ಒಂದು ಮನೆಗೆ ನುಗ್ಗಿದ ಕಳ್ಳರು, ಅಲ್ಲಿ ಮಟನ್​ ಮತ್ತು ಅನ್ನ ತಯಾರಿಸಿ ಭರ್ಜರಿಯಾಗಿ ಊಟ ಮಾಡಿ, ನಂತರ ಮನೆಯಲ್ಲಿದ್ದ 50,000 ರೂ.ನಗದು ಮತ್ತು ಅಪಾರ ಪ್ರಮಾಣದ ಚಿನ್ನಾಭರಣವನ್ನು ಕದ್ದಿದ್ದಾರೆ.
ಇಂಥದ್ದೊಂದು ವಿಚಿತ್ರ ಘಟನೆ ನಡೆದಿದ್ದು ಜಾರ್ಖಂಡದ ಜೆಮ್​ಶೆಡ್​ಪುರದಲ್ಲಿ. ಹಲುದ್​​ಬೋನಿ ಏರಿಯಾದಲ್ಲಿರುವ ಕೊವಿಡ್​-19 ರೋಗಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬಾಗಿಲನ್ನು ಒಡೆದು ಮನೆಯೊಳಗೆ ಹೋಗಿ, ಮಟನ್​, ಚಪಾತಿ, ಅನ್ನ ತಯಾರಿಸಿಕೊಂಡು, ಹೊಟ್ಟೆತುಂಬ ತಿಂದಿದ್ದಾರೆ. ಬಳಿಕ ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.ಇದನ್ನೂ ಓದಿ:ಸೆಪ್ಟಂಬರ್​ನಲ್ಲಿ ಶುರುವಾಗುತ್ತಾ ಶಾಲೆ; ಸಚಿವ ಸುರೇಶ್‌ಕುಮಾರ್ ಹೇಳಿದ್ದೇನು?
ಕೊವಿಡ್​-19 ಸೋಂಕಿಗೆ ಒಳಗಾಗಿದ್ದ ಮನೆಯ ಮಾಲೀಕ ಚಿಕಿತ್ಸೆಗಾಗಿ ಟಾಟಾ ಮೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಡ್ಮಿಟ್ ಆಗಿದ್ದರು. ಆ ಮನೆ ಸುತ್ತಲೂ ಸೀಲ್​ಡೌನ್​ ಆಗಿದ್ದರಿಂದ ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಇಡೀ ಏರಿಯಾವನ್ನು ಕಂಟೇನ್​ಮೆಂಟ್​ ಝೋನ್​ ಎಂದು ಘೋಷಿಸಲಾಗಿತ್ತು. ಅದೆಲ್ಲವನ್ನೂ ಮೀರಿ ಮನೆಗೆ ನುಗ್ಗಿದ ಕಳ್ಳರು, ಹರಿತ ಆಯುಧಗಳನ್ನು ಉಪಯೋಗಿಸಿ ಮನೆಯ ಬೀಗ ಒಡೆದಿದ್ದಾರೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. (ಏಜೆನ್ಸೀಸ್​)
ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಾಳೆಯಿಂದ ‘ಕೊವಾಕ್ಸಿನ್’ ಲಸಿಕೆ​ ಮಾನವರ ಮೇಲಿನ ಪ್ರಯೋಗ ಪ್ರಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
