ಜೈಪುರ:ಕೆಲವೇ ತಿಂಗಳ ಹಿಂದೆ ಖರೀದಿಸಿದ್ದ ಖಾಲಿ ನಿವೇಶನದಿಂದ ಪಕ್ಕದಲ್ಲೇ ಇದ್ದ ವೈದ್ಯನ ಬಂಗಲೆಗೆ ಸುರಂಗ ಕೊರೆದಿರುವ ಖದೀಮರು ಬೆಳ್ಳಿಯ ಪೆಟ್ಟಿಗೆಯನ್ನು ಕಳುವು ಮಾಡಿರುವ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ. ಇಡೀ ಘಟನೆ ಥೇಟ್​ ಹಾಲಿವುಡ್​ ಕ್ರೈಂ ಥ್ರಿಲ್ಲರ್​ ಸಿನಿಮಾದಂತೆಯೇ ನಡೆದಿದೆ.
ಪೊಲೀಸ್​ ಮೂಲಗಳ ಪ್ರಕಾರ ಜೈಪುರದ ವೈಶಾಲಿ ನಗರದ ನಿವಾಸಿ ಡಾ. ಸುನಿತ್​ ಸೊನಿ ಬುಧವಾರ (ಫೆ.24) ದೂರೊಂದನ್ನು ನೀಡಿದ್ದರು. ಪಕ್ಕದಲ್ಲೇ ಇದ್ದ ಖಾಲಿ ನಿವೇಶನದಿಂದ ಖದೀಮರು ತನ್ನ ನಿವಾಸದ ಬೇಸ್​ಮೆಂಟ್​ಗೆ ಸುರಂಗ ಕೊರೆದು ಬಾಕ್ಸ್​ ಒಂದರಲ್ಲಿ ಇಟ್ಟಿದ್ದ ಭಾರೀ ಪ್ರಮಾಣದ ಬೆಳ್ಳಿಯನ್ನು ಕದ್ದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿರಿ:ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​
ಇದಾದ ಬಳಿಕ ಪ್ರಕರಣ ತನಿಖೆ ನಡೆಸಿದ ಪೊಲೀಸರಿ ಸಂಪೂರ್ಣ ಮಾಹಿತಿ ದೊರಕಿದೆ. ಕೃತ್ಯವು ಪೂರ್ವ ನಿಯೋಜಿತ ಎಂದು ತಿಳಿದುಬಂದಿದೆ. ಕಳ್ಳತನ ಮಾಡಲೆಂದೇ ಡಾಕ್ಟರ್​ ಮನೆಯ ಪಕ್ಕದ ಖಾಲಿ ನಿವೇಶನವನ್ನು ಖದೀಮರು 90 ಲಕ್ಷಕ್ಕೆ ಖರೀದಿಸಿದ್ದರು. ಇದಾದ ಬಳಿಕ ವೈದ್ಯನ ಬೇಸ್​ಮೆಂಟ್​ವರೆಗೆ ಸುರಂಗ ಕೊರೆದು ತನ್ನ ಕಾರ್ಯ ಸಾಧಿಸಿದ್ದಾರೆ.
ಇನ್ನು ಪೆಟ್ಟಿಗೆಯಲ್ಲಿ ಬೆಳ್ಳಿ ಇರುವ ಬಗ್ಗೆ ಮೊದಲೇ ತಿಳಿದಿದ್ದ ವೈದ್ಯರ ಆಪ್ತರಲ್ಲಿ ಯಾರಾದರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ.
ಈ ಬಗ್ಗೆ ಮಾತನಾಡಿರುವ ವೈಶಾಲಿ ನಗರ ಎಸಿಪಿ ರಾಯ್​ ಸಿಂಗ್​ ಬೆನಿವಾಲ್​, ತನಿಖೆ ಆರಂಭಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ. ಕೆಲವು ಶಂಕಿತರನ್ನು ಪಟ್ಟಿ ಮಾಡಿದ್ದು, ಶೀಘ್ರದಲ್ಲೇ ಪ್ರಕರಣಕ್ಕೆ ಅಂತ್ಯ ಹಾಡಲಿದ್ದೇವೆಂದು ತಿಳಿಸಿದರು.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಇದನ್ನೂ ಓದಿರಿ:ಕೋಳಿಪಡೆ ಆಡಲು ಬಂದವನನ್ನು ಕೊಂದು ಪೊಲೀಸ್​ ಠಾಣೆ ಸೇರಿದ ಕೋಳಿ!
ಅಪ್ಪ ಮಗನಿಂದಲೇ ನಡೆಯಿತು ಗ್ಯಾಂಗ್​ ರೇಪ್​! ಕಾಮದಾಸೆ ತೀರಿಸಿಕೊಂಡು ಮಹಿಳೆಗೆ ಬೆಂಕಿ ಹಚ್ಚಿದ ಪಾಪಿಗಳು

ಪಬ್​ಜಿ ಆಡುವಾಗ ಅರಳಿದ ಪ್ರೀತಿ: ಪ್ರಿಯಕರನನ್ನು ಹುಡುಕಿ ಹೊರಟ ವಿವಾಹಿತೆಗೆ ಕಾದಿತ್ತು ಬಿಗ್​ ಶಾಕ್​!

ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nineteen =
Remember me
