ಗೋರಖಪುರ:ಕಾಂಗ್ರೆಸ್ ಪಕ್ಷದ ಸರ್ಕಾರ 70 ವರ್ಷಗಳಲ್ಲಿ ನಿರ್ಮಾಣ ಮಾಡಿದ್ದೆಲ್ಲವನ್ನೂ 7 ವರ್ಷಗಳಲ್ಲೇ ಬಿಜೆಪಿ ಸರ್ಕಾರ ವ್ಯರ್ಥ ಮಾಡುತ್ತಿದೆ ಎಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರದಲ್ಲಿ ನಿರಂತರವಾಗಿ ದಲಿತರು ಮತ್ತು ಅಲ್ಪಸಂಖ್ಯಾತರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್​​ನ ಪ್ರತಿಜ್ಞಾ ರಾಲಿಯ ಅಂಗವಾಗಿ, ಇಂದು(ಅ.31) ಸಿಎಂ ಯೋಗಿ ಅವರ ಕ್ಷೇತ್ರವಾದ ಗೋರಖ್​ಪುರದಲ್ಲಿ ಪ್ರಿಯಾಂಕಾ ಗಾಂಧಿ ಮಾತನಾಡಿದರು. ಯುಪಿಯಲ್ಲಿ 5 ಕೋಟಿ ನಿರುದ್ಯೋಗಿ ಯುವಕ-ಯುವತಿಯರಿದ್ದಾರೆ. ಪ್ರತಿ ದಿನ ಮೂವರು ಯುವಕರು ನಿರುದ್ಯೋಗದಿಂದಾಗಿ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ ಎಂದರು.
#WATCH| She (ex-PM Indira Gandhi) knew that she could be murdered but never bowed down because for her, there was nothing greater than your faith in her. It's because of her teachings that I'm standing in front of you & I'll also never break your faith: Priyanka Gandhi, Congresspic.twitter.com/qR8rmTFwer
— ANI UP/Uttarakhand (@ANINewsUP)October 31, 2021

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಹತ್ಯೆ ಆಗುತ್ತದೆ ಎಂದು ಗೊತ್ತಿದ್ದರೂ ಜನರ ವಿಶ್ವಾಸಕ್ಕಾಗಿ ಕೆಲಸ ಮುಂದುವರಿಸಿದ್ದರು. ಅವರು ಹೇಳಿಕೊಟ್ಟ ಮೌಲ್ಯಗಳಿಂದಾಗಿಯೇ ನಾನು ಮತ್ತು ನನ್ನ ಸೋದರ ರಾಹುಲ್​ ಗಾಂಧಿ ನಿಮ್ಮ ಮುಂದೆ ನಿಂತಿದ್ದೇವೆ. ನಾವು ನಿಮ್ಮ ಬೆಂಬಲಕ್ಕೆ ಸ್ಥಿರವಾಗಿ ನಿಲ್ಲುತ್ತೇವೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರಿಯಾಂಕ ನುಡಿದರು.
“ಕಾಂಗ್ರೆಸ್​ ಸರ್ಕಾರ ರೈಲ್ವೇಸ್​, ವಿಮಾನ ನಿಲ್ದಾಣಗಳು, ರಸ್ತೆಗಳು ಎಲ್ಲವನ್ನೂ ನಿರ್ಮಾಣ ಮಾಡಿತು. ಅವರು ಇವೆಲ್ಲವನ್ನೂ ಮಾರುತ್ತಿದ್ದಾರೆ. ನಾವು 70 ವರ್ಷಗಳಲ್ಲಿ ಏನು ಮಾಡಿದೆವು ಎಂದು ಅವರು ಕೇಳುತ್ತಾರೆ. ನಮ್ಮ 70 ವರ್ಷಗಳ ಪ್ರಯತ್ನಗಳನ್ನು ಅವರು 7 ವರ್ಷಗಳಲ್ಲಿ ವ್ಯರ್ಥ ಮಾಡಿದ್ದಾರೆ” ಎಂದು ಪ್ರಿಯಾಂಕಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಲಖೀಂಪುರ್​ ಖೇರಿ ಘಟನೆಯು ರಾಜ್ಯದಲ್ಲಿ ಮತ್ತು ದೇಶದಲ್ಲಿ ರೈತರ ಧ್ವನಿ ಕೇಳುವವರು ಯಾರೂ ಇಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದರು.
ನಕಲಿ ಕೇಸ್​ ಹಾಕಲು ಡ್ರಗ್ಸ್​ ಪ್ಲಾಂಟ್​ ಮಾಡುತ್ತೆ ‘ವಾಂಖೇಡೆ ಗ್ಯಾಂಗ್​’: ಮಹಾ ಸಚಿವ

VIDEO| ಪವರ್​ ಸ್ಟಾರ್​ ಪುನೀತ್​ ನಿಧನಕ್ಕೆ ಪುಟಾಣಿ ಅಭಿಮಾನಿ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 4 =
Remember me
