ನವದೆಹಲಿ:ರಷ್ಯಾ-ಯೂಕ್ರೇನ್​ ಯುದ್ಧದಿಂದಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ಭಾರತದ ಹಲವರು ಯೂಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮತ್ತೊಂದೆಡೆ ಯೂಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಒಂದಷ್ಟು ಸಲಹೆಗಳನ್ನು ನೀಡಿದೆ. ಯೂಕ್ರೇನ್​ನಲ್ಲಿರುವ ಭಾರತೀಯ ಪ್ರಜೆಗಳು ತಮ್ಮ ಸುತ್ತಮುತ್ತಲ ವಾತಾವರಣದ ಕುರಿತು ಎಚ್ಚರಿಕೆಯಿಂದಿರಿ ಎಂಬ ಕಿವಿಮಾತಿನೊಂದಿಗೆ ಒಂದಷ್ಟು ಮಾರ್ಗದರ್ಶನವನ್ನೂ ಮಾಡಿದೆ.
ಎಲ್ಲರೂ ಎಚ್ಚರಿಕೆಯಿಂದಿರಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ, ಯಾವುದಕ್ಕೂ ನಿಮ್ಮೊಂದಿಗೆ ಎಲ್ಲ ದಾಖಲೆಗಳನ್ನು ಇಟ್ಟುಕೊಂಡಿರಿ. ಇನ್ನು ಕೆಲವು ಪ್ರದೇಶಗಳಲ್ಲಿ ಬಾಂಬ್​ ದಾಳಿ ಎಚ್ಚರಿಕೆ ಸಂದೇಶಗಳೂ ಇವೆ. ಹೀಗಾಗಿ ಗೂಗಲ್ ಮ್ಯಾಪ್​ ನೆರವಿನಿಂದ ಹತ್ತಿರದ ಬಾಂಬ್​ ಶೆಲ್ಟರ್​ಗಳ ಬಗ್ಗೆ ತಿಳಿದುಕೊಂಡಿರಿ ಎಂದೂ ಅದು ಸಲಹೆಯನ್ನು ರವಾನಿಸಿದೆ. ಗೂಗಲ್​ ಮ್ಯಾಪ್​ ಬಾಂಬ್​ ಶೆಲ್ಟರ್​ಗಳ ಮಾಹಿತಿ ನೀಡುತ್ತಿದ್ದು, ಅವುಗಳಲ್ಲಿ ಬಹುತೇಕವು ಅಂಡರ್​​​ಗ್ರೌಂಡ್​ ಮೆಟ್ರೋಗಳಲ್ಲಿವೆ ಎಂಬ ಮಾರ್ಗದರ್ಶನವನ್ನೂ ಮಾಡಿದೆ.
ಭಾರತೀಯ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ 18 ಸಾವಿರ ಭಾರತೀಯರು ಯೂಕ್ರೇನ್​​ನಲ್ಲಿ ಸಿಲುಕಿಕೊಂಡಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ಕರೆಸಿಕೊಳ್ಳುವ ಕುರಿತ ಪ್ರಯತ್ನ ಜಾರಿಯಲ್ಲಿ ಇರುವುದಾಗಿ ಅದು ಹೇಳಿಕೊಂಡಿದೆ.
Third Advisory to all Indian Nationals/Students in Ukraine.@MEAIndia@PIB_India@PIBHindi@DDNewslive@DDNewsHindi@DDNational@PMOIndiapic.twitter.com/naRTQQKVyS— India in Ukraine (@IndiainUkraine)February 24, 2022
Third Advisory to all Indian Nationals/Students in Ukraine.@MEAIndia@PIB_India@PIBHindi@DDNewslive@DDNewsHindi@DDNational@PMOIndiapic.twitter.com/naRTQQKVyS
ರೇಪ್​ ಮಾಡಿದ್ರು ಅಂತ ಸುಳ್ಳು ಹೇಳಿದ ವಿದ್ಯಾರ್ಥಿನಿ; ಇನ್​ಸ್ಟಾಗ್ರಾಮ್​ನಲ್ಲಿ 5 ಅಕೌಂಟ್​ ಹೊಂದಿದ್ದವಳಿಂದ ಕಟ್ಟುಕತೆ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − ten =
Remember me
