ಕುಂದಾಪುರ/ಆರ್ಡಿ (ಉಡುಪಿ):ತಾಲೂಕಿನ ಅಲ್ಬಾಡಿ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಅನುಷಾ ಮತ್ತು ರಕ್ಷಿತಾ ನಾಯ್ಕ್​ ಅಭಿವೃದ್ಧಿಪಡಿಸಿ ಮಂಡಿಸಿದ ಗ್ಯಾಸ್ ಸೇವಿಂಗ್ ಕಿಟ್​ಗೆ(ಜಿಎಸ್​ಕೆ) ರಾಷ್ಟ್ರ ಪ್ರಶಸ್ತಿ ಒಲಿದಿದೆ. ಮೂರನೇ ಬಾರಿ ಈ ಶಾಲೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿದೆ.
ಏಕೈಕ ಸರ್ಕಾರಿ ಶಾಲೆ:ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ರಾಷ್ಟ್ರ ಮಟ್ಟದ ಸಿಎಸ್​ಐಆರ್ (ಸಿಎಸ್​ಈಆರ್ ಇನ್ನೋವೇಶನ್ ಅವಾರ್ಡ್ ಫೊರ್ ಸ್ಕೂಲ್ ಚಿಲ್ಡ್ರ್) ಸ್ಪರ್ಧೆ ನಡೆಸಿತ್ತು. ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ, ಕೊನೆಯ ಹಂತಕ್ಕೆ ಆಯ್ಕೆಯಾದ 14 ಶಾಲೆಗಳ ಪೈಕಿ ಅಲ್ಬಾಡಿ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯೂ ಸೇರಿದೆ. ವಿಜೇತ ಶಾಲೆಗಳ ಪಟ್ಟಿಯಲ್ಲಿ ಆಯ್ಕೆಯಾದ ಈ ಶಾಲೆ ದೇಶದ ಏಕೈಕ ಸರ್ಕಾರಿ ಶಿಕ್ಷಣ ಸಂಸ್ಥೆ ಎನ್ನುವುದು ವಿಶೇಷ. ರಾಜ್ಯದಿಂದ ಆಯ್ಕೆಯಾದ ಏಕೈಕ ಶಾಲೆಯೂ ಹೌದು.
ಸೆ.26ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಾಗದಿದ್ದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯ ಪ್ರಕಟಣೆ ತಿಳಿಸಿದೆ.
ಮೂರನೇ ಸಾಧನೆ:ಪ್ರಧಾನ ಮಂತ್ರಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕಾಗಿ ರಚಿಸಿದ್ದ ಪ್ರೋಮೋ ವೀಡಿಯೋ ಕೇಂದ್ರ ಸರ್ಕಾರದಿಂದ ರಾಷ್ಟ್ರಾದ್ಯಂತ ಪ್ರಸಾರವಾಗಿ, ಶಿಕ್ಷಣಾಭಿಮಾನಿಗಳ ಅಪಾರ ಪ್ರಶಂಸೆಗೆ ಪಾತ್ರವಾಗಿದ್ದು ಮೊದಲ ಸಾಧನೆ. ಕಾರ್ಯಕ್ರಮಕ್ಕೆ ಈ ಶಾಲೆಯ ವಿದ್ಯಾರ್ಥಿನಿ ಅನುಷಾ ಕುಲಾಲ್ ಆಯ್ಕೆಯಾಗಿ ಸುದ್ದಿಯಾಗಿದ್ದು ಎರಡನೇ ಸಾಧನೆ.
ಏನಿದು ಗ್ಯಾಸ್ ಕಿಟ್?:ಗ್ಯಾಸ್ ಸೇವಿಂಗ್ ಕಿಟ್ ಉಪಕರಣ ಗ್ಯಾಸ್ ಸ್ಟೌಗೆ ಅಳವಡಿಸಿದರೆ ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೇ ಇಡೀ ಕುಟುಂಬದ ಸ್ನಾನಕ್ಕೆ ಬೇಕಾಗುವಷ್ಟು ಬಿಸಿ ನೀರು ಸಿಗುತ್ತದೆ. ಪ್ರಪಂಚದಾದ್ಯಂತ ಇದನ್ನು ಎಲ್ಲ ಮನೆ, ಹೋಟೆಲ್​ಗಳಲ್ಲಿ ಬಳಸಿದರೆ, ದಿನಕ್ಕೆ ಲಕ್ಷಾಂತರ ಟನ್ ಎಲ್​ಪಿಜಿ ಉಳಿತಾಯವಾಗುತ್ತದೆ ಎಂಬುದನ್ನು ಈ ವಿದ್ಯಾರ್ಥಿನಿಯರು ಲೆಕ್ಕ ಮಾಡಿ ತೋರಿಸುತ್ತಾರೆ. 600 ರೂ.ಆಸುಪಾಸಿನಲ್ಲಿ ಈ ಕಿಟ್ ಸಿದ್ಧಪಡಿಸಲು ಸಾಧ್ಯ. ಕಿಟ್ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕೆ ಪೇಟೆಂಟ್ ಪಡೆಯಲು ತಯಾರಿ ನಡೆದಿದೆ.
