ನವದೆಹಲಿ:ಮಾಜಿ ಕ್ರಿಕೆಟ್​ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್​ಗೆ ‘ಐಸಿಸ್​ ಕಾಶ್ಮೀರ್​’ ಉಗ್ರ ಸಂಘಟನೆಯಿಂದ ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ ಬಂದಿದೆ. ಇ-ಮೇಲ್​ ಮೂಲಕ ಗಂಭೀರ್​ ಮತ್ತು ಅವರ ಕುಟುಂಬಕ್ಕೆ ನೀಡಲಾಗಿರುವ ಇಂದಿನ ಬೆದರಿಕೆಯಲ್ಲಿ “ದೆಹಲಿ ಪೊಲೀಸ್​ ಮತ್ತು (ಡಿಸಿಪಿ) ಶ್ವೇತ ಚೌಹಾನ್​ ಏನೂ ಮಾಡಲು ಸಾಧ್ಯವಿಲ್ಲ” ಎಂದು ಬರೆದಿದೆ ಎನ್ನಲಾಗಿದೆ.
ಪೂರ್ವ ದೆಹಲಿಯ ಲೋಕಸಭಾ ಸದಸ್ಯ ಗೌತಮ್​ ಗಂಭೀರ್​ ನ.23 ರ ರಾತ್ರಿ ಈ ಬಗ್ಗೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅವರ ದೆಹಲಿಯ ರಾಜೇಂದ್ರ ನಗರದ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ‘ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ತನಿಖೆ ಆರಂಭಿಸಲಾಗಿದೆ’ ಎಂದು ಡಿಸಿಪಿ ಶ್ವೇತ ಚೌಹಾನ್​ ತಿಳಿಸಿದ್ದರು.
ಕೆಲವು ದಿನಗಳ ಹಿಂದೆ ಗಂಭೀರ್​ಗೆ ಪಾಕಿಸ್ತಾನಿ ಪುರುಷನೊಬ್ಬನಿಂದಲೂ ಇದೇ ರೀತಿಯ ಬೆದರಿಕೆ ಸಂದೇಶಗಳು ಬಂದಿದ್ದವು ಎನ್ನಲಾಗಿದೆ.(ಏಜೆನ್ಸೀಸ್)
ವರ್ಷದಲ್ಲಿ 39 ಬಾರಿ ಆ್ಯಂಬುಲೆನ್ಸ್​​​ ಕರೆಸಿಕೊಂಡ! ಕಾರಣ ತಿಳಿದು ದಂಗಾದರು

ತ್ರಿಪುರಾದಲ್ಲಿ ಬಿಜೆಪಿಗೆ ಭಾರೀ ಜಯ; 100% ವಶವಾದ ಅಗರ್ತಲ ನಗರಪಾಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
