‘ಮಣಿಪುರದ ಮಹಿಳಾ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ನಮ್ಮ ಸಂಚಾರ ಮಾರ್ಗಗಳನ್ನು ನಿರ್ಬಂಧಿಸುತ್ತಿದ್ದಾರೆ. ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜೀವ ಮತ್ತು ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ನಿರ್ಣಾಯಕವಾಗಿರುವ ಸಂದರ್ಭಗಳಲ್ಲಿ ಭದ್ರತಾ ಪಡೆಗಳ ಸಮಯೋಚಿತ ಪ್ರತಿಕ್ರಿಯೆಗೆ ಇಂತಹ ಅನಗತ್ಯ ಹಸ್ತಕ್ಷೇಪವು ಹಾನಿಕಾರಕವಾಗಿದೆ’ ಎಂದು ಸೋಮವಾರ (ಜೂನ್ 26) ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಭಾರತೀಯ ಸೇನೆಯ ಸ್ಪಿಯರ್ ಕೋರ್ ಘಟಕವು ಹೇಳಿದೆ.
ಪರಿಶಿಷ್ಟ ಪಂಗಡಗಳ (ಎಸ್​ಟಿ) ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂಬ ಮೈತೆಯಿ ಸಮುದಾಯದ ಬೇಡಿಕೆಯ ಹೋರಾಟವು ಮೇ ತಿಂಗಳ ಆರಂಭದಿಂದ ಉಲ್ಬಣಗೊಂಡ ನಂತರ ಮಣಿಪುರ ಕಣಿವೆಯಲ್ಲಿನ ಬಹುಸಂಖ್ಯಾತ ಮೈತೆಯಿ ಮತ್ತು ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುಕಿ-ಜೋಮಿ ಗುಂಪುಗಳ ನಡುವೆ ಹಿಂಸಾಚಾರ ಸ್ಪೋಟಗೊಂಡಿದೆ.
ಗಲಭೆಯಲ್ಲಿ ನಿರತರಾಗಿರುವವರು ಹಾಗೂ ಶಸ್ತ್ರಸಜ್ಜಿತರಾಗಿ ದಂಗೆ ಮಾಡುತ್ತಿರುವವರು ವಾಹನಗಳಲ್ಲಿ ಮತ್ತು ಆಂಬುಲೆನ್ಸ್​ಗಳಲ್ಲಿ ಪಾರಾಗಲು ಮಹಿಳಾ ಪ್ರತಿಭಟನಾಕಾರರು ಮಣಿಪುರ ರಾಜಧಾನಿ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನೆರವಾಗುತ್ತಿರುವ ವಿಡಿಯೋಗಳನ್ನು ಕೂಡ ಸೇನೆಯು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದೆ.
ಬೀದಿಗಿಳಿದಿರುವ ಮಹಿಳಾ ಪ್ರತಿಭಟನಾಕಾರರ ಗುಂಪುಗಳು ಭದ್ರತಾ ಪಡೆಗಳೊಂದಿಗೆ ಕಾದಾಡುವ ಹಾಗೂ ಪಡೆಗಳ ಸರಕು ಸಾಗಣೆಗೆ ಅಡ್ಡಿಪಡಿಸುವ ವಿಡಿಯೋಗಳು ಕೂಡ ಇದರಲ್ಲಿವೆ. ಅಸ್ಸಾಂ ರೈಫಲ್ಸ್ ಸೇನಾ ನೆಲೆಯ ಪ್ರವೇಶ/ನಿರ್ಗಮನ ಮಾರ್ಗವನ್ನು ಅಗೆದು ಹಾಕಲಾಗಿದೆ. ಭದ್ರತಾ ಪಡೆಗಳ ಚಲನೆಯನ್ನು ನಿರ್ಬಂಧಿಸುವುದು ಕಾನೂನುಬಾಹಿರವಾಗಿದೆ. ಅಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ತನ್ನ ಪ್ರಯತ್ನಗಳಿಗೆ ಹಾನಿಕಾರಕವಾಗಿದೆ ಎಂದು ಸೇನೆ ಎಚ್ಚರಿಸಿದೆ.
ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿನ ಮಹಿಳೆಯರು ಯಾರೆಂಬುದನ್ನು ಸೇನೆಯು ಗುರುತಿಸಿಲ್ಲ. ಆದರೆ, ಮಣಿಪುರದ ಇತಿಹಾಸವನ್ನು ಗಮನಿಸಿದಾಗ, ನಾಗರಿಕ ಸಮಾಜದ ಹೋರಾಟದಲ್ಲಿ ಬಹಳ ಹಿಂದಿನಿಂದಲೂ ಸಕ್ರಿಯ ಮಹಿಳೆಯರ ಗಮನಾರ್ಹ ಉಪಸ್ಥಿತಿಯನ್ನು ಗುರುತಿಸಬಹುದಾಗಿದೆ. ಇಂತಹ ಮಹಿಳಾ ಗುಂಪುಗಳಲ್ಲಿ ಹೆಚ್ಚು ಸಕ್ರಿಯವಾಗಿ ಕಂಡುಬರುವ ಸಂಘಟನೆಯೆಂದರೆ ಮೀರಾ ಪೈಬಿಸ್. ಇವರು ರಾತ್ರಿಯಲ್ಲಿ ಬೀದಿಗಳಲ್ಲಿ ಪಂಜಿನ ಮೆರವಣಿಗೆ ಮಾಡುವುದರಿಂದ ಇವರಿಗೆ ಮಹಿಳಾ ‘ಟಾರ್ಚ್ ಬೇರರ್ಸ್’ (ಪಥದರ್ಶಕರು) ಎಂದೂ ಕರೆಯುತ್ತಾರೆ. ಮೀರಾ ಪೈಬಿಗಳನ್ನು ಇಮಾಸ್ ಅಥವಾ ಮಣಿಪುರದ ತಾಯಂದಿರು ಎಂದೂ ಗುರುತಿಸಲಾಗುತ್ತದೆ.
ಇಂಫಾಲ್ ಕಣಿವೆಯಲ್ಲಿ ಸಮಾಜದ ಎಲ್ಲಾ ವರ್ಗಗಳಿಂದ ಕೂಡಿರುವ ಮೈತೆಯಿ ಸಮುದಾಯಕ್ಕೆ ಸೇರಿದ ಈ ಮಹಿಳೆಯರನ್ನು ಈ ಪ್ರದೇಶದಲ್ಲಿ ವ್ಯಾಪಕವಾದ ಗೌರವಾದರಗಳಿಂದ ಕಾಣಲಾಗುತ್ತದೆ. ಈ ಸಮುದಾಯದ ನೈತಿಕ ಶಕ್ತಿಯ ಪ್ರತಿನಿಧಿ ಎಂದೇ ಅವರನ್ನು ಪರಿಗಣಿಸಲಾಗುತ್ತದೆ.
ಮೀರಾ ಪೈಬಿಗಳು ಅಷ್ಟೇನೂ ಬಲಾಢ್ಯವಾಗಿ ಸಂಘಟಿತರಾಗಿಲ್ಲ. ಅಲ್ಲಲ್ಲಿ ಬಿಡಿಬಿಡಿಯಾಗಿ ಹರಡಿಕೊಂಡಿದ್ದಾರೆ. ಸಾಮಾನ್ಯವಾಗಿ ಹಿರಿಯ ಮಹಿಳೆಯರು ಈ ಗುಂಪುಗಳ ನೇತೃತ್ವ ವಹಿಸುತ್ತಾರೆ. ಈ ಸಂಘಟನೆಯಲ್ಲಿ ಕಟ್ಟುನಿಟ್ಟಾದ ಅಧಿಕಾರ ಶ್ರೇಣಿ ಏನಿಲ್ಲ. ಅಲ್ಲದೆ, ಈ ಗುಂಪುಗಳು ಯಾವುದೇ ಬಹಿರಂಗ ರಾಜಕೀಯ ಒಲವನ್ನೂ ಹೊಂದಿಲ್ಲ. ಕೆಲವು ಸಮಯ- ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಮಣಿಪುರದ ನಾಗರಿಕ ಸಮಾಜದಲ್ಲಿ ಅವರ ಉಪಸ್ಥಿತಿ ಮತ್ತು ಪ್ರಾಮುಖ್ಯತೆಯು ಶಾಶ್ವತ ಮತ್ತು ಸ್ಪಷ್ಟವಾಗಿದೆ. ಸಮಾಜದ ಆತ್ಮಸಾಕ್ಷಿಯ ರಕ್ಷಕರಾಗಿ ಅವರ ಪಾತ್ರಕ್ಕೆ ವ್ಯಾಪಕ ಮಾನ್ಯತೆ ಇದೆ.
