ನವದೆಹಲಿ:ಕರೊನಾ ಎರಡನೇ ಅಲೆ, ಮೂರನೇ ಅಲೆ ಜತೆಗೆ ಈಗ ಕರೊನಾ ಡೆಲ್ಟಾ ಪ್ಲಸ್​ ಎಂಬ ಹೊಸ ಆತಂಕವೂ ಕಾಡುತ್ತಿದೆ. ಇದು ಅಧಿಕ ಸೋಂಕುಕಾರಕ ಎನ್ನಲಾಗುತ್ತಿದ್ದರೂ ಈ ಒಂದು ವರ್ಗದವರಂತೂ ಇದಕ್ಕೆ ಅಷ್ಟೇನೂ ಹೆದರಬೇಕಾಗಿಲ್ಲ. ಏಕೆಂದರೆ ಈಗಾಗಲೇ ಲಸಿಕೆ ಪಡೆದವರಿಗಿಂತಲೂ ಇವರಲ್ಲಿ ಡೆಲ್ಟಾ ಪ್ಲಸ್​ ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ ಇರುತ್ತದೆ.
ಹೌದು.. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ನಡೆಸಿದ ಅಧ್ಯಯನವೊಂದು ಈ ಅಂಶವನ್ನು ಕಂಡುಕೊಂಡಿದೆ. ಡೆಲ್ಟಾ ಪ್ಲಸ್​ ಈಗಾಗಲೇ ಆಗಿರುವ ಕೋವಿಡ್​ನ ಇತರ ರೂಪಾಂತರಗಳಿಗಿಂತಲೂ ಹೆಚ್ಚು ಹಾಗೂ ತೀವ್ರ ಸೋಂಕುಕಾರಕ. ಆದರೆ ಇದೊಂದು ಅಂಶ ಡೆಲ್ಟಾ ಪ್ಲಸ್ ವಿರುದ್ಧ ಹೆಚ್ಚಿನ ಸುರಕ್ಷೆ ನೀಡಲಿದೆ ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನದ ಫಲಿತಾಂಶ ಈಗಾಗಲೇ ಸೋಂಕಿಗೀಡಾಗಿ ಗುಣಮುಖರಾಗಿರುವವರಿಗೆ ಖುಷಿಯನ್ನು ನೀಡಲಿದೆ. ಏಕೆಂದರೆ ಒಂದು ಅಥವಾ ಎರಡೂ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರಿಗಿಂತಲೂ ಬರೀ ಒಂದು ಡೋಸ್ ಲಸಿಕೆ ಪಡೆದಿದ್ದರೂ ಈಗಾಗಲೇ ಒಮ್ಮೆ ಕೋವಿಡ್​ನಿಂದ ಬಳಸಿ ಗುಣಮುಖರಾದವರು ಡೆಲ್ಟಾ ಪ್ಲಸ್​ ಸೋಂಕನ್ನು ಹೆಚ್ಚು ಸಮರ್ಥವಾಗಿ ಎದುರಿಸಬಲ್ಲರು ಎಂಬುದನ್ನು ಈ ಅಧ್ಯಯನ ಕಂಡುಕೊಂಡಿದೆ. (ಏಜೆನ್ಸೀಸ್​)
ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…
ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?
ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?
ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?
ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 8 =
Remember me
