ತಿರುಪತಿ:ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ವಿರುದ್ಧ ಆಗಾಗ ಚಿತಾವಣೆಗಳು ನಡೆಯುವುದು ಹೊಸದೇನಲ್ಲ. ಅದು ಹಿಂದುಪರ ನಿಲುವುಗಳನ್ನು ಹೊಂದಿದೆ ಎಂಬ ಕಾರಣಕ್ಕೆ, ಅದು ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂಬ ವಿಷಯಕ್ಕೆ ಆಗಾಗ ಕೆಲ ವಿರೋಧಿಗಳ ಅಸಮಾಧಾನಕ್ಕೆ ಗುರಿಯಾಗುತ್ತಿರುವುದೂ ಹೊಸದೇನಲ್ಲ.
ಇಷ್ಟು ದಿನ ಆರ್​ಎಸ್​ಎಸ್​ ವಿರುದ್ಧ, ಅದರ ಸ್ವಯಂಸೇವಕರ ವಿರುದ್ಧ ವ್ಯಕ್ತವಾಗುತ್ತಿದ್ದ ವಿರೋಧ ಇದೀಗ ಅದರ ಸ್ಟಿಕ್ಕರ್​ನವರೆಗೂ ಬಂದುಬಿಟ್ಟಿದೆಯಾ ಎಂಬ ಅನುಮಾನ ಮೂಡಲಾರಂಭಿಸಿದೆ. ಏಕೆಂದರೆ ವಾಹನದ ಮೇಲೆ ಆರ್​ಎಸ್​ಎಸ್​ ಕುರಿತ ಸ್ಟಿಕ್ಕರ್ ಇದೆ ಎಂಬ ಕಾರಣಕ್ಕೇ ತಿರುಮಲಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:Video | ಗಾಡಿಯ ಹಿಂದೆಯೇ ಸುಮಾರು 3 ಕಿಲೋಮೀಟರ್​ ದೂರ ಓಡಿದ ‘ಅಮ್ಮ’…
ತಿರುಪತಿಯ ಅಲಿಪಿರಿ ನಿಲ್ದಾಣದಲ್ಲಿ ತಾವು ಹೋಗುತ್ತಿದ್ದ ವಾಹನವನ್ನು ತಡೆದು, ಅದರಲ್ಲಿದ್ದ ಆರ್​ಎಸ್​ಎಸ್​ ಸ್ಟಿಕ್ಕರ್ ತೆಗೆದರಷ್ಟೇ ತಿರುಮಲಕ್ಕೆ ಪ್ರವೇಶಿಸಲು ಬಿಡುವುದಾಗಿ ಹೇಳಿದ್ದಾರೆ ಎಂದು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ನೋವು ತೋಡಿಕೊಂಡಿದ್ದಾರೆ. ಆರ್​ಎಸ್ಎಸ್​ ಕ್ರಿಶ್ಚಿಯನ್​ ಅಥವಾ ಮುಸ್ಲಿಂ ಸಂಘಟನೆಯಲ್ಲ. ಆರ್​ಎಸ್ಎಸ್​ ಬಿಜೆಪಿ ಥರ ರಾಜಕೀಯ ಪಕ್ಷವೂ ಅಲ್ಲ. ಹೀಗಿದ್ದೂ ಯಾಕೆ ಪ್ರವೇಶಿಸಲು ಬಿಡುತ್ತಿಲ್ಲ, ಯಾಕೆ ತಿರುಮಲದಲ್ಲಿ ಹಿಂದೂಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಅಸಮಾಧಾನ ಹೊರಹಾಕಿರುವ ವಿಡಿಯೋ ದೃಶ್ಯಾವಳಿ ಇದೀಗ ವೈರಲ್​ ಆಗಿದೆ.
ಕಾರ್ ಮೇಲೆ ಆರ್​ಎಸ್​ಎಸ್​ ಸ್ಟಿಕ್ಕರ್ ಇದ್ದಿದ್ದಕ್ಕೆ ತಡೆದು ಆಕ್ಷೇಪವಿವರಗಳಿಗೆhttps://t.co/YaFZZbZDD9ನೋಡಿpic.twitter.com/DYamkHIwEa
— Vijayavani (@VVani4U)December 22, 2020

ಎಂಐ 10ಟಿ ಪ್ರೋ ಫೋನ್​ ಇಲ್ಲದೆ ಮದುವೆಯಾಗುವುದಿಲ್ಲ ಎಂದ ಯುವಕ! ಯುವಕನ ಆಸೆಯನ್ನು ಈಡೇರಿಸಿದ ಶಾವೊಮಿ ಸಂಸ್ಥೆ!

ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!

ವಾಟರ್​ ಟ್ಯಾಂಕ್​ನಲ್ಲಿದ್ದವು ನಾಲ್ಕು ಹೆಣ! ವೈರಿಗಳೇ ಇಲ್ಲದ ಕುಟುಂಬದ ನಿಗೂಢ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
