ರಾಯ್​ಪುರ್:ಆರೋಪಿಗಳು ಪೊಲೀಸ್ ವಿಚಾರಣೆಯ ವೇಳೆ ಬೆಚ್ಚಿ ಬೀಳುವಂತಹ ಮಾಹಿತಿಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಈ ಆರೋಪಿಯೊಬ್ಬ ವಿಚಾರಣೆಯ ವೇಳೆ ಕುತೂಹಲಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾನೆ. ಈತನ ಮಾತುಗಳನ್ನು ಕೇಳಿದ ಪೊಲೀಸ್ ಅಧಿಕಾರಿಗಳು ನಗೆಗಡಲಲ್ಲಿ ತೇಲಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚತ್ತೀಸ್​​ಗಢ ಪೊಲೀಸರು ಕಳ್ಳನೊಬ್ಬನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡು ಕುತೂಹಲಕರ ಸಂಗತಿಯೊಂದನ್ನು ಹೇಳಿದ್ದಾನೆ. ದರೋಡೆ ಮಾಡಿದಾಗ ನನಗೆ ಆರಂಭದಲ್ಲಿ ಸಂತೋಷವಾಯ್ತು. ನಂತರ ನಾನು ತಪ್ಪು ಮಾಡಿದ್ದೇನೆ ಎನ್ನುವುದು ನನಗೆ ಅರಿವಾಯ್ತು. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾನೆ.
चोरी करके अच्छा लगा..लेकिन बाद में पछतावा हुआ 😁pic.twitter.com/b5bqFHDViG— Shubhankar Mishra (@shubhankrmishra)December 2, 2022
चोरी करके अच्छा लगा..लेकिन बाद में पछतावा हुआ 😁pic.twitter.com/b5bqFHDViG
ಪೊಲೀಸ್ ವರಿಷ್ಠಾಧಿಕಾರಿ ಡಾ.ಅಭಿಷೇಕ್ ಪಲ್ಲವ ಆರೋಪಿಯಲ್ಲಿ ಎಷ್ಟು ಹಣವನ್ನು ದರೋಡೆ ಮಾಡಿದ್ದೀಯ ಎಂದು ಕೇಳಿದ್ದಾರೆ. ಈ ವೇಳೆ ತಾನು 10 ಸಾವಿರ ರೂಪಾಯಿ ದರೋಡೆ ಮಾಡಿರುವುದಾಗಿ ಹೇಳಿದ್ದಾನೆ. ಹಣವನ್ನು ಏನು ಮಾಡಿದೆ ಎಂದು ಕೇಳಿದಾಗ, ನನಗೆ ನಿಧಾನವಾಗಿ ತಪ್ಪಿನ ಅರಿವಾಯ್ತು. ಹೀಗಾಗಿ ಕದ್ದ ಹಣವನ್ನು ಅಗತ್ಯವಿರುವವರಿಗೆ ಸಹಾಯ ಮಾಡಿದೆ. ರಸ್ತೆ ಬದಿಯಲ್ಲಿರುವ ಅನಾಥರಿಗೆ ಬೆಡ್​ಶೀಟ್ ನೀಡಿದೆ ಎಂದು ಹೇಳಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 6 =
Remember me
