ಮುಂಬೈ:ಮೆನೆಯ ಬಾಗಿಲಿನ ಚೌಕಟ್ಟುಗಳನ್ನು ಗೆದ್ದಲು ತಿಂದಿರಬಹುದು ಎಂದು ಭಾವಿಸಿ ಸ್ವಚ್ಛಗೊಳಿಸಲು ಮುಂದಾದ ಮನೆ ಅವರಿಗೆ ಹುಳಗಳ ಬದಲು ಹಾವಿನ ಮರಿಗಳು ಸಿಕ್ಕಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದಿದೆ.
ಚೌಕಟ್ಟುಗಳನ್ನು ತೆಗೆದು ಪರಿಶೀಲನೆ ನಡೆಸಿದಾಗ ಮನೆ ಮಂದಿ ಶಾಕ್​ ಆಗಿದ್ದು ಕೂಡಲೇ ಹಾವು ಹಿಡಯುವವರನ್ನು ಕರೆದಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮನೆ ಮಾಲೀಕ ಸೀತಾರಾಮ್​ ಶರ್ಮಾ ಎಂದಿನಂತೆ ಮನೆ ಕೆಲಸದವರು ಶುಚಿಗೊಳಿಸುವ ವೇಳೆ ಹಾವಿನ ಮರಿ ಬಾಗಿಲಿನ ಚೌಕಟ್ಟಿನೊಳಗೆ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಮೊದಲು ನಾವು ಗೆದ್ದಲು ಹಿಡಿದಿರಬಹುದು ಎಂದು ಭಾವಿಸಿದ್ದೆವು.
ಇದನ್ನೂ ಓದಿ:VIDEO| ಅರಣ್ಯ ಇಲಾಖೆ ಕರೆದೊಯ್ದಿದ್ದ ಕೊಕ್ಕರೆ-ಆರಿಫ್​ ಒಂದಾಗಬೇಕು: ಬಿಜೆಪಿ ಸಂಸದ
ನಂತರ ನಾವು ಹಾವು ಹಿಡಿಯುವವರನ್ನು ಕರೆಸಿದೆವು ಅವರು ಸತತ ನಾಲ್ಕು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಒಳಗೆ 39 ಹಾವಿನ ಮರಿ ಇರುವುದಾಗಿ ತಿಳಿಸಿದ್ದಾರೆ ಎಂದು ಮನೆ ಮಾಲೀಕ ಸೀತಾರಾಮ್​ ಶರ್ಮಾ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉರಗ ತಜ್ಱ ಬಂಟಿ ಶರ್ಮಾ ಹಿಡಿದಿರುವ ಹಾವುಗಳು ವಿಷಕಾರಿ ಅಲ್ಲ. ಹಾವುಗಳು ಬಾಗಿಲಿನ ಚೌಕಟ್ಟಿನಲ್ಲಿದ್ದ ಗೆದ್ದಲುಗಳನ್ನು ತಿನ್ನುತ್ತಿದ್ದವು. ಸದ್ಯ ಹಿಡಿದಿರುವ ಹಾವುಗಳು ವಾರದ ಹಿಂದೆಯಷ್ಟೇ ಜನನವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:8 + twelve =
Remember me
