ನವದೆಹಲಿ:ಲೋಕಸಭೆ ಚುನಾವಣೆ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯತ್ತ ಮುಖ ಮಾಡಿದ್ದಾರೆ. ಮೋದಿ ಧ್ಯಾನದ ಬಗ್ಗೆ ಕಾಂಗ್ರೆಸ್​ ವ್ಯಂಗ್ಯವಾಡಿದ್ದು, ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್​ನವರು ಥಾಯ್ಲೆಂಡ್​ಗೆ ಹೋಗುತ್ತಾರೆ ಎಂದು ಟೀಕಿಸಿದರು.
ಇದನ್ನೂ ಓದಿ:35 ಲಕ್ಷ ಮೌಲ್ಯದ ಚಿನ್ನ ಕಳ್ಳಸಾಗಣೆ: ಶಶಿ ತರೂರ್ ಆಪ್ತ ಸಹಾಯಕ ವಿಮಾನ ನಿಲ್ದಾಣದಲ್ಲಿ ಬಂಧನ!
ಖಾಸಗಿ ಮಾಧ್ಯಮಕ್ಕೆ ನೀಡಿದ ನೀಡಿದ ವಿಶೇಷ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಕನ್ಯಾಕುಮಾರಿಯಲ್ಲಿ ಧ್ಯಾನ ಬಗ್ಗೆ ಕಾಂಗ್ರೆಸ್​ ನೆಗೆಟಿವ್​ ಪ್ರಚಾರ ಮಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಥಾಯ್ಲೆಂಡ್ ಅಥವಾ ಅಜ್ಞಾತ ಸ್ಥಳಗಳಿಗೆ ವಿಹಾರಕ್ಕೆ ಹೋಗುತ್ತಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಮೇ 30ರಂದು 45 ಗಂಟೆಗಳ ಕಾಲ ಧ್ಯಾನ ಮಾಡಲಿರುವ ವಿಚಾರಕ್ಕೆ ಕಾಂಗ್ರೆಸ್‌ ಆಕ್ಷೇಪ ತೆಗೆದಿದೆ. ಇದು ಚುನಾವಣಾ ನೀತಿ ಸಂಹಿತೆಯ 48 ಗಂಟೆಗಳ ‘ಸೈಲೆನ್ಸ್‌ ಪಿರೇಡ್‌’ನ (ಮೌನದ ಅವಧಿ) ಉಲ್ಲಂಘನೆಯಾಗಲಿದೆ ಎಂದು ಬುಧವಾರ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
“ಭಾರತದ ಐತಿಹಾಸಿಕ, ಸಾಂಸ್ಕೃತಿಕ ಅಥವಾ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ನಾಯಕರು ಎಂದಿಗೂ ಹೆಮ್ಮೆಪಡುವುದಿಲ್ಲ. ಅವರು ಥಾಯ್ಲೆಂಡ್ ಅಥವಾ ಎಲ್ಲೋ ಅಜ್ಞಾತ ಸ್ಥಳಕ್ಕೆ ವಿಹಾರಕ್ಕೆ ಹೋಗುತ್ತಾರೆ. ಅವರು ಹೋಗಿ ಅಂತಹ ಧ್ಯಾನ ಮಾಡುವುದು ಮತ್ತು ಈ ಸ್ಥಳಗಳಿಂದ ಶಕ್ತಿಯನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ. ಏಕೆಂದರೆ ಇವುಗಳು ಮೂಲಭೂತವಾಗಿ ಭಾರತೀಯವಾಗಿವೆ” ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
ಪ್ರಧಾನಮಂತ್ರಿಯವರು ವಿವೇಕಾನಂದ ರಾಕ್ ಸ್ಮಾರಕಕ್ಕೆ ಹೋಗಲು ಏಕೆ ಆಯ್ಕೆ ಮಾಡಿಕೊಂಡರು ಎಂದು ಕೇಳಿದಾಗ, ಚುನಾವಣಾ ಪ್ರಚಾರವು ತೀವ್ರ ಮತ್ತು ದೀರ್ಘಾವಧಿಯದ್ದಾಗಿದೆ ಎಂದು ಸೀತಾರಾಮನ್ ವಿವರಿಸಿದರು.
ಪಿಎಂ ಮೋದಿ ಪ್ರಚಾರ ಮಾತ್ರವಲ್ಲದೆ ಹಲವಾರು ಸಂದರ್ಶನಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಇದನ್ನು ಮಾಡಿದ ಯಾರಿಗಾದರೂ, ಪ್ರಚಾರ ಮುಗಿದ ನಂತರ ಮತ್ತು ಮೌನದ ಅವಧಿ ಬಂದ ನಂತರ, ಮೋದಿ ಅವರು ಧ್ಯಾನವನ್ನು ಮಾಡುತ್ತಾನರೆ ಅಥವಾ ಮೌನವಾಗಿಯೇ ಇರುತ್ತಾರೆ. ಅವರು ಯಾವುದೇ ರಾಜಕೀಯ ಅಧಿವೇಶನಗಳಲ್ಲಿ ಮಾತನಾಡುತ್ತಿಲ್ಲ. ಅವರು ಕೇವಲ ಧ್ಯಾನ ಮಾಡಲು ಹೊರಟಿದ್ದಾರೆ ಎಂದು ಸೀತಾರಾಮನ್ ತಿರುಗೇಟು ನೀಡಿದರು.
ದಲಿತರು, ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದ ಪ್ರಧಾನಿ ಮೋದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
