ಥಾಣೆ:ಗಂಡನನ್ನು ಕಳೆದುಕೊಂಡಿದ್ದ ಆಕೆ ಸಹೋದರರೊಂದಿಗೆ ವಾಸಿಸುತ್ತಿದ್ದಳು. ಆದರೆ ಆಕೆಯ ಕೆಲಸ ಬಗ್ಗೆ ಸಹೋದರರಿಗೆ ಇನ್ನಿಲ್ಲದ ತಾತ್ಸಾರವಿತ್ತು. ಹೀಗಾಗಿ ಪ್ರತ್ಯೇಕವಾಗಿ ವಾಸಿಸುವಂತೆ ಸದಾ ಒತ್ತಾಯಿಸುತ್ತಿದ್ದರು. ಆದರೆ, ಇದೇ ಆಕೆಯ ಜೀವಕ್ಕೆ ಕುತ್ತಾಗಿದ್ದು ವಿಪರ್ಯಾಸ.
ಪ್ರತಿಭಾ ಮ್ಹಾತ್ರೆಗೆ ಇನ್ನೂ 29 ವರ್ಷ. ಜತೆಗೆ ಆಕೆ ಕೆಲಸ ಮಾಡುತ್ತಿದ್ದುದು ಬಿಯರ್​ ಬಾರ್​ನಲ್ಲಿ. ಅಲ್ಲದೇ, ಆಕೆಯ ಬಗ್ಗೆ ಜನರಾಡುತ್ತಿದ್ದ ಮಾತುಗಳಿಂದ ನಾಲ್ವರು ಸಹೋದರರು ಕುದ್ದು ಹೋಗಿದ್ದರು. ಇದು ಅವರ ನಡುವೆ ಜಗಳಕ್ಕೂ ಕಾರಣವಾಗಿತ್ತು. ಹೀಗಾಗಿ ಪ್ರತ್ಯೇಕ ಮನೆ ಮಾಡಿಕೊಂಡು ಇರುವಂತೆ ಹೇಳಿದ್ದರು. ಇದಕ್ಕೆ ಆಕೆ ಒಪ್ಪಿರಲಿಲ್ಲ.
ಇದನ್ನೂ ಓದಿ;ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಹುಡುಗಿಯರಿಗೆ ವಂಚಿಸೋದೇ ಖಯಾಲಿ
ನಾಲ್ವರು ಸೇರಿಕೊಂಡು ಪ್ರತಿಭಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಶವವನ್ನು ಪ್ಲಾಸ್ಟಿಕ್​ ಚೀಲವೊಂದರಲ್ಲಿ ಹಾಕಿಕೊಂಡು ಹಾಳೆಯಲ್ಲಿ ಸುತ್ತಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಟೈರ್​ಗಳು, ಕಟ್ಟಿಗೆ ಹಾಗೂ ಸೀಮೆ ಎಣ್ಣೆ ಹಾಕಿ ಸುಟ್ಟಿದ್ದಾರೆ. ಬಳಿಕ ಏನೂ ಆಗಿಯೇ ಇಲ್ಲ ಎನ್ನುವಂತೆ ಸುಮ್ಮನಾಗಿದ್ದರು.
ಪೊಲೀಸರಿಗೆ ಸಿಕ್ಕ ಸುಳಿವು ಸಹೋದರರ ಕೃತ್ಯವನ್ನು ಬಯಲಾಗಿಸಿದೆ. ನಾಥ್​ ಅಶೋಕ್​ ಪಾಟೀಲ್​, ಭಗವಾನ್​, ಬಾಲಾಜಿ ಎಂಬುವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಸಹೋದರ ಪಾಂಡುರಂಗನಿಗಾಗಿ ಶೋಧ ನಡೆದಿದೆ ಎಂದು ಸಹಾಯಕ ಪೊಲೀಸ್​ ಆಯುಕ್ತ ಪೊಲೀಸ್​ ಎಸ್​.ಎಸ್​. ಬುರ್ಸೆ ಹೇಳಿದ್ದಾರೆ.
ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − three =
Remember me