ಸಾಮಾಜಿಕ ಮನ್ನಣೆ:ಮೀರಾ ಪೈಬಿ ಸಂಘಟನೆ 1977ರಲ್ಲಿ ರೂಪುಗೊಂಡಿತು. ವಿಶ್ವದ ಅತಿದೊಡ್ಡ ತಳಮಟ್ಟದ ಚಳವಳಿಗಳಲ್ಲಿ ಇದೂ ಒಂದಾಗಿದೆ. ಮದ್ಯಪಾನ ಮತ್ತು ಮಾದಕ ವ್ಯಸನದ ವಿರುದ್ಧ ಹೋರಾಟಕ್ಕಾಗಿ ಆರಂಭಗೊಂಡ ಈ ಸಂಘಟನೆಯು, ಈಗ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಮಾಜದ ಅಭಿವೃದ್ಧಿ ಕುರಿತಂತೆಯೂ ಗಮನ ನೀಡುತ್ತಿದೆ. ಮೀರಾ ಪೈಬಿಗಳು ಮಣಿಪುರ ರಾಜ್ಯದಲ್ಲಿ ಹಲವಾರು ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳನ್ನು ಮುನ್ನಡೆಸಿದ್ದಾರೆ. ಭಾರತೀಯ ಭದ್ರತಾ ಪಡೆಗಳಿಂದ ನಡೆದಿವೆ ಎಂದು ಆರೋಪಿಸಲಾದ ದೌರ್ಜನ್ಯಗಳ ವಿರುದ್ಧದ ಕೆಲವು ಪ್ರಬಲ ಪ್ರತಿಭಟನೆಗಳೂ ಇದರಲ್ಲಿ ಸೇರಿವೆ. ಹೀಗಾಗಿ, ಸಮಾಜದಲ್ಲಿ ಅವರಿಗೆ ಭದ್ರ ಹಾಗೂ ಗೌರವದ ಸ್ಥಾನಮಾನ ದೊರೆತಿದೆ.
ಅಮಿತ್ ಷಾ ಮಾತುಕತೆ:ಹಿಂಸಾಚಾರಪೀಡಿತ ಮಣಿಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ವಿವಿಧ ನಾಗರಿಕ ಸಮಾಜದ ಗುಂಪುಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮೀರಾ ಪೈಬಿಗಳ ಜತೆಗೂ ಮಾತುಕತೆ ನಡೆಸಿದ ಅವರು, ಮಣಿಪುರ ಸಮಾಜದಲ್ಲಿ ಮಹಿಳೆಯರ ಪಾತ್ರದ ಮಹತ್ವವನ್ನು ಪುನರುಚ್ಚರಿಸಿದರು. ಒಟ್ಟಾಗಿ, ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿ ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದೂ ಷಾ ಹೇಳಿದರು.
ಬಂಡುಕೋರರ ಬಿಡುಗಡೆ:ಮೈತೆಯಿ ಸಮುದಾಯದ ಬಂಡುಕೋರ ಗುಂಪಾದ ಕೆವೈಕೆಎಲ್​ಗೆ ಸೇರಿದ 12 ಸಿಬ್ಬಂದಿಯನ್ನು ಶಸ್ತ್ರಾಸ್ತ್ರ, ಮದ್ದುಗುಂಡು ಸಮೇತವಾಗಿ ಸೇನಾಪಡೆಗಳು ಈಚೆಗೆ ಇಂಫಾಲ್ ಪೂರ್ವದ ಇಥಮ್ ಗ್ರಾಮದಲ್ಲಿ ಸೆರೆಹಿಡಿದಿದ್ದರು. ಆದರೆ, ಮಹಿಳಾ ಕಾರ್ಯಕರ್ತರ ಒತ್ತಡದ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ.
