ನವದೆಹಲಿ:ಹಲವರು ಸಿನಿಮಾದಲ್ಲಿ ಮಾತ್ರ ಹೀರೋಗಳು. ಆದರೆ ಇನ್ನು ಬೆರಳೆಣಿಕೆಯಷ್ಟು ಮಂದಿ ನಿಜ ಜೀವನದಲ್ಲಿಯೂ ಹೀರೋಗಳೇ.
ಅಂಥ ನಿಜಜೀವನದ ಹೀರೋಗಳ ಪೈಕಿ ಕರೊನಾ ಹಾಗೂ ಪ್ರವಾಹದ ಸಮಯದಲ್ಲಿ ಹಗಲಿರುಳೂ ಶ್ರಮಿಸಿರುವ ನಟರಾದ ಸೋನು ಸೂದ್‌ ಮತ್ತು ಅಕ್ಷಯ್‌ಕುಮಾರ್‌ ಮುಂಚೂಣಿಯಲ್ಲಿದ್ದಾರೆ.
ಈ ಬಾರಿ ಸಂಭವಿಸಿದ ಭೀಕರ ಪ್ರವಾಹ, ಕರೊನಾ ಅವಧಿಯಲ್ಲಿ ಸಮಸ್ಯೆಗೆ ಸಿಲುಕಿದವರಿಗೆ ಸಹಾಯ ಮಾಡಿರುವ ಅಕ್ಷಯ್‌ ಕುಮಾರ್‌ ಹಾಗೂ ಕರೊನಾ ಸಂತ್ರಸ್ತರಿಗಾಗಿ ತಮ್ಮ ತನು-ಮನ-ಧನ ಎಲ್ಲವನ್ನೂ ಮೀಸಲಿಟ್ಟು ಸಹಾಯಹಸ್ತ ಚಾಚಿರುವ ನಟ ಸೋನು ಸೂದ್‌ ಅವರಿಗೆ ಭಾರತ ರತ್ನ ನೀಡುವಂತೆ ಇದೀಗ ಟ್ವಿಟರ್‌ನಲ್ಲಿ ಅಭಿಯಾನ ಶುರುವಾಗಿದೆ.
ಈ ಅಭಿಮಾನವನ್ನು ಖುದ್ದು ನಟಿಯಾಗಿರುವ ಕಂಗನಾ ರೌನಟ್‌ ಶುರು ಮಾಡಿದ್ದಾರೆ. ಚೆನ್ನೈ. ಬಿಹಾರದ ಪ್ರವಾಹದ ಸಮಯದಲ್ಲಿ ಅಕ್ಷಯ್‌ ಕುಮಾರ್‌ ಅವರು ತೋರಿರುವ ಧೈರ್ಯ, ಸಾಹಸ ಅಷ್ಟಿಷ್ಟಲ್ಲ. ತಮ್ಮ ಜೀವನವನ್ನೇ ಪಣಕ್ಕಿಟ್ಟು ಅವರು ಪ್ರವಾಹ ಪೀಡಿತರಿಗೆ ನೆರವಾಗಿದ್ದಾರೆ. ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆದ ಸಂದರ್ಭದಲ್ಲಿಯೂ ಅವರು ಸಾಕಷ್ಟು ನೆರವು ನೀಡಿದ್ದಾರೆ.
ಇದನ್ನೂ ಓದಿ:ಚೀನಾ ಬಾಲಬಿಚ್ಚಿದರೆ ಎಂಟೇ ನಿಮಿಷದಲ್ಲಿ ಉಡೀಸ್‌: ಇಲ್ಲಿದೆ ನೋಡಿ ಸಿದ್ಧತೆಯ ಪರಿ…
ಅದೇ ಇನ್ನೊಂದೆಡೆ ಸೋನು ಸೂದ್‌ ಅವರು, ಲಾಕ್‌ಡೌನ್ ಅವಧಿಯಲ್ಲಿ ತೊಂದರೆಗೆ ಸಿಲುಕಿದವರಿಗೆ ಸಹಾಯ ಮಾಡಿ ರಾಷ್ಟ್ರದಾದ್ಯಂತ ಗಮನ ಸೆಳೆದಿದ್ದಾರೆ. ವಲಸೆ ಕಾರ್ಮಿಕರು ಅವರ ಸ್ವಂತ ಸ್ಥಳಕ್ಕೆ ತಲುಪಲು ಸ್ವಂತ ಹಣದಲ್ಲಿ ಬಸ್ ವ್ಯವಸ್ಥೆ ಮಾಡಿರುವುದು, ಕರೊನಾ ಸೇವೆಯಲ್ಲಿ ತೊಡಗಿದ್ದವರಿಗೆ ತಮ್ಮ ಹೋಟೆಲ್ ಸಂಪೂರ್ಣ ಬಿಟ್ಟುಕೊಟ್ಟಿರುವುದು, 1500 ಪಿಪಿಇ ಕಿಟ್‌ಗಳನ್ನು ವೈದ್ಯರಿಗೆ ನೀಡಿರುವುದು ಸೇರಿದಂತೆ ಇವರು ಮಾಡಿರುವ ಶ್ಲಾಘನಾರ್ಹ ಕಾರ್ಯ ಅಷ್ಟಿಷ್ಟಲ್ಲ. ಆದ್ದರಿಂದ ಇಬ್ಬರಿಗೂ ಭಾರತರತ್ನ ನೀಡಬೇಕು ಎನ್ನುವುದು ಬಹುತೇಕ ಮಂದಿಯ ಒತ್ತಾಯ.
ಕಂಗನಾ ರೌನಟ್‌ ಅವರು ಶುರು ಮಾಡಿರುವ ಈ ಟ್ವೀಟ್‌ ಇದಾಗಲೇ ಸಹಸ್ರಾರು ಶೇರ್‌ಗಳನ್ನು ಕಂಡಿದ್ದು, ಅಭಿಯಾನದ ರೀತಿಯಲ್ಲಿ ಶುರುವಾಗಿದೆ.ಇದರ ಜತೆಗೆ, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್,ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಪದ್ಮಭೂಷಣ, ಪದ್ಮವಿಭೂಷಣ ಸಾಮ್ ಮಾಣಿಕ್ ಷಾ ಅವರಿಗೂ ಭಾರತ ರತ್ನ ನೀಡಬೇಕೆಂದು ಹಲವರು ಒತ್ತಾಯಿಸಿದ್ದಾರೆ.
@akshaykumarand@sonusoodhelped from the bottom of heart.They deserve Bharat Ratna…..🙏pic.twitter.com/Nmi4pFjPfv
— 𝐀𝐑𝐘𝐀𝐍 🦁 (@AkshayPunisher)June 27, 2020

ಶೌಚಗೃಹದ ಡಿಸೈನ್‌ ಕಳಿಸಿ- 26 ಲಕ್ಷ ರೂಪಾಯಿ ಗೆಲ್ಲಿ- ನಾಸಾದಿಂದ ಭಾರಿ ಆಫರ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 14 =
Remember me
