ಪ್ರಯಾಗ್​ರಾಜ್​:ವಿಲಕ್ಷಣ ಘಟನೆಯೊಂದರಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಮೇಕೆಯನ್ನು ಕದ್ದು ವೇಗವಾಗಿ ಪರಾರಿಯಾಗಿರುವ ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಫ್ರೀ; ಧರ್ಮಸ್ಥಳ, ಕುಕ್ಕೆ ಕ್ಷೇತ್ರದಲ್ಲಿ ಜನವೋ ಜನ!
ಕಸರಿಮಸಾರಿ ಪ್ರದೇಶದಲ್ಲಿ ವಾಸವಾಗಿರುವ ಮನ್ಸೂರ್​ ಅಲಿ ಎಂಬುವರಿಗೆ ಸೇರಿದ್ದ ಮೇಕೆಯನ್ನು ಮನೆಯ ಹೊರಗಿನ ಗೇಟಿಗೆ ಕಟ್ಟಲಾಗಿತ್ತು. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಐಷಾರಾಮಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಕಾರಿನಿಂದ ಹೊರಬಂದು ಮೇಕೆಯನ್ನು ಕದ್ದಿದ್ದಾರೆ.
ಕೂಡಲೇ ಮನೆಯ ಮಾಲೀಕ ಮನ್ಸೂರ್ ಆಲಂ ಹಾಗೂ ಸ್ಥಳೀಯರು ಕಾರನ್ನು ಬೆನ್ನಟ್ಟಿದ್ದಾರೆ. ಆದರೆ ಕಳ್ಳರು ರಸ್ತೆ ಕ್ರಾಸ್​ ಮಾಡಿದ್ದರಿಂದ ಅವರನ್ನು ಹಿಡಿಯಲು ಮನ್ಸೂರ್​ ವಿಫಲರಾಗಿದ್ದಾರೆ. ಮನ್ಸೂರ್ ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳ್ಳರ ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೇಕೆಯನ್ನು ಕದ್ದ ಕಾರು ವೇಗವಾಗಿ ಚಲಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಮೇಕೆಯ ಮಾಲೀಕರು ಈ ಕುರಿತು ದೂರು ದಾಖಲಿಸಿದ್ದು, ತನಿಖೆಯ ನಂತರ ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಧುಮನಗಂಜ್ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 20 =
Remember me