ಹೋರಾಟದ ಹಾದಿ:ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್​ಎಸ್​ಪಿಎ) ವಿರುದ್ಧ ಪ್ರತಿಭಟಿಸಲು 2000ರಿಂದ 2016ರವರೆಗೆ ಮಣಿಪುರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಇರೋಮ್ ಶರ್ವಿುಳಾ ಅವರನ್ನು ಮೀರಾ ಪೈಬಿ ಮಹಿಳೆಯರು ಸಕ್ರಿಯವಾಗಿ ಬೆಂಬಲಿಸಿದ್ದರು. ಹೊರ ರಾಜ್ಯದವರು ಮಣಿಪುರ ಪ್ರವೇಶಿಸಲು ಪರವಾನಗಿ ನೀಡುವ ಇನ್ನರ್​ಲೈನ್ ಪರ್ವಿುಟ್ (ಐಎಲ್​ಪಿ) ವ್ಯವಸ್ಥೆ ಜಾರಿಗೊಳಿಸಬೇಕೆಂಬ ಬೇಡಿಕೆಯುಳ್ಳ ಹೋರಾಟದಿಂದಾಗಿ 2015ರಲ್ಲಿ ಮಣಿಪುರದಲ್ಲಿ ಉದ್ವಿಗ್ನತೆ ತಲೆದೋರಿತ್ತು. ಸ್ಥಳೀಯ ಹಿತಾಸಕ್ತಿ, ಸಂಸ್ಕೃತಿ ಮತ್ತು ಲಭ್ಯ ವಾಣಿಜ್ಯ ಅವಕಾಶಗಳನ್ನು ರಕ್ಷಿಸಲು ಇದು ಅವಶ್ಯಕವಾಗಿದೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದ್ದರು. ಈ ಹೋರಾಟಕ್ಕೆ ಬೆಂಬಲವಾಗಿ ಮಾರುಕಟ್ಟೆಗಳಲ್ಲಿ ಬಂದ್ ಕೈಗೊಳ್ಳಲು ಮೀರಾ ಪೈಬಿಗಳು ಸಕ್ರಿಯ ಪಾತ್ರ ವಹಿಸಿದ್ದರು. 2017ರಲ್ಲಿ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಮೊದಲ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಂಗ್​ವೆುೖಬಂದ್ ವಿಧಾನಸಭೆ ಕ್ಷೇತ್ರದಲ್ಲಿ ಮೀರಾ ಪೈಬಿಗಳು ಬಂದ್​ಗೆ ಕರೆ ನೀಡಿದ್ದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೈಕಮ್ ಡಿಂಗೋ ಸಿಂಗ್ ಅವರು ಮದುವೆಯಾಗುವ ಭರವಸೆಯನ್ನು ಈಡೇರಿಸದ ಕಾರಣಕ್ಕಾಗಿ ಮಹಿಳೆಯೊಬ್ಬರು ತಮ್ಮ ಪ್ರದೇಶದಲ್ಲಿನ ಮೀರಾ ಪೈಬಿಗಳನ್ನು ಸಂರ್ಪಸಿದ್ದರು. ಆಗ ಮೀರಾ ಪೈಬಿ ಮಹಿಳೆಯರು ಸೆಕ್ಮಾಯಿ ಪಟ್ಟಣಕ್ಕೆ ನುಗ್ಗಿ ಶಾಸಕರ ದ್ವಾರದ ಮುಂದೆ ಪ್ರತಿಭಟನೆ ನಡೆಸಿದರು. ಇಬ್ಬರೂ ಪ್ರೇಮಿಗಳನ್ನು ಒಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಬಂದ್​ಗೆ ಕೂಡ ಕರೆ ನೀಡಿದ್ದರು.
ಇದು ಸಿಂಗಲ್​ ಆಗಿರುವವರಿಂದ ಮಿಂಗಲ್ ಆಗಲು ಗ್ರೀನ್​ ಸಿಗ್ನಲ್; ಪೇರಿಂಗ್ ಆಗಲೆಂದೇ ಪಿಯರ್ ರಿಂಗ್, ಏನಿದು ಹೊಸ ಟ್ರೆಂಡ್?

ನನ್ನ ಸಾವಿಗೆ ಶಾಸಕರೇ ಕಾರಣ, ಸಾಯಲು ಅನುಮತಿ ಕೊಡಿ: ಬಸ್​ ಕಂಡಕ್ಟರ್ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
