ನವದೆಹಲಿ:ಭದ್ರತೆ ಕೊರತೆಯಿಂದಾಗಿ ಎಟಿಎಂ ಮಷಿನ್ ಕಿತ್ತಿ ಹಣ ದೋಚಿ ಪರಾರಿಯಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.ಮತ್ತೊಂದು ಘಟನೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು 18 ಲಕ್ಷ ರೂ.ಗಳ ನಗದು ಹೊಂದಿರುವ ಎಟಿಎಂ ಅನ್ನು ದೆಹಲಿಯ ಹೊರವಲಯದ ನರೇಲಾದಲ್ಲಿ ಕಿತ್ತುಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.ಈ ಘಟನೆ ಮಂಗಳವಾರ ಮುಂಜಾನೆ 1: 30 ಕ್ಕೆ ವರದಿಯಾಗಿದೆ.ಪೊಲೀಸರ ಪ್ರಕಾರ, ಇಬ್ಬರು ಅಪರಿಚಿತ ವ್ಯಕ್ತಿಗಳು ಎಟಿಎಂ ಬೂತ್‌ಗೆ ಪ್ರವೇಶಿಸಿ 18 ಲಕ್ಷ ರೂ. ನಗದು ಹೊಂದಿರುವ ಎಟಿಎಂ ಯಂತ್ರವನ್ನು ಕಿತ್ತುಹಾಕಿದ್ದಾರೆ. ಅವರು ಎಟಿಎಂ ಬೂತ್ ಪ್ರವೇಶಿಸಿ ಸಿಸಿಟಿವಿ ಕ್ಯಾಮೆರಾ ಹಾನಿಗೊಳಿಸಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂಕಿತ್​​ ಬಂಧನ
ಮತ್ತೊಂದು ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಅವರು ಯಂತ್ರದೊಂದಿಗೆ ಬೂತ್‌ನಿಂದ ಹೊರಹೋಗುತ್ತಿರುವುದು ಕಂಡುಬಂದಿದ್ದು. ಆ ವೇಳೆ ಹೊರಗೆ ಕಾವಲುಗಾರರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ನೈಋತ್ಯ ದೆಹಲಿಯ ರಾಜೋಕ್ರಿ ಗ್ರಾಮದಿಂದ ಬೆಳಗ್ಗೆ 4 ಗಂಟೆಗೆ ಎಟಿಎಂ ಕಳ್ಳತನದ ಮತ್ತೊಂದು ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶಂಕಿತರನ್ನು ಪತ್ತೆ ಹಚ್ಚಲು ಎಟಿಎಂ ಬೂತ್‌ಗಳು ಮತ್ತು ಹತ್ತಿರದ ಸ್ಥಳಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಂಬುಟನ್ ಹಣ್ಣು ತಿಂದು 15 ನಿಮಿಷ ಉಸಿರಾಡುವುದನ್ನೇ ಮರೆತ ಮಗು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − two =
Remember me
