ನವದೆಹಲಿ:ಮನೆ ಅಥವಾ ಕಚೇರಿಗೆ ಬೆಂಕಿ ಹೊತ್ತಿಕೊಂಡಾಗ ಕೆಲವರು ಕಿಟಕಿಗಳ ಮೂಲಕ ಹೊರಬಂದು ಪ್ರಾಣ ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಜೀವ ಉಳಿಯಬಹುದು. ಯಾರಾದರೂ ನಮ್ಮನ್ನು ರಕ್ಷಿಸಬಹುದು ಎಂಬ ಆಸೆಯಿಂದಲೋ ಅಥವಾ ಕೈಸೋತು ಇಲ್ಲವೇ ಕೈಜಾರಿ ಕೆಳಬಿದ್ದು ಸಾಯುವವರ ಸಂಖ್ಯೆಯೂ ದೊಡ್ಡದಿರುತ್ತದೆ. ಆದರೆ, ಈ ಘಟನೆಯಲ್ಲಿ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಕಿಟಕಿಯಿಂದ ಹೊರಬಂದ ಇಬ್ಬರು ಸಹೋದರರು ಮೂರನೇ ಮಹಡಿಯಿಂದ ಜಿಗಿದರೂ ಸುರಕ್ಷಿತವಾಗುಳಿದಿದ್ದಾರೆ. ಹೇಗೆ?
ಹೇಗೆ ಅಂದರೆ, ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಕುತೂಹಲದಿಂದ ಸೇರಿದ ಜನರಿಗೆ 10 ವರ್ಷ ಮತ್ತು 3 ವರ್ಷದ ಇಬ್ಬರು ಸಹೋದರರು ಕಿಟಕಿಯಿಂದ ಹೊರಬಂದಿದ್ದು ಕಂಡಿದೆ. ತಕ್ಷಣವೇ ನಾಲ್ಕು ಜನರು ಸೇರಿ ಕೈಕೈ ಸೇರಿಸಿ ಹಾರುವವರನ್ನು ಕ್ಯಾಚ್​ ಹಿಡಿಯಲು ಸಿದ್ಧರಾಗಿದ್ದಾರೆ. ಬಳಿಕ ಮೇಲಿಂದ ಜಿಗಿಯುವಂತೆ ಬಾಲಕರಿಗೆ ಸೂಚಿಸಿದ್ದಾರೆ. ಅದರಂತೆ ಜಿಗಿದ ಬಾಲಕರನ್ನು ಕ್ಯಾಚ್​ ಹಿಡಿದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರು ಮಾಡಿದ್ದಾರೆ.
ಫ್ರಾನ್ಸ್​ನ ಗ್ರೆನೋಬಲ್​ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಅಗ್ನಿ ಅನಾಹುತದಲ್ಲಿ ಈ ಇಬ್ಬರು ಬಾಲಕರು ಸೇರಿ ಒಟ್ಟು 19 ಮಂದಿ ಗಾಯಗೊಂಡಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಬಾಲಕರನ್ನು ಕ್ಯಾಚ್​ ಹಿಡಿದ ನಾಲ್ವರ ಕೈಗಳ ಮೂಳೆಗಳಿಗೆ ಏನಾದರೂ ಏಟು ಆಗಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಒಬ್ಬ ಯುವಕನ ಮಣಿಕಟ್ಟಿನಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:20 ಲಕ್ಷ ಉದ್ಯೋಗ ಸೃಷ್ಟಿ: 5 ಲಕ್ಷ ಕೋಟಿ ರೂ. ಬಂಡವಾಳ ಗುರಿ, ಕನ್ನಡಿಗರಿಗೆ ಡಿ ಗ್ರೂಪ್ ಹುದ್ದೆ
ಅತೌಮನಿ ವಾಲೀದ್​ (25) ಮಣಿಕಟ್ಟಿನ ಮೂಳೆ ಮುರಿತಕ್ಕೆ ಒಳಗಾಗಿರುವ ಯುವಕ. ಬಾಲಕರನ್ನು ಕ್ಯಾಚ್​ ಹಿಡಿಯುವ ಐಡಿಯಾದ ಬಗ್ಗೆ ವಿವರಿಸಿರುವ ಇವರು, ನಮಗೆ ಯಾರೋ ಕಿರುಚುತ್ತಿರುವುದು ಕೇಳಿಸಿತು. ಏನೆಂದು ನೋಡಲು ಹೋದಾಗ ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ ಹೊತ್ತಿಕೊಂಡು ಜನರು, ರಕ್ಷಣೆಗಾಗಿ ಮೊರೆಯಿಡುತ್ತಿದ್ದರು. ಅಲ್ಲಿಗೆ ಹೋದ ನಮಗೆ ಒಂದು ಕ್ಷಣ ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ನಾವು ಮನೆಗಳ ಬಾಗಿಲುಗಳನ್ನು ಒಡೆದು ಒಳಹೋಗಲು ನಿರ್ಧರಿಸಿದೆವು. ಆದರೆ, ಬೆಂಕಿಯ ಕೆನ್ನಾಲಗೆ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಹೇಳಿದ್ದಾರೆ.
Two children in France safe after jumping from a burning building into the arms of a group of adults who broke their fall.#ComeTogetherpic.twitter.com/nV8TWHJsTv
— ian bremmer (@ianbremmer)July 23, 2020

ಕೊನೆಗೆ ಕಟ್ಟಡದ ಹೊರಗೆ ಬಂದ ನಮಗೆ ಬಾಲಕರು ಕಿಟಕಿಯಿಂದ ನೇತಾಡುತ್ತಿರುವುದು ಕಾಣಿಸಿತು. ಮೊದಲಿಗೆ ಹೆದರಿಕೆಯಾದರೂ ಅವರನ್ನು ಕ್ಯಾಚ್​ ಹಿಡಿಯುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದೆವು. ಅದರಂತೆ ಮೊದಲ ಬಾಲಕನಿಗೆ ಹಾರಲು ಹೇಳಿದಾಗ ಮನದಲ್ಲಿ ಸ್ವಲ್ಪ ಅಳುಕಿತ್ತು. ಆದರೆ ಆತನನ್ನು ಕ್ಯಾಚ್​ ಹಿಡಿದ ಬಳಿಕ ಎರಡನೆಯವನನ್ನು ಸುಲಭವಾಗಿ ಕ್ಯಾಚ್​ ಹಿಡಿದೆವು ಎಂದು ವಿವರಿಸಿದ್ದಾರೆ.
ಐಪಿಎಲ್ ಸೆಪ್ಟೆಂಬರ್ 19ರಂದು ಶುರು- ನವೆಂಬರ್​ನಲ್ಲಿ ಫೈನಲ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 10 =
Remember me
