ಮಧ್ಯಪ್ರದೇಶ:ರೈತರೊಬ್ಬರ ಮನೆಗೆ ರಾತ್ರಿ ವೇಳೆ ನುಗ್ಗಿದ ಖದೀಮರು, ಕುಟುಂಬದವರು ಮಲಗಿದ್ದ ಸಮಯ ನೋಡಿ ಬೀರು ಕದ್ದು ಸ್ಥಳದಿಂದ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು…
ಕಳ್ಳರು 55 ಲಕ್ಷ ರೂ. ನಗದು, ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳಿದ್ದ ಬೀರುವನ್ನು ಕದ್ದೊಯ್ದಿರುವ ಘಟನೆ ಊರಿನ ಗ್ರಾಮಸ್ಥರನ್ನು ಅಚ್ಚರಿಗೆ ದೂಡಿದೆ. ಚಿಕ್ಲಿ ಗ್ರಾಮದಲ್ಲಿ ರೈತನ ಕುಟುಂಬದ 10 ಮಂದಿ ಮನೆಯೊಳಗೆ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಪೂರ್ವ ತಯಾರಿ ಮಾಡಿಕೊಂಡು ಕಳ್ಳರು ಮನೆಗೆ ನುಗ್ಗಿದ್ದಾರೆ ಎಂದು ಶಂಕಿಸಲಾಗಿದೆ. ಖದೀಮರು ಎಲ್ಲಿಯೂ ಕೂಡ ಕಬೋರ್ಡ್​ ಮುರಿಯದೆ ಜಾಣ್ಮೆಯಿಂದ ಲಪಟಾಯಿಸಿದ್ದಾರೆ.
ಮನೆಯಿಂದ ಕದ್ದ ಬೀರುವನ್ನು ಸ್ವಲ್ಪ ದೂರದಲ್ಲಿದ್ದ ಹೊಲಕ್ಕೆ ಕೊಂಡೊಯ್ದು, ಬಾಗಿಲನ್ನು ಮುರಿದು ಒಳಗಿದ್ದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. “ದರೋಡೆಕೋರರ ವಿರುದ್ಧ ನಾವು ಪ್ರಕರಣವನ್ನು ದಾಖಲಿಸಿಕೊಂಡು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಆಕಾಶ್ ಭೂರಿಯಾ ಹೇಳಿದ್ದಾರೆ,(ಏಜೆನ್ಸೀಸ್).
VIDEO | ಹೆಚ್ಚಾಯ್ತು ರೈಲಿನೊಳಗೆ ರೀಲ್ಸ್ ಮಾಡುವವರ​ ಹಾವಳಿ; ಯುವತಿಯ ಡ್ಯಾನ್ಸ್​ ನೋಡಿ ನೆಟ್ಟಿಗರು ಕೆಂಡಾಮಂಡಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
