟ್ಟಿದ್ದಳು, ಇವನು ಅವಳಿಗಾಗಿ ಹೆಂಡತಿಯನ್ನೇ ಬಿಟ್ಟು ಪರಾರಿ…

ಅತ್ತೆ ಮಗಳಿಗಾಗಿ 64 ಲಕ್ಷ ರೂ. ಕದ್ದ!; ಆಕೆ ಗಂಡನನ್ನು ಬಿಟ್ಟಿದ್ದಳು, ಇವನು ಅವಳಿಗಾಗಿ ಹೆಂಡತಿಯನ್ನೇ ಬಿಟ್ಟು ಪರಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
