ಲಖನೌ:ಕಳ್ಳತನ ಮಾಡಿದ ನಂತರ, ಎಷ್ಟು ಕದ್ದಿದ್ದೇವೆ ಎಂದು ಎಣಿಕೆ ಮಾಡುವಾಗ ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಣ ಸಿಕ್ಕಿರುವುದು ತಿಳಿದು ಕಳ್ಳನಿಗೇ ಹಾರ್ಟ್​ ಅಟ್ಯಾಕ್​ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಘಟನೆ ಇದೀಗ ಕಳ್ಳರು ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಹೊರಬಿದ್ದಿದೆ.
ಫೆಬ್ರವರಿ 16ರ ರಾತ್ರಿ ಬಿಜ್ನೋರ್​ ಜಿಲ್ಲೆಯ ಸಾಮಾಜಿಕ ಸೇವಾ ಕೇಂದ್ರದಲ್ಲಿ ಕಳ್ಳತನವಾಗಿತ್ತು. ಸುಮಾರು 7 ಲಕ್ಷ ರೂಪಾಯಿ ಹಣ ಅಲ್ಲಿಂದ ಕಳ್ಳತನವಾಗಿದ್ದಾಗಿ ತಿಳಿಸಲಾಗಿದೆ. ಇಬ್ಬರು ಕಳ್ಳರು ಕಳ್ಳತನ ಮಾಡಿದ್ದರು. ಆದರೆ ಅಷ್ಟೊಂದು ಹಣ ಸಿಗುತ್ತದೆ ಎನ್ನುವ ನಿರೀಕ್ಷೆ ಒಬ್ಬ ಕಳ್ಳನಿಗೆ ಇರಲಿಲ್ಲವಂತೆ. ಮನೆಗೆ ದುಡ್ಡು ತಂದು ಅದನ್ನು ಎಣಿಸಿದಾಗ 7 ಲಕ್ಷ ರೂಪಾಯಿ ಇರುವುದು ಗೊತ್ತಾಗಿದೆ. ಭಾರೀ ಪ್ರಮಾಣದ ಹಣ ಕಂಡವನಿಗೆ ಹೃದಯಾಘಾತವಾಗಿದೆ. ಅದಾದ ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕದ್ದ ಹಣದಲ್ಲಿಯೇ ಚಿಕಿತ್ಸೆ ಕೊಡಿಸಲಾಗಿದೆ.
ಇತ್ತೀಚೆಗೆ ಆ ಇಬ್ಬರು ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಅವರು ನಡೆದ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಕಳ್ಳರನ್ನು ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. (ಏಜೆನ್ಸೀಸ್​)
ಬುರ್ಜ್ ಖಲೀಫಾದಲ್ಲಿ ಬ್ರೇಕ್​​ಫಾಸ್ಟ್, ಗೋಲ್ಡನ್ ಕಾಫಿ !

ಕೆಲ್ಸದಿಂದ ಮನೆಗೆ ಬಂದವನು ಪತ್ನಿಗಾಗಿ ಹುಡುಕಾಡುವಾಗ ಕಾದಿತ್ತು ಶಾಕ್​: ಇದು ಅತಿ ಕೆಟ್ಟ ಅಕ್ರಮ ಸಂಬಂಧವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
