ನವದೆಹಲಿ:ಜಗತ್ತಿನ ಹಲವು ಭಾಗಗಳಲ್ಲಿ ಕರೊನಾ ಸೋಂಕು ಮತ್ತೆ ತೀವ್ರಗೊಳ್ಳುತ್ತಿರುವುದರಿದ ದೇಶದ ಎಲ್ಲ ವಯಸ್ಕರಿಗೆ ಲಸಿಕೆಯ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಮೂರನೇ ಡೋಸ್ ಇಲ್ಲದೆ ವಿದೇಶಗಳಿಗೆ ತೆರಳುವುದು ಕೆಲವು ಭಾರತೀಯರಿಗೆ ಕಷ್ಟವಾಗುತ್ತಿರುವುದು ಕೂಡ ಬೂಸ್ಟರ್ ಡೋಸ್ ಚಿಂತನೆಗೆ ಪ್ರೇರಣೆಯಾಗಿದೆ. ಸದ್ಯಕ್ಕೆ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ. ಇತರರಿಗೂ ಉಚಿತವಾಗಿ ಬೂಸ್ಟರ್ ಡೋಸ್ ನೀಡಬೇಕೇ ಎಂದು ಸರ್ಕಾರ ರ್ಚಚಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಚೀನಾದಲ್ಲಿ ಲಕ್ಷಾಂತರ ಜನರು ಲಾಕ್: ಚೀನಾದಲ್ಲಿ ಕೋವಿಡ್ ಸೋಂಕು ಉಲ್ಬಣವಾಗುತ್ತಿದ್ದು ಅನೇಕ ನಗರಗಳಲ್ಲಿ ಹತ್ತಾರು ಲಕ್ಷ ಜನರನ್ನು ಲಾಕ್​ಡೌನ್​ಗೆ ಒಳಪಡಿಸಲಾಗಿದೆ. ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೋಂಕಿನ ದೊಡ್ಡ ಪ್ರಮಾಣದ ಆಸ್ಪೋಟದಿಂದಾಗಿ ಚೀನಾ ತತ್ತರಿಸಿದ್ದು, ಈಶಾನ್ಯದ ಅನೇಕ ಮಹಾ ನಗರಗಳಲ್ಲಿ ಲಾಕ್​ಡೌನ್ ಜಾರಿಗೊಳಿಸಿದೆ. ಜಿಲಿನ್ ನಗರದಲ್ಲೇ ಸುಮಾರು 45 ಲಕ್ಷ ನಿವಾಸಿಗಳು ಮನೆಯೊಳಗೇ ನಿರ್ಬಂಧಿತರಾಗಿದ್ದಾರೆ. ದೇಶದಲ್ಲಿ ಭಾನುವಾರ 4,000ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಚಾಂಗ್​ಚುನ್ ಪ್ರಾಂತ್ಯದ ರಾಜಧಾನಿಯಲ್ಲಿ ಕೂಡ ಮೂರು ದಿನ ನಿರ್ಬಂಧಗಳನ್ನು ವಿಧಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಭಾರತದಲ್ಲಿ ಒಂದೂವರೆ ಸಾವಿರಕ್ಕಿಳಿದ ಕೇಸ್:ದೇಶದಲ್ಲಿ ಕರೊನಾ ಸೋಂಕು ಕ್ಷೀಣಿಸಿದ್ದು ಸೋಮವಾರ ಬೆಳಿಗ್ಗೆ ಅಂತ್ಯಗೊಂಡ ಒಂದು ದಿನದ ಅವಧಿಯಲ್ಲಿ 1,549 ಹೊಸ ಕೇಸ್​ಗಳು ದೃಢಪಟ್ಟಿವೆ. 31 ರೋಗಿಗಳು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 25,106ಕ್ಕೆ ಇಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಧಿಕ ರಕ್ಷಣೆ ನೀಡುವ ಲಸಿಕೆ:ಫೈಜರ್-ಬಯೋಎನ್​ಟೆಕ್ ಅಥವಾ ಮಾಡರ್ನಾ ಎಂಆರ್​ಎನ್​ಎ-ಆಧಾರಿತ ಲಸಿಕೆ ಪಡೆದವರಲ್ಲಿ ಬಿಎ.1 ಅಥವಾ ಬಿಎ.2 ಪ್ರಭೇದದ ಕರೊನಾ ಸೋಂಕಿತರಲ್ಲಿ ಅನೇಕ ತಿಂಗಳ ಕಾಲ ಗಣನೀಯ ರಕ್ಷಣೆ ಸಿಗುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 2 =
Remember me
