ಕೋಲ್ಕತಾ:ದೇಶಾದ್ಯಂತ ಲಾಕ್​ಡೌನ್​ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಮದ್ಯ ಮಾರಾಟದ ಜತೆಗೆ ಅನಗತ್ಯ ಓಡಾಟ, ಸಂಚಾರವನ್ನೂ ನಿಷೇಧಿಸಲಾಗಿದೆ. ಆದರೂ ಇಲ್ಲಿನ ಮೂವರು ವಾಣಿಜ್ಯೋದ್ಯಮಿಗಳು ಒಂದೆಡೆ ಸೇರಿ ಮದ್ಯಪಾನ ಮಾಡಿದ್ದರು.
ಸಂಪೂರ್ಣ ಪಾನಮತ್ತರಾದ ಬಳಿಕ ನಡುರಾತ್ರಿಯಲ್ಲಿ ಜಾಲಿ ರೈಡ್​ಗೆ ಹೋಗಬೇಕಿಸಿತು. ತಕ್ಷಣವೇ ಐಷಾರಾಮಿ ಆಡಿ ಕಾರನ್ನು ತೆಗೆದುಕೊಂಡು ಅವರೆಲ್ಲರೂ ಜಾಲಿ ರೈಡ್​ಗೆ ಹೊರಟರು. ಆದರೆ, ಸೇರಿದ್ದು ಮಾತ್ರ ಜೈಲು…!
ಇದನ್ನೂ ಓದಿ:ಜನರ ದೇಹದ ತಾಪಮಾನ ತಿಳಿಸುವ ಕನ್ನಡಕ; ಕ್ಷಣಾರ್ಧದಲ್ಲಿ ಜ್ವರಪೀಡಿತರನ್ನು ಗುರುತಿಸುತ್ತೆ!
ಹೌದು. ಕಂಠಮಟ್ಟ ಕುಡಿದಿದ್ದ ಕಾರಿನ ಚಾಲಕ ಬರಿದಾದ ರಸೆಲ್​ ಸ್ಟ್ರೀಟ್​ ಮತ್ತು ಮಿಡಲ್​ಟನ್​ ಸ್ಟ್ರೀಟ್​ನ ಮಧ್ಯೆ ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ. ಇದನ್ನು ಗಮನಿಸಿದ ಕೋಲ್ಕತದ ಶೇಕ್​ಸ್ಪಿಯರ್​ ಸರಾನಿ ಪೊಲೀಸ್​ ಠಾಣೆ ಸಿಬ್ಬಂದಿ ಕಾರನ್ನು ತಡೆದಿದ್ದರು.
ಕಾರಿನ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಬಳಸುತ್ತಿರುವುದು ಪತ್ತೆಯಾಯಿತು. ಈ ನಕಲಿ ನಂಬರ್​ ಬಳಸಿ ಕೆಲವರ್ಷಗಳ ಹಿಂದೆ ಈ ಕಾರನ್ನು ಕೊರಿಯಾದ ರಾಯಭಾರ ಕಚೇರಿಗೆ ಬಾಡಿಗೆಗೆ ಬಿಟ್ಟಿದ್ದೂ ಗೊತ್ತಾಯಿತು.
ಇದನ್ನೂ ಓದಿ:ರೆಡ್​ ಜೋನ್​ನಲ್ಲೂ ಆರ್ಥಿಕ ಚಟುವಟಿಕೆ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್​ ಸಿಗ್ನಲ್​, ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ
ಈ ಎಲ್ಲ ಕಾರಣಗಳಿಗಾಗಿ ಕಾರಿನ ಮಾಲೀಕ ಹಾಗೂ ಅದಲ್ಲಿದ್ದ ಇನ್ನಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ 419, 417, 420, 120ಬಿ, 467, 469, 468 ಮತ್ತು 471 ವಿಧಿಗಳನ್ವಯ ವಂಚನೆ, ಕ್ರಿಮಿನಲ್​ ಸಂಚು ಮತ್ತು ಮೋಸದ ಆರೋಪಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಅಲ್ಲದೆ, ಮೋಟಾರು ವಾಹನ ಕಾಯ್ದೆಯ 85ನೇ ವಿಧಿಯನ್ವಯ (ಪಾನಮತ್ತನಾಗಿ ವಾಹನ ಚಾಲನೆ) ಹಾಗೂ ಕೋಲ್ಕತಾ ಪೊಲೀಸ್​ ಅಧಿನಿಯಮಗಳ ಉಲ್ಲಂಘನೆ ಆರೋಪದಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕೋಲ್ಕತಾ ಪೊಲೀಸರು ಮಾಹಿತಿ ನೀಡಿದ್ದಾರೆ.
VIDEO: ಮಹಾರಾಷ್ಟ್ರದಿಂದ ಹೊರಟಿತ್ತು ಈ ಟ್ರಕ್​…ತಪಾಸಣೆಗೆಂದು ತಡೆದು ನಿಲ್ಲಿಸಿದ ಪೊಲೀಸರು ಫುಲ್​ ಕಂಗಾಲು…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 3 =
Remember me