ಕಾರ್ಯನಿರ್ವಹಣೆ ಹೇಗೆ?:ಗ್ರಾಮೀಣ ಭಾಗದಲ್ಲೂ ಗ್ಯಾಸ್ ಉಳಿತಾಯ ಸಾಧ್ಯ ಎನ್ನುವ ಯೋಚನೆಯೇ ವಿದ್ಯಾರ್ಥಿನಿಯರ ಹೊಸ ಆವಿಷ್ಕಾರಕ್ಕೆ ಕಾರಣ. ಕಾಪರ್ ಕಾಯಿಲ್ ಫ್ರೇಮ್ ಮಾಡಿ ಸುರುಳಿ ಆಕಾರದಲ್ಲಿ ನಾಲ್ಕಾರು ಸುತ್ತು ಬರುವಂತೆ ಮಾಡಿ, ಗ್ಯಾಸ್ ಸ್ಟೌಗೆ ಕೂರಿಸಲಾಗುತ್ತದೆ. ಒಂದು ಕಾಪರ್ ಪೈಪ್ ತುದಿಗೆ ಟ್ಯಾಪ್ ಫಿಟ್ ಮಾಡಿ, ನೀರು ಬರುವಂತೆ ಮಾಡಿ ಟ್ಯಾಪ್ ಮೂಲಕ ಬಂದ ನೀರು ಬೆಂಕಿಯ ಸುತ್ತಿ ಮತ್ತೊಂದು ತುದಿಯಿಂದ ಪಾತ್ರೆಗೆ ಬರುತ್ತದೆ. ಕಾಫಿ, ಅನ್ನ ಬೇಯಿಸುವ ಸಂದರ್ಭ ನಲ್ಲಿ ಮೂಲಕ ನೀರು ಹರಿಸಿದರೆ ಬಿಸಿ ನೀರು ಸಿಗುತ್ತಿದ್ದು, ಸ್ನಾನ ಇನ್ನಿತರ ಬಳಕೆಗೆ ಬಳಸಬಹುದು. ಶಾಲೆಯಲ್ಲಿ ಈ ಗ್ಯಾಸ್ ಉಳಿತಾಯ ಕಿಟ್ ಅಳವಡಿಸಿಕೊಳ್ಳಲಾಗಿದೆ.
ಕಿಟ್ ಹಿಂದೆ ಶಿಕ್ಷಕರ ಶಕ್ತಿ:ಕಿಟ್ ಸಿದ್ಧಪಡಿಸಲು ವಿದ್ಯಾರ್ಥಿಯರ ಬೆನ್ನಿಗೆ ಶಾಲಾ ಶಿಕ್ಷಕ ವರ್ಗ ನಿಂತಿದೆ. ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಮಾರ್ಗದರ್ಶನದಲ್ಲಿ ಜಿಎಸ್​ಕೆ ಕಿಟ್ ಸಿದ್ಧಪಡಿಸಲಾಗಿತ್ತು. ಮುಖ್ಯಶಿಕ್ಷಕ ಶೇಖರ್ ಶೆಟ್ಟಿಗಾರ್, ಶಿಕ್ಷಕರಾದ ಶ್ರೀಕಾಂತ್ ನಾಯಕ್, ಪ್ರೇಮನಾಥ್ ತೋಳಾರ್, ಉದಯ್ ಶೆಟ್ಟಿ, ಮಾಲತಿ, ಮಾಲಿನಿ ಕೆ.ಆರ್, ರಮೇಶ್, ಸುಮಲತಾ, ಸುರೇಶ್ ಮರಕಾಲ, ಬೋಧಕೇತರ ಸಿಬ್ಬಂದಿ ಜ್ಯೋತ್ಸಾ್ನ, ವಿದ್ಯಾರ್ಥಿಗಳ ಸಾಧನೆಗೆ ಸಹಕಾರ ನೀಡಿದ್ದಾರೆ.
ರಾಷ್ಟ್ರ ಮಟ್ಟದ ಪ್ರಶಸ್ತಿ ಕಲ್ಪನೆ ಇರಲಿಲ್ಲ. ಜಿಎಸ್​ಕೆ ಮಾರ್ಗದರ್ಶನ ಮಾಡಿದ ನಮ್ಮ ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಅವರಿಗೆ, ನಮ್ಮಿಬ್ಬರ ಈ ಸಾಧನೆಗೆ ಮೂಲ ಕಾರಣಕರ್ತರಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ಸಮಾಜ ಶಿಕ್ಷಕ ಸುರೇಶ್ ಮರಕಾಲರಿಗೆ ಅಭಾರಿ.
|ಅನುಷಾರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿನಿ
ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

ನರ್ಸ್​-ಡ್ರೈವರ್​ ಲವ್​ ಟ್ರ್ಯಾಜೆಡಿ; ಕಾರೊಳಗೇ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − ten =
Remember me
