ನವದೆಹಲಿ: ಗುಜರಾತ್​ ಮೂಲದ ಸ್ಟರ್ಲಿಂಗ್​ ಬಯೋಟೆಕ್​ ಕಂಪನಿಯ ಸಂದೇಸಾರ ಗ್ರೂಪ್​ ನಡೆಸಿರುವ ಸಾಲದ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಕಾಂಗ್ರೆಸ್​ ನಾಯಕ, ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್​ ಪಟೇಲ್​ ಅವರ ಮನೆ ಮೇಲೆ ದಾಳಿ ಮಾಡಿ, ಅವರನ್ನು ವಿಚಾರಣೆಗೆ ಒಳಪಡಿಸಿದೆ.
ಸ್ಟರ್ಲಿಂಗ್​ ಬಯೋಟೆಕ್​ ಕಂಪನಿಯ ಪ್ರಮೋಟರ್​ ಆಗಿದ್ದ ಸಂದೇಸಾರ ಗ್ರುಪ್​ ಬ್ಯಾಂಕ್​ಗಳಿಂದ ಸುಮಾರು 15,000 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್​ಗಳಿಂದ ಪಡೆದು, ಅದನ್ನು ಮರುಪಾವತಿಸದೆ ವಂಚನೆ ಮಾಡಿದೆ. ಈ ಅಕ್ರಮ ಸಾಲದ ಹಗರಣದಲ್ಲಿ ಅಹ್ಮದ್​ ಪಟೇಲ್​ ಪುತ್ರ ಹಾಗೂ ಅಳಿಯನ ಹೆಸರು ಕೇಳಿಬಂದಿತ್ತು. ಅವರಿಬ್ಬರೂ ತಮಗೆ ಸಂದೇಸಾರ ಗ್ರೂಪ್​ ಬಗ್ಗೆ ಗೊತ್ತು. ಪ್ರಮುಖ ಆರೋಪಿಗಳಾದ ನಿತಿನ್​ ಸಂದೇಸಾರ, ಚೇತನ್​ ಸಂದೇಸಾರ ಮತ್ತು ದೀಪ್ತಿ ಸಂದೇಸಾರ ಪರಿಚಯ ಇದೆ ಎಂದು ಹೇಳಿದ್ದರು. ಅದಾದ ಬಳಿಕ ಅಹ್ಮದ್​ ಪಟೇಲ್​ ಅವರನ್ನೂ ಇ.ಡಿ. ವಿಚಾರಣೆಗೆ ಒಳಪಡಿಸಿದೆ.ಇದನ್ನೂ ಓದಿ:ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ಮೂವರು ಮಕ್ಕಳು ಸಾವು, ಬದುಕುಳಿದ ತಾಯಿ
ಒಂದು ವಾರದಲ್ಲಿ ಮೂರು ಬಾರಿ ಇ.ಡಿ.ವಿಚಾರಣೆಗೆ ಹಾಜರಾದ ಅಹ್ಮದ್​ ಪಟೇಲ್​ ಅವರು ಇದೀಗ ಜಾರಿ ನಿರ್ದೇಶನಾಲಯದ ವಿರುದ್ಧವೇ ವ್ಯಂಗ್ಯವಾಡಿದ್ದಾರೆ. ಇ.ಡಿ.ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದೆ. ಆದರೆ ಅವರಿಗೆ ನನ್ನ ಒಂದು ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ.
ಟ್ವೀಟ್ ಮಾಡಿರುವ ಅಹ್ಮದ್​ ಪಟೇಲ್​, ವಾರದಲ್ಲಿ ಮೂರು ಬಾರಿ ನಮ್ಮ ಮನೆಗೆ ಆಗಮಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಧನ್ಯವಾದಗಳು. ನಾನು ಅವರ 128 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ನನ್ನ ಒಂದು ಮೂಲಭೂತ ಪ್ರಶ್ನೆಗೆ ಉತ್ತರಿಸಲು ಅವರು ವಿಫಲರಾದರು ಎಂದು ಹೇಳಿದ್ದಾರೆ.ಇದನ್ನೂ ಓದಿ:ಕೊವಿಡ್​-19 ಸೋಂಕಿಗೆ ಒಳಗಾದ ತನ್ನ 80 ವರ್ಷದ ತಾಯಿಗೆ ಈ ಮಗ ಕೊಟ್ಟಿದ್ದು ಕ್ರೂರ ಶಿಕ್ಷೆ…
ಸಂದೇಸಾರ ಗ್ರೂಪ್​ಗೆ ನೀಡಲಾಗುತ್ತಿದ್ದ ಹಲವು ಸವಲತ್ತುಗಳು, ಗೌರವ, ಅನುಕೂಲಗಳಿಗೆ ಗುಜರಾತ್​ ರಾಜ್ಯ ಸರ್ಕಾರದಲ್ಲಿದ್ದ ಯಾರು ಜವಾಬ್ದಾರಿಯಾಗಿದ್ದರು ಎಂಬ ಪ್ರಶ್ನೆಯನ್ನು ನಾನು ತನಿಖಾ ದಳಕ್ಕೆ ಕೇಳಿದೆ. ಆದರೆ ಅವರು ಈ ಪ್ರಶ್ನೆಗೆ ಉತ್ತರವನ್ನೇ ನೀಡಲಿಲ್ಲ ಎಂದು ಅಹ್ಮದ್​ ಪಟೇಲ್​ ತಿಳಿಸಿದ್ದಾರೆ.
ಇ.ಡಿ. ಅಧಿಕಾರಿಗಳು ಕೇಳಿದ 128 ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಅವರಿಗೆ ನನ್ನ ವಿರುದ್ಧದ ಒಂದೂ ಪುರಾವೆ ಸಿಗಲಿಲ್ಲ. ನನ್ನ ಎಲ್ಲ ಉತ್ತರಗಳಿಂದ ಅಧಿಕಾರಿಗಳು ತೃಪ್ತರಾಗಿದ್ದಾರೆ. ಆದರೆ ನನಗೆ ಅನ್ನಿಸುವ ಪ್ರಕಾರ ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಈ ಹುನ್ನಾರದ ಹಿಂದೆ ಯಾರಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಹ್ಮದ್​ ಪಟೇಲ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)
ಕಾಂಗ್ರೆಸ್​ ನಾಯಕ ಅಹ್ಮದ್​ ಪಟೇಲ್​ ನಿವಾಸದ ಮೇಲೆ ಇ.ಡಿ.ರೇಡ್​​; ಅಧಿಕಾರಿಗಳಿಂದ ವಿಚಾರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
