ಮುಂಬೈ:ಹಾಡಹಗಲಲ್ಲೇ ನಡುರಸ್ತೆಯಲ್ಲಿ ವೃದ್ಧದಂಪತಿಯನ್ನು ಯಾಮಾರಿಸಿ ಕಳ್ಳತನ ಮಾಡಿರುವ ಖತರ್ನಾಕ್​ ಖದೀಮನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯಲ್ಲಿ ಎನ್ನಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ:ನಗ್ನ ಚಿತ್ರಕ್ಕಾಗಿ ಕ್ಯಾರವಾನ್​ನಲ್ಲಿ ಹಿಡನ್​ ಕ್ಯಾಮೆರಾ ಅಳವಡಿಸಿದ್ರು; ಸ್ಫೋಟಕ ವಿಚಾರ ಬಿಚ್ಚಿಟ್ಟ ಜನಪ್ರಿಯ ನಟಿ
ದಿನವಿಡಿ ಹೊರಗಿದ್ದ ವೃದ್ಧದಂಪತಿ ಫಾಸ್ಟ್​​ಫುಡ್​ ಸವಿಯಲು ತೀರ್ಮಾನಿಸಿ ರಸ್ತೆ ಬದಿಯಲ್ಲಿ ಸ್ಕೂಟರ್​ ನಿಲ್ಲಿಸುತ್ತಾರೆ. ಬಳಿಕ ಮಹಿಳೆ ಅಲ್ಲೇ ನಿಂತು ಅವರ ಪತಿ ಫಾಸ್ಟ್​​ಫುಡ್​ ಖರೀದಿಸಲು ಅಂಗಡಿಗೆ ಹೋಗುತ್ತಾರೆ. ಅಲ್ಲೆ ನಿಂತಿದ್ದ ಮಹಿಳೆ ಕೆಳಗೆ ಬಿದ್ದ ವಸ್ತುವೊಂದನ್ನು ತೆಗೆದುಕೊಳ್ಳಲು ಬಾಗುತ್ತಾರೆ. ತಕ್ಷಣ ಅಲ್ಲಿದ್ದ ವ್ಯಕ್ತಿಯೊಬ್ಬ ಸ್ಕೂಟರ್​​ನಲ್ಲಿ ಇಟ್ಟಿದ್ದ ಬ್ಯಾಗ್​​ ಅನ್ನು ಕದ್ದು ಪರಾರಿಯಾಗುವುದನ್ನು ವೈರಲ್​ ವಿಡಿಯೋದಲ್ಲಿ ಕಾಣಬಹುದಾಗಿದೆ.
ಆ ಬ್ಯಾಗ್​ನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇತ್ತು ಎನ್ನಲಾಗಿದೆ. ಬ್ಯಾಗ್​ ಕದ್ದದ್ದನ್ನು ಕಂಡ ಮಹಿಳೆ ಆತನ ಹಿಂದೆ ಓಡುತ್ತಾರೆ ಹಾಗೂ ಸಹಾಯ ಮಾಡುವಂತೆ ಕಿರುಚುತ್ತಾರೆ. ಆಕೆಯ ಪತಿ ಅಂಗಡಿಯಿಂದ ವಾಪಸಾಗುತ್ತಾರೆ ಜತೆಗೆ ಸುತ್ತಮುತ್ತಲಿನವರೆಲ್ಲಾ ಅಲ್ಲಿ ಸೇರುವುದನ್ನು ವಿಡಿಯೋದಲ್ಲಿ ನೋಡಬಹುದು.
In Pune, a couple’s gold jewellery valued at ₹4.95 lakh was stolen while they paused to buy vada pav after retrieving it from a bankpic.twitter.com/VKRll2OWpb
ಬ್ಯಾಗ್​ನಲ್ಲಿ ಬ್ಯಾಂಕ್​ ದಾಖಲೆಗಳು ಮತ್ತು ಅವರ ಮೊಬೈಲ್ ಫೋನ್ ಕೂಡ ಇತ್ತು. ದಂಪತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅದಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಳ್ಳನ ಕುತಂತ್ರವನ್ನು ಕೆಲವು ಟೀಕಿಸಿದರೆ, ಆ ಕಳ್ಳ ಅವರನ್ನು ಬ್ಯಾಂಕ್​ನಿಂದಲೇ ಹಿಂಬಾಲಿಸಿ ಬಂದಿದ್ದಾನೆ, ಇದು ಆ ದಂಪತಿಯ ನಿರ್ಲಕ್ಷ್ಯ ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಸ್ತೆಬದಿಯಲ್ಲಿ ಬೈಕ್​ ನಿಲ್ಲಿಸಿ ತಾಯಿಯೊಂದಿಗೆ ಮಾತನಾಡುತ್ತಿದ್ದ ಮಗನನ್ನು ಹಗಲಲ್ಲೆ ಹತ್ಯೆ ಮಾಡಲು ಯತ್ನಿಸಿದ ವಿಡಿಯೋವೊಂದು ವೈರಲ್​ ಆಗಿತ್ತು. ಯಾವುದೇ ಭಯವಿಲ್ಲದೆ ನಡುರಸ್ತೆಯಲ್ಲಿ ಅದರಲ್ಲೂ ಹಗಲಿನ ಹೊತ್ತಿನಲ್ಲಿಯೇ ಹತ್ಯೆ ಮಾಡಲು ಯತ್ನಿಸುವುದು ಹಾಗೂ ಕಳ್ಳತನ ಮಾಡುವುದು ನೋಡಿದರೆ ಯಾವ ರೀತಿ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಆತಂಕವಾಗುತ್ತದೆ. ಈ ವೈರಲ್​ ವಿಡಿಯೋಗಳನ್ನು ನೋಡಿ ನಾವೆಷ್ಟು ಎಚ್ಚರದಿಂದಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. (ಏಜೆನ್ಸೀಸ್​​)
ಕಂಗನಾ ಅಭಿನಯದ ‘ಎಮರ್ಜೆನ್ಸಿ’ ತಡೆಯುವಂತೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ; ನ್ಯಾಯಾಲಯ ಹೇಳಿದಿಷ್ಟು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
