ನವದೆಹಲಿ:ಕಗ್ಗಂಟಾಗುತ್ತಲೇ ಬಂದಿರುವ ರೈತರ ಪ್ರತಿಭಟನೆ ಭಾರತ್ ಬಂದ್ ಆಗುವ ಮಟ್ಟಕ್ಕೆ ಬಂದಿದ್ದು, ಮಂಗಳವಾರ ದೇಶಾದ್ಯಂತ ಬಂದ್ ನಡೆಸಲು ರೈತ ಸಂಘಟನೆಗಳು ಸಜ್ಜಾಗಿವೆ. ಈಗಾಗಲೇ ರೈತ ಪ್ರತಿಭಟನೆಯ ತೀವ್ರತೆಯನ್ನು ಕಂಡಿರುವ ದೇಶದ ಜನತೆ ಬಂದ್​ ದಿನದ ಬಗ್ಗೆ ಒಂದಷ್ಟು ಚಿಂತೆಯಲ್ಲಿದ್ದಾರೆ. ಆದರೆ ಅಂದು ಒಂದು ವರ್ಗಕ್ಕೆ ಮಾತ್ರ ರೈತರು ವಿನಾಯಿತಿ ನೀಡಿದ್ದಾರೆ.
ದೇಶದ ಸುಮಾರು 40 ರೈತಸಂಘಟನೆಗಳು ಜತೆಯಾಗಿ ಮಂಗಳವಾರದ ಭಾರತ್ ಬಂದ್​ಗೆ ಭಾನುವಾರ ಕರೆ ನೀಡಿದ್ದಾರೆ. ರೈತರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವಂತೆ ರೈತ ಮುಖಂಡರಾದ ಬಲ್​ದೇವ್ ಸಿಂಗ್ ನಿಹಾಲ್​, ಅಶೋಕ್​ ಧಾನ್ವ್ಲೆ, ಯೋಗೇಂದ್ರ ಯಾದವ್ ಮುಂತಾದವರು ಭಾರತ್ ಬಂದ್​ಗೆ ಕರೆ ನೀಡಿದ್ದಾರೆ. ಶನಿವಾರದ ಮಾತುಕತೆ ಫಲಪ್ರದವಾಗಿಲ್ಲ. ಅಲ್ಲದೆ ಸರ್ಕಾರ ರೈತರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ನಾವು ಭಾರತ್ ಬಂದ್​ಗೆ ಕರೆ ನೀಡುತ್ತಿರುವುದಾಗಿ ರೈತ ಮುಖಂಡರು ಹೇಳಿಕೊಂಡಿದ್ದಾರೆ.
ದೆಹಲಿ, ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಚಂಡೀಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ ರೈತ ಸಂಘಟನೆಗಳು ಈ ಬಂದ್​ಗೆ ಬೆಂಬಲ ಘೋಷಿಸಿವೆ. ಮಂಗಳವಾರ ಬೆಳಗ್ಗೆಯಿಂದಲೇ ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿರಲಿದ್ದು, ಸಾರಿಗೆ ಸಂಪರ್ಕಗಳು ಸ್ಥಗಿತಗೊಂಡಿರಲಿವೆ. ಮಧ್ಯಾಹ್ನದ ನಂತರ ಸಾರಿಗೆ ವ್ಯವಸ್ಥೆ ಆರಂಭಗೊಂಡರೂ ಅಂಗಡಿ-ಮುಂಗಟ್ಟುಗಳು ಮುಚ್ಚಿರಲಿವೆ. ಆದರೆ ಮದುವೆ ಸಮಾರಂಭಗಳಿಗೆ ಭಾರತ್ ಬಂದ್​ನಿಂದ ವಿನಾಯಿತಿ ಇರಲಿದೆ, ಅಂದು ನಡೆಯಲಿರುವ ಮದುವೆಗಳಿಗೆ ರೈತರು ಅಡ್ಡಿ ಮಾಡುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)
ಕೋವಿಡ್ ನಿಯಮ ಉಲ್ಲಂಘನೆಗೆ 1 ಲಕ್ಷ ರೂ.ವರೆಗೆ ದಂಡ: ಮಾಲೀಕರು, ಆಯೋಜಕರೇ ಭರಿಸಬೇಕು

ಕರೊನಾ ಲಸಿಕೆ ಇವರಿಗೇ ಮೊದಲು ಬೇಕಂತೆ; ಪ್ರಧಾನಿಗೆ ಪತ್ರ ಬರೆದು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
